ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಸಿಕೆ ಮೋಟರ್ಸ್ ಎಲೆಕ್ಟ್ರಿಕ್ ವಾಹನಗಳ ಅನಾವರಣ

|
Google Oneindia Kannada News

ಬೆಂಗಳೂರು ಜನವರಿ 10: ನಗರದ ನಾಗರಬಾವಿಯಲ್ಲಿ ಸಿ.ಕೆ ಮೋಟಾರ್ಸ್‌ ವತಿಯಿಂದ ಆಯೋಜಿಸಲಾಗಿದ್ದ ನೂತನ ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಸಿಕಲ್, ಎಲೆಕ್ಟ್ರಿಕ್ ಸುಪರ್‌ ಸ್ಪೀಡ್‌ ಬೈಕ್‌ ಮತ್ತು ತ್ರಿಚಕ್ರ ವಾಹನಗಳನ್ನು ಇಸ್ರೋ ನಿವೃತ್ತ ನಿರ್ದೇಶಕ, ತಮಿಳುನಾಡು ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಉಪಾಧ್ಯಕ್ಷ, ಪದ್ಮಶ್ರೀ ಹಾಗೂ ಮಂಗಳಯಾನ ಮತ್ತು ಚಂದ್ರಯಾನ 1 ರಲ್ಲಿ ಪ್ರಮುಖ ಪಾತ್ರವಹಿಸಿದ ವಿಜ್ಞಾನಿ ಡಾ. ಮಹಿಲ್ ಸ್ವಾಮಿ ಅಣ್ಣಾ ದೊರೈ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಡಾ. ಎಂ ಅಣ್ಣಾ ದೊರೈ, ''ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸೇಷನ್‌ ಮಾಡಿಕೊಳ್ಳುವಂತಹ ಅವಕಾಶ ನೀಡುವ ನೂತನ ವಿದ್ಯುತ್‌ ಚಾಲಿತ ವಾಹನಗಳು ಈ ಕ್ಷೇತ್ರದ ದಿಕ್ಕನ್ನೆ ಬದಲಾಯಿಸಲಿವೆ'' ಎಂದು ಹೇಳಿದರು.

120 ಕಿಲೋಮೀಟರ್‌ ಸ್ಪೀಡ್‌ ನಲ್ಲಿ ಚಲಾಯಿಸಬಹುದಾದ ಎಲೆಕ್ಟ್ರಿಕ್‌ ಸೂಪರ್‌ ಬೈಕನ್ನು ಪ್ರಶಂಸಿಸಿದ ಅಣ್ಣಾದೊರೈ ಅವರು, ಇಂಧನಗಳನ್ನು ಬಳಸಿ ಚಲಾವಣೆಯಾಗುತ್ತಿದ್ದ ವಾಹನಗಳಲ್ಲಿ ಹಲವಾರು ಬಗೆಯನ್ನು ನೋಡಬಹುದಾಗಿತ್ತು. ಈಗ ಅದೇ ರೀತಿಯ ವಿವಿಧ ಮಾಡೆಲ್‌ಗಳು ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದಲ್ಲೂ ಬಂದಿವೆ. ಅಲ್ಲದೆ, ಗ್ರಾಹಕರು ತಮಗೆ ಬೇಕಾದ ರೀತಿಯಲ್ಲಿ ಕಸ್ಟಮೈಸೇಷನ್‌ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿವೆ. ಇಂತಹ ಹೊಸ ಆವಿಷ್ಕಾರಗಳಿಂದ ಮುಂದಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಲಿವೆ ಎಂದರು.

ಲೀಥೀಯಂ ಅಯಾನ್‌ ಬ್ಯಾಟರಿಯ ಬದಲಾಗಿ ಉಪಗ್ರಹ ಉಡಾವಣೆಯಲ್ಲಿ ಬಳಸಲಾಗುತ್ತಿರುವ ಫ್ಯೂಯಲ್‌ ಸೆಲ್‌ಗಳನ್ನು ವಾಹನಗಳಲ್ಲಿ ಅಳವಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸಿ ಕೆ ಮೋಟಾರ್ಸ್‌ ಕಂಪನಿಯಲ್ಲಿ ಇಂತಹ ಸಂಶೋಧನೆ ಹಾಗೂ ಅಭಿವೃದ್ದಿಗಳು ನಡೆಯತ್ತಿದ್ದು, ಉಪಗ್ರಹಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನ ವಾಹನಗಳಲ್ಲೂ ಬಳಸುವ ಸಮಯ ದೂರ ಇಲ್ಲ ಎಂದು ಡಾ. ಎಂ ಅಣ್ಣಾ ದೊರೈ ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ

ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ

ಸಿ.ಕೆ ಮೋಟಾರ್ಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ, ಭಾರತದಲ್ಲಿನ ಪ್ರಮುಖ ಎಲೆಕ್ಟ್ರಿಕ್ ಆಟೋಮೋಬೈಲ್ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿರುವ ಸಿಕೆ ಮೋಟರ್ಸ್ ಅವುಗಳ ಡೀಲರ್ ಗಳ ನೆರವಿನಿಂದ ದೇಶಾದ್ಯಂತ ಬಹು ವಿಭಾಗೀಯ ಎಲೆಕ್ಟ್ರಿಕ್ ವಾಹನಗಳ ಶೋರೂಂ ಅನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಸಿಕೆ ಮೋಟರ್ಸ್ ತನ್ನದೇ ಆದ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿರುವ ಕೊಯಮತ್ತೂರು ಘಟಕದಲ್ಲಿ ಬ್ರ್ಯಾಂಡ್ ಗಳಿಗೆ ಸಿಕೆಡಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ.

ಅಧಿಕ ವೇಗದ ಸ್ಪೋರ್ಟ್ಸ್ ಬೈಕ್ ಗಳನ್ನು ಮಾರಾಟ

ಅಧಿಕ ವೇಗದ ಸ್ಪೋರ್ಟ್ಸ್ ಬೈಕ್ ಗಳನ್ನು ಮಾರಾಟ

ಪ್ರಸ್ತುತ ಈ ಉತ್ಪನ್ನಗಳ ಗುಚ್ಛವು ಎಲೆಕ್ಟ್ರಿಕ್ ಬೈಸಿಕಲ್ ಗಳು, ಕಡಿಮೆ ವೇಗ ಮತ್ತು ಹೆಚ್ಚು ವೇಗದ ಸ್ಕೂಟರ್ ಗಳು, ಕಡಿಮೆ ವೇಗ ಮತ್ತು ಹೆಚ್ಚು ವೇಗದ ಬೈಕ್ ಗಳು ಹಾಗೂ ಎಲ್ 5 ವಿಭಾಗದಲ್ಲಿ ತ್ರಿಚಕ್ರ ವಾಹನಗಳನ್ನು ಒಳಗೊಂಡಿರುತ್ತದೆ. ಬೆಂಗಳೂರಿನಲ್ಲಿ ಸಿಕೆ ಮೋಟರ್ಸ್ ಡೀಲರ್ ಸಂಸ್ಥೆಯಾಗಿರುವ ಮೆಸರ್ಸ್ ಎಸ್ ಪಿ ಮೋಟರ್ಸ್ ಶೋರೂಂನಲ್ಲಿ ತ್ರಿಚಕ್ರ ವಾಹನಗಳು ಮತ್ತು ಅಧಿಕ ವೇಗದ ಸ್ಪೋರ್ಟ್ಸ್ ಬೈಕ್ ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

ವಾಹನಗಳ ವೈಶಿಷ್ಟ್ಯತೆಗಳು

ವಾಹನಗಳ ವೈಶಿಷ್ಟ್ಯತೆಗಳು

1. ಇ ಬೈಸಿಕಲ್ ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ 40 ರಿಂದ 180 ಕಿಲೋಮೀಟರ್ ವರೆಗೆ ಚಲಾಯಿಸಬಹುದು.
2. ಕಡಿಮೆ ವೇಗದ ಸಾಮರ್ಥ್ಯದ ಇ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಪ್ರತಿ ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ 70 ರಿಂದ 120 ಕಿಲೋಮೀಟರ್ ವರೆಗೆ ಓಡಿಸಬಹುದು.
3. ಅಧಿಕ ವೇಗದ ಸಾಮರ್ಥ್ಯದ ಇ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಪ್ರತಿ ಗಂಟೆಗೆ 65 ಕಿಲೋಮೀಟರ್ ವೇಗದಲ್ಲಿ 100 ರಿಂದ 120 ಕಿಲೋಮೀಟರ್ ವರೆಗೆ ಓಡಿಸಬಹುದು.
4. ವಿಕಲಚೇತನರಿಗೆಂದೇ ವಿಶಿಷ್ಟವಾದ ವಾಹನಗಳೂ ಲಭ್ಯವಿವೆ.
5. ಅದೇ ರೀತಿ ಅಧಿಕ ವೇಗದ ಸ್ಪೋರ್ಟ್ಸ್ ಬೈಕ್ ಗಳನ್ನು ಒಂದು ಬಾರಿಯ ಚಾರ್ಜ್ ನಲ್ಲಿ ಪ್ರತಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ 120 ಕಿಲೋಮೀಟರ್ ವರೆಗೆ ಚಲಾಯಿಸಬಹುದಾಗಿದೆ.
6. ಅಧಿಕ ಸಾಮರ್ಥ್ಯದ ತ್ರಿಚಕ್ರ ವಾಹನಗಳು ಪ್ರಯಾಣಿಕರನ್ನು ಹೊತ್ತೊಯ್ಯಲು ಮತ್ತು ವಾಣಿಜ್ಯ ಬಳಕೆಗೆ ಬಳಸಬಹುದಾಗಿದೆ. ಎಲ್5 ವಿಭಾಗದಡಿಯ ಈ ವಾಹನಗಳು ಒಂದು ಬಾರಿಯ ಚಾರ್ಜಿಂಗ್ ನಲ್ಲಿ ಪ್ರತಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ 90 ರಿಂದ 110 ಕಿಲೋಮೀಟರ್ ವರೆಗೆ ಚಲಾಯಿಸಬಹುದು.

ಸಿಕೆ ಮೋಟಾರ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್‌

ಸಿಕೆ ಮೋಟಾರ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್‌

ಸಿಕೆ ಮೋಟಾರ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್‌ ಮಾತನಾಡಿ, ಅತ್ಯಂತ ವಿಶ್ವಸನೀಯ ವಾಹನ ತಯಾರಿಕಾ ಸಂಸ್ಥೆಗಳಾದ ಇ ಮೋಟರಾಡ್, ಕೊಮಾಕಿ, ಅಜಂತಾ, ಒಡಿಸಿ & ಒಮೆಗಾ ಸೇಕಿ ಮೊಬಿಲಿಟಿಯಂತಹ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇವುಗಳ ಮೂಲಕ ಈ ವಾಹನಗಳನ್ನು ಪೂರೈಕೆ ಮಾಡುತ್ತದೆ.

ದಕ್ಷಿಣ ಭಾರತದಲ್ಲಿ ಈಗಾಗಲೇ 15 ಶೋರೂಂಗಳನ್ನು ಹೊಂದಿರುವ ಸಿಕೆ ಮೋಟಾರ್ಸ್‌ ಬೆಂಗಳೂರಿನಲ್ಲಿ ಮೊದಲ ಶೋರೂಂ ಪ್ರಾರಂಭ ಮಾಡಿದೆ. 2021 ರ ವರ್ಷದಲ್ಲಿ ಭಾರತದಾದ್ಯಂತ 100 ಶೋರೂಂಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ.

ಈ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ ಪಟ್ಟದ ಶ್ರೀ ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು

English summary
Tirupur based automobile company‘CK Motors’is all set to unveil its first electric scooters, electric bicyclesand electric three wheelersshowroom in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X