ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಕಾ ಕೋಲಾ ಕಂಪನಿಯಿಂದ 2,200 ಮಂದಿಗೆ ಕೊಕ್!

|
Google Oneindia Kannada News

ಬೆಂಗಳೂರು, ಡಿ. 18: ಜನಪ್ರಿಯ ತಂಪು ಪಾನೀಯ ಕೋಕಾ ಕೋಲಾ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ, ಕೊವಿಡ್ 19 ಹೊಡೆತಕ್ಕೆ ಸಿಲುಕಿ ತತ್ತರಿಸಿರುವ ಜಾಗತಿಕ ದೈತ್ಯ ಸಂಸ್ಥೆ ಈಗ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಅಮೆರಿಕ ಸೇರಿದಂತೆ ವಿಶ್ವದೆಲ್ಲೆಡೆ 2,200 ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಸೋಡಾ ಉತ್ಪದನಾ ಸಂಸ್ಥೆ ಹೇಳಿದೆ.

ಕೊವಿಡ್ 19 ನಿರ್ಬಂಧದಿಂದಾಗಿ ಚಿತ್ರಮಂದಿರ, ರಂಗಮಂದಿರ, ವಾಣಿಜ್ಯ ಮಳಿಗೆ, ಬಾರ್, ಸ್ಟೇಡಿಯಂಗಳು ಇನ್ನೂ ಪೂರ್ಣವಾಗಿ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಭಾರತದಲ್ಲಿ ನಿರ್ಬಂಧಿತ ಪ್ರವೇಶ ಒದಗಿಸಲಾಗುತ್ತಿದೆ.

ಕೆಫೆ ಕಾಫಿ ಡೇ ಖರೀದಿ ಮಾತುಕತೆಯಲ್ಲಿ ಕೋಕಾ ಕೋಲಾಕೆಫೆ ಕಾಫಿ ಡೇ ಖರೀದಿ ಮಾತುಕತೆಯಲ್ಲಿ ಕೋಕಾ ಕೋಲಾ

ಆದರೆ, ಕೋಕಾ ಕೋಲಾ ಈಗಾಗಲೇ ಆರ್ಥಿಕ ಹೊಡೆತದಿಂದ ತತ್ತರಿಸಿದ್ದು, ಹಲವಾರು ಮಂದಿಯನ್ನು ಮನೆಗೆ ಕಳಿಸಿದೆ. ಈಗ ಮತ್ತೊಮ್ಮೆ ಶೇ 2.5ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ವರ್ಷಾರಂಭದಲ್ಲಿ ಯುಎಸ್ ನಲ್ಲಿ 10, 400 ಮಂದಿ ಸೇರಿದಂತೆ ಜಾಗತಿಕವಾಗಿ 86,200 ಸಿಬ್ಬಂದಿಯನ್ನು ಸಂಸ್ಥೆ ಹೊಂದಿತ್ತು.

Coca-Cola to cut 2,200 jobs worldwide

''ಸಂಸ್ಥೆಯು ಆರ್ಥಿಕ ಸುಧಾರಣೆಯ ಹಂತದಲ್ಲಿದ್ದು, ಗ್ರಾಹಕ ಅಗತ್ಯಕ್ಕೆ ತಕ್ಕಂತೆ ಸಾಂಸ್ಥಿಕ ಪುನರ್ ರಚನೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬದಲಾವಣೆಗೆ ಸಾಂಕ್ರಾಮಿಕ ಕಾರಣ ಎನ್ನಲಾಗದು, ಇದು ಸಂಸ್ಥೆಯ ವೇಗ ಹೆಚ್ಚಳಕ್ಕೆ ಉತ್ಕರ್ಷವಾಗಿ ಪರಿಣಮಿಸಿದೆ'' ಎಂದು ಸಂಸ್ಥೆ ಹೇಳಿದೆ.

ಕೋಕಾ ಕೋಲಾ ಷೇರುಗಳು ಕಳೆದ ಒಂದು ವರ್ಷದಲ್ಲಿ ಶೇ 3.8ರಷ್ಟು ಕುಸಿತ ಕಂಡಿವೆ. ಗುರುವಾರದಂದು ನ್ಯೂಯಾರ್ಕ್ 1% ಚೇತರಿಕೆ ಕಂಡಿತ್ತು. ಉದ್ಯೋಗ ಕಡಿತದಿಂದ 350 ರಿಂದ 550 ಮಿಲಿಯನ್ ಡಾಲರ್ ಉಳಿತಾಯವಾಗಲಿದೆ ಎಂಬ ವರದಿಯಿದೆ.

English summary
Coca-Cola Co deepens its restructuring efforts and announced job cuts around 2,200 jobs worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X