ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸ್ಕೋ ಸಂಸ್ಥೆಯಿಂದ 14,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್?

By Mahesh
|
Google Oneindia Kannada News

ಸ್ಯಾನ್ ಹೊಸೆ (ಕ್ಯಾಲಿಫೋರ್ನಿಯಾ), ಆಗಸ್ಟ್ 17: ಸಿಸ್ಕೋ ಸಿಸ್ಟಮ್ ತನ್ನ ಸಂಸ್ಥೆಯ 14,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗಿದೆ. ಈ ಬೃಹತ್ ಉದ್ಯೋಗ ಕಡಿತದ ಬಗ್ಗೆ ಮುಂದಿನ ವಾರ ಅಧಿಕೃತ ಘೋಷಣೆ ಸಾಧ್ಯತೆಯಿದೆ ಎಂದು ಸಿಆರ್ಎನ್ ವರದಿ ಮಾಡಿದೆ.

ಜಾಗತಿಕವಾಗಿ ಶೇ20ರಷ್ಟು ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳಲು ಸಿಸ್ಕೋ ಸಿದ್ಧವಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಹೊಸೆಯಲ್ಲಿರುವ ಸಿಸ್ಕೋ ಕೇಂದ್ರ ಕಚೇರಿಯಿಂದ ಬಂದಿರುವ ಮಾಹಿತಿ ಪ್ರಕಾರ, ಹಾರ್ಡ್ ವೇರ್ ಬಿಟ್ಟು ಸಾಫ್ಟ್ ವೇರ್ ಕಡೆಗೆ ಸಿಸ್ಕೋ ವಾಲುತ್ತಿರುವುದೇ ಇದಕ್ಕೆ ಕಾರಣ. [ಇನ್ಫೋಸಿಸ್ ನ 3 ಸಾವಿರ ಸಿಬ್ಬಂದಿ ಕೆಲಸಕ್ಕೆ ಕುತ್ತು?]

Cisco Systems to lay off about 14,000 employees: Report

ಡಾಟಾ ಅನಾಲಿಟಿಕ್ಸ್ ಸಾಫ್ಟ್ ವೇರ್, ಕ್ಲೌಡ್ ಆಧಾರಿತ ಸಾಧನಗಳತ್ತ ಸಿಸ್ಕೋ ಈಗ ತನ್ನ ಗಮನವನ್ನು ಕೇಂದ್ರಿಕೃತಗೊಳಿಸುತ್ತಿದೆ. ಸದ್ಯ ಟೆಲಿಕಾಂ ಸಾಧನಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಹೊಂದಿದೆ. ನೆಟ್ವರ್ಕ್ ಸ್ವಿಚ್, ರೂಟರ್ ಗಳ ಮಾರುಕಟ್ಟೆಯಲ್ಲಿ ಸಿಸ್ಕೋ ಬಿಟ್ಟರೆ ನೋಕಿಯಾ ಒಳ್ಳೆ ಹೆಸರು ಹೊಂದಿದೆ.

English summary
Cisco Systems Inc is laying off about 14,000 employees, representing nearly 20 percent of the network equipment maker's global workforce, technology news site CRN reported, citing sources close to the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X