ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸೇರಿದಂತೆ 13 ದೇಶಗಳ ಬ್ಯಾಂಕಿಂಗ್ ಕಾರ್ಯಾಚರಣೆ ಸ್ಥಗಿತಕ್ಕೆ ಸಿಟಿಬ್ಯಾಂಕ್ ನಿರ್ಧಾರ

|
Google Oneindia Kannada News

ನವದೆಹಲಿ, ಏಪ್ರಿಲ್ 16: ಭಾರತ ಸೇರಿದಂತೆ 13 ದೇಶಗಳಲ್ಲಿನ ತನ್ನ ಗ್ರಾಹಕ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಸಿಟಿಗ್ರೂಪ್ ಪ್ರಕಟಿಸಿದೆ. ಅಮೆರಿಕದ ಬ್ಯಾಂಕಿಂಗ್ ಸಮೂಹವು ತಾನು ಸಂಪತ್ತು ನಿರ್ವಹಣೆ ಕ್ಷೇತ್ರದತ್ತ ಗಮನ ಹರಿಸಲು ಉದ್ದೇಶಿಸಿದ್ದು, ವಿವಿಧ ದೇಶಗಳಲ್ಲಿ ಚಿಕ್ಕ ಪ್ರಮಾಣದಲ್ಲಿ ನಡೆಯುತ್ತಿರುವ ಚಿಲ್ಲರೆ ಬ್ಯಾಂಕಿಂಗ್ ವಲಯವನ್ನು ತ್ಯಜಿಸುತ್ತಿರುವುದಾಗಿ ತಿಳಿಸಿದೆ.

ತನ್ನ ನಿರ್ಗಮದ ಕಾಲಾವಧಿಯನ್ನು ಸಿಟಿ ಗ್ರೂಪ್ ಇನ್ನೂ ಪ್ರಕಟಿಸಿಲ್ಲ. ಅಮೆರಿಕದಲ್ಲಿನ ಮೂರನೇ ದೊಡ್ಡ ಬ್ಯಾಂಕಿಂಗ್ ಸಮೂಹವಾಗಿರುವ ಸಿಟಿ ಗ್ರೂಪ್, ಭಾರತ, ಚೀನಾ, ಆಸ್ಟ್ರೇಲಿಯಾ, ಮಲೇಷ್ಯಾ, ಬಹ್ರೇನ್, ಕೊರಿಯಾ, ಇಂಡೋನೇಷ್ಯಾ, ರಷ್ಯಾ, ವಿಯೆಟ್ನಾಂ, ಫಿಲಿಪ್ಪೀನ್ಸ್, ಥೈಲ್ಯಾಂಡ್, ಪೊಲ್ಯಾಂಡ್ ಮತ್ತು ತೈವಾನ್‌ಗಳಲ್ಲಿನ ತನ್ನ ಗ್ರಾಹಕ ಬ್ಯಾಂಕಿಂಗ್ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಿದೆ.

ರೆಪೋ ದರದಲ್ಲಿ ಬದಲಾವಣೆ ಇಲ್ಲ, ಮತ್ತೇನು ಘೋಷಿಸಿದೆ ಆರ್‌ಬಿಐ? ರೆಪೋ ದರದಲ್ಲಿ ಬದಲಾವಣೆ ಇಲ್ಲ, ಮತ್ತೇನು ಘೋಷಿಸಿದೆ ಆರ್‌ಬಿಐ?

ಆದರೆ ಸಿಂಗಪುರ, ಹಾಂಕಾಂಗ್, ಲಂಡನ್ ಮತ್ತು ಯುಎಇಯಲ್ಲಿನ ಜಾಗತಿಕ ಗ್ರಾಹಕ ಬ್ಯಾಂಕಿಂಗ್ ಉದ್ಯಮಗಳ ಮೇಲೆ ಗಮನ ಹರಿಸುವುದನ್ನು ಮುಂದುವರಿಸಲಿದೆ ಎಂದು ಸಿಟಿಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಜೇನ್ ಫ್ರೇಸರ್ ತಿಳಿಸಿದ್ದಾರೆ.

 Citigroup To Exit Consumer Banking Operations In 13 Countries Including India

ಮಾರ್ಚ್ ತಿಂಗಳಲ್ಲಿ ಸಿಇಒ ಹುದ್ದೆಗೆ ಏರಿದ್ದ ಫ್ರೇಸರ್, ವೆಲ್ತ್ ಮ್ಯಾನೇಜ್ಮೆಂಟ್‌ನಲ್ಲಿನ ಬೆಳವಣಿಗೆ ಅವಕಾಶಗಳು ಉತ್ತಮವಾಗಿರುವುದರಿಂದ ಅದರ ಕಡೆಗಿನ ಗಮನವನ್ನು ದುಪ್ಪಟ್ಟು ಮಾಡುವ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಸಿಟಿಗ್ರೂಪ್ ಸಮೂಹವು ತನ್ನ ಮೊದಲ ತ್ರೈಮಾಸಿಕ ಅವಧಿಯಲ್ಲಿ 7.9 ಬಿಲಿಯನ್ ಡಾಲರ್ ಲಾಭವನ್ನು ಪ್ರಕಟಿಸಿತ್ತು. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಅದರ ಲಾಭ ಮೂರು ಪಟ್ಟು ಹೆಚ್ಚಳವಾಗಿದೆ. ಆದರೆ ಬ್ಯಾಂಕಿಂಗ್ ಸಮೂಹದ ಒಟ್ಟಾರೆ ಆದಾಯ ಶೇ 7ರಷ್ಟು ಅಂದರೆ, 19.3 ಬಿಲಿಯನ್ ಡಾಲರ್ ಕುಸಿತವಾಗಿದೆ.

English summary
US based Citigroup has announced that will exit the consumer banking operations in 13 countries including India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X