ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ ಇಂಡಿಯಾ ತ್ರೈಮಾಸಿಕ ನಿವ್ವಳ ಲಾಭ ಶೇ. 55ರಷ್ಟು ಕುಸಿತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 02: ಕೋಲ್ ಇಂಡಿಯಾವು ಜೂನ್ 21 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಒಟ್ಟು 2,077 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದ್ದು, ನಿವ್ವಳ ಲಾಭ ಶೇಕಡಾ 55ರಷ್ಟು ಕುಸಿತಗೊಂಡಿದೆ.

ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ, 4,629 ಕೋಟಿ ಲಾಭ ಕಂಡಿದ್ದ ಕೋಲ್ ಇಂಡಿಯಾ ಶೇಕಡಾ 55ರಷ್ಟು ಕುಸಿತ ಕಂಡಿದೆ. ಪರಿಶೀಲನೆಯ ತ್ರೈಮಾಸಿಕದಲ್ಲಿ ನಿವ್ವಳ ಮಾರಾಟ 17,007 ಕೋಟಿ ಆಗಿದ್ದು, ಇದು ಶೇ. 26ರಷ್ಟು ಕಡಿಮೆಯಾಗಿದೆ. ಇದೇ ತ್ರೈಮಾಸಿಕದಲ್ಲಿ ಇದು 23,223 ಕೋಟಿ.

ಆಯಿಲ್‌ ಇಂಡಿಯಾ ಲಿಮಿಟೆಡ್‌ಗೆ 249 ಕೋಟಿ ರೂಪಾಯಿ ತ್ರೈಮಾಸಿಕ ನಷ್ಟಆಯಿಲ್‌ ಇಂಡಿಯಾ ಲಿಮಿಟೆಡ್‌ಗೆ 249 ಕೋಟಿ ರೂಪಾಯಿ ತ್ರೈಮಾಸಿಕ ನಷ್ಟ

ಕೋಲ್‌ ಇಂಡಿಯಾ ಈ ತ್ರೈಮಾಸಿಕದಲ್ಲಿ 120 ದಶಲಕ್ಷ ಟನ್ ಕಲ್ಲಿದ್ದಲನ್ನು ಸರಬರಾಜು ಮಾಡಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 153.5 ದಶಲಕ್ಷ ಟನ್‌ಗಳಷ್ಟು ಹೋಲಿಸಿದರೆ ಸುಮಾರು 20% ಕಡಿಮೆ ಸರಬರಾಜು ಆಗಿದೆ.

Coal India Q1 Report: Net Profit Down 55 Percent To 2077 Crore

ಹಣಕಾಸು ವರ್ಷ 2020ಕ್ಕೆ ಹೋಲಿಸಿದರೆ ತ್ರೈಮಾಸಿಕದಲ್ಲಿ ವಿದ್ಯುತ್ ಸ್ಥಾವರಗಳಿಗೆ ಇಂಧನ ಪೂರೈಕೆ ಸುಮಾರು ಶೇಕಡಾ 30ರಷ್ಟು ಇಳಿಕೆಯಾಗಿ 102 ದಶಲಕ್ಷ ಟನ್‌ಗಳಿಗೆ ಇಳಿದಿದೆ.

ಪರಿಶೀಲನೆಯ ಅವಧಿಯಲ್ಲಿ ಇ-ಹರಾಜು ಮಾರಾಟವು 15.8 ಮಿಲಿಯನ್ ಟನ್ ಆಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ 19 ಮಿಲಿಯನ್ ಟನ್ ಮಾರಾಟವಾಗಿದೆ.

English summary
Coal India reported a consolidated net profit of Rs 2,077 crore in the first quarter ended June of FY21, a decline of 55% over that of Rs 4,629 crore in the same period last fiscal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X