ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಸ್ಟಾ ಕಾಫಿಯನ್ನು ಖರೀದಿಸಿದ ಕೋಕಾ ಕೋಲಾ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 31: ಸ್ಟಾರ್ ಬಕ್ಸ್ ಹಾಗೂ ನೆಸ್ಲೆ ಒಪ್ಪಂದ ಸುದ್ದಿಯ ಬೆನ್ನಲ್ಲೇ ಯುಕೆಯ ಅತಿದೊಡ್ಡ ಕಾಫಿ ಕಂಪನಿ ವೈಟ್ ಬ್ರೆಡ್ ಒಡೆತನದ ಕೋಸ್ಟಾ ಕಾಫಿ ಬ್ರ್ಯಾಂಡನ್ನು ಖರೀದಿಸುತ್ತಿರುವುದಾಗಿ ಅಮೆರಿಕ ಸಾಫ್ಟ್ ಡ್ರಿಂಕ್ಸ್ ದೈತ್ಯ ಕೋಕಾ ಕೋಲಾ ಘೋಷಿಸಿದೆ.

ಸುಮಾರು 5.1 ಬಿಲಿಯನ್ ಡಾಲರ್ ಡೀಲ್ ಇದಾಗಿದೆ. ಯುಕೆಯಲ್ಲಿ ಸುಮಾರು 2,400 ಕಾಫಿ ಮಳಿಗೆ ಹಾಗೂ 32 ದೇಶಗಳಲ್ಲಿ 1,400ಕ್ಕೂ ಅಧಿಕ ಕೆಫೆಗಳನ್ನು ಕೋಸ್ಟಾ ಕಾಫಿ ಹೊಂದಿದೆ. ಈ ಒಪ್ಪಂದ 2019ರ ಪೂರ್ವಾರ್ಧದಲ್ಲಿ ಸಂಪೂರ್ಣವಾಗುವ ನಿರೀಕ್ಷೆಯಿದೆ.

 Coca-Cola buys Costa coffee chain for $5.1 billion

ಕೋಕಾ ಕೋಲಾ ಮಡಿಲಲ್ಲಿ ಜಾರ್ಜಿಯಾ ಹಾಗೂ ಗೋಲ್ಡ್ ಪೀಕ್ ಕಾಫಿ ಬ್ರ್ಯಾಂಡ್ ಗಳನ್ನು ಹೊಂದಿದೆ. ಬಿಸಿ ಪಾನೀಯ ಕ್ಷೇತ್ರದಲ್ಲಿ ಕೋಕಾ ಕೋಲಾ ತನ್ನ ಪ್ರಭುತ್ವ ಸಾಧಿಸಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಕೋಕಾಕೋಲಾದ ಅಧ್ಯಕ್ಷ ಹಾಗೂ ಸಿಇಒ ಜೇಮ್ಸ್ ಕ್ವಿನ್ಸೆ ಹೇಳಿದ್ದಾರೆ.

ಸ್ಟಾರ್ ಬಕ್ಸ್ ಜತೆ ಡೀಲ್ ಕುದುರಿಸಿದ ಸ್ವಿಸ್ ದೈತ್ಯ 'ನೆಸ್ಲೆ' ಸ್ಟಾರ್ ಬಕ್ಸ್ ಜತೆ ಡೀಲ್ ಕುದುರಿಸಿದ ಸ್ವಿಸ್ ದೈತ್ಯ 'ನೆಸ್ಲೆ'

ತಂಪು ಪಾನೀಯ, ಕ್ರೀಡಾ ಪಾನೀಯ ಸೇರಿದಂತೆ ಸುಮಾರು 500ಕ್ಕೂ ಅಧಿಕ ಬ್ರ್ಯಾಂಡ್ ಗಳನ್ನು ಕೋಕಾ ಕೋಲಾ ಹೊಂದಿದೆ.

1995ರಲ್ಲಿ ಕೋಸ್ಟಾ ಕಾಫಿ ಖರೀದಿಸಿದ್ದ ವೈಟ್ ಬ್ರೆಡ್ ಸಂಸ್ಥೆ, ಇತ್ತೀಚೆಗೆ ಕೋಸ್ಟಾ ಕಾಫಿ ವಿಸ್ತರಣೆಗಾಗಿ ಹೆಚ್ಚಿನ ಹೂಡಿಕೆಗೆ ಮುಂದಾಗಿತ್ತು. 123 ಮಿಲಿಯನ್ ಪೌಂಡ್ ಆದಾಯವನ್ನು ಗಳಿಸಿತ್ತು. ಕೋಕಾ ಕೋಲಾದ ಪ್ರಮುಖ ಪ್ರತಿಸ್ಪರ್ಧಿ ಪೆಪ್ಸಿ ಕೋ, ಇಸ್ರೇಲಿನ ಡಿಐವೈ ಸೆಟ್ಜರ್ ಕಂಪನಿ ಸೋಡಾ ಸ್ಟ್ರೀಮ್ ಖರೀದಿಗೆ ಮುಂದಾಗಿದೆ.

English summary
Coca Cola buys UKs Costa Coffee. Costa is Britain’s biggest coffee company with over 2,400 coffee shops in the U.K. and another 1,400 in more than 30 countries
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X