ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆ: ಸೆನ್ಸೆಕ್ಸ್‌ 800ಕ್ಕೂ ಹೆಚ್ಚು ಪಾಯಿಂಟ್ಸ್‌ ಜಿಗಿತ

|
Google Oneindia Kannada News

ನವದೆಹಲಿ, ಜನವರಿ 19: ಭಾರತೀಯ ಷೇರುಪೇಟೆಯ ನಾಗಾಲೋಟ ಮುಂದುವರಿದಿದ್ದು, ಮಂಗಳವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 834 ಪಾಯಿಂಟ್ಸ್‌ ಏರಿಕೆಗೊಂಡರೆ, ನಿಫ್ಟಿ 14,500ರ ಗಡಿದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 834.02 ಪಾಯಿಂಟ್ಸ್ ಅಥವಾ ಶೇಕಡಾ 1.72ರಷ್ಟು ಏರಿಕೆಗೊಂಡು 49,398 ಪಾಯಿಂಟ್ಸ್ ದಾಖಲಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 239.85 ಪಾಯಿಂಟ್ಸ್‌ ಅಥವಾ ಶೇಕಡಾ 1.68ರಷ್ಟು ಏರಿಕೆಗೊಂಡು 14,521.15 ಪಾಯಿಂಟ್ಸ್ ತಲುಪಿದೆ.

ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್, ನಿಫ್ಟಿ ಕುಸಿತಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್, ನಿಫ್ಟಿ ಕುಸಿತ

ಇಂದಿನ ವಹಿವಾಟಿನಲ್ಲಿ 2,077 ಷೇರುಗಳು ಏರಿಕೆ ಸಾಧಿಸಿದರೆ, 861 ಷೇರುಗಳು ಕುಸಿದಿವೆ ಮತ್ತು 139 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Closing Bell: Sensex Gains 800 Points And Nifty Above 14,500

ಬಜಾಜ್ ಫಿನ್‌ಸರ್ವ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿ ಷೇರುಗಳಾಗಿದ್ದು, ಟೆಕ್ ಮಹೀಂದ್ರಾ, ಐಟಿಸಿ, ವಿಪ್ರೋ, ಎಂ ಆಂಡ್ ಎಂ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಏಷ್ಯಾದ ಮಾರುಕಟ್ಟೆಗಳು ಪ್ರತಿಬಿಂಬವಾಗಿ ಭಾರತೀಯ ಷೇರುಪೇಟೆಯು ಇಂದು ಏರಿಕೆ ದಾಖಲಿಸಿದೆ. 2020 ರಲ್ಲಿ ಚೀನಾದ ಆರ್ಥಿಕತೆಯು ಬೆಳೆಯುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಒಂದು ಎಂದು ಡೇಟಾ ತೋರಿಸಿದ ನಂತರ ಏಷ್ಯಾದ ಷೇರುಗಳು ಏರಿಕೆಯಾಗಿದೆ.

2020 ರಲ್ಲಿ ಚೀನಾದ ಆರ್ಥಿಕತೆಯು ಶೇಕಡಾ 2.3 ರಷ್ಟು ಏರಿಕೆಯಾದರೆ, ಅಮೆರಿಕಾ, ಯುರೋಪ್ ಮತ್ತು ಜಪಾನ್ ಕೊರೊನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಹೆಣಗಾಡಿದವು. ಇದರ ಹೊರತಾಗಿಯು ಚೀನಾ ಶೇಕಡಾ 2.3 ರಷ್ಟು ಏರಿಕೆಯಾಗಿದೆ ಎಂದು ಅಂಕಿ-ಅಂಶಗಳು ತೋರಿಸಿವೆ.

ಈ ಅಂಶಗಳು ನಿರಂತರ ಬಂಡವಾಳದ ಒಳಹರಿವು ಭಾರತೀಯ ಮಾರುಕಟ್ಟೆಗೆ ಆಧಾರವಾಗಿದೆ. ಶೀಘ್ರದಲ್ಲೇ ಬಂಡವಾಳದ ಒಳಹರಿವಿನ ಪ್ರವೃತ್ತಿಯಲ್ಲಿನ ಬದಲಾವಣೆಯನ್ನು ಮಾರುಕಟ್ಟೆಯು ನೋಡುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
After two days of selling market bounce back strongly with Sensex adding over 800 points and Nifty above 14,500.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X