ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತ

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(BPCL) ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಭಾರತ್ ಪೆಟ್ರೋಲಿಯಂ ಸಂಸ್ಥೆ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿಕಾಯಿದೆಗೆ ತಿದ್ದುಪಡಿ ತರಲಾಗಿದೆ. ಇನ್ನೇನ್ನಿದ್ದರೂ ಸಂಸತ್ತಿನಲ್ಲಿ ಅನುಮೋದನೆ ಪಡೆಯುವುದೊಂದೆ ಬಾಕಿ. ಈ ನಡುವೆ ಮೋದಿ ಸರ್ಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಪಿಸಿಎಲ್ ಕಾರ್ಮಿಕ ಸಂಘಟನೆ ಬೀದಿಗಿಳಿದು ಪ್ರತಿಭಟನೆ ನಡೆಸಿದೆ.

ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್

"ಸರ್ಕಾರ ಮುಂದಾಗಿದ್ದು ಖಂಡನೀಯ. ಮೋದಿ ಅವರಿಗೆ ಹೊಸಸಂಸ್ಥೆಗಳನ್ನು, ಉದ್ಯಮಗಳನ್ನು ಆರಂಭಿಸುವ ಯೋಗ್ಯತೆಯೂ ಇಲ್ಲ, ಇರುವ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಕಾಳಜಿಯೂ ಇಲ್ಲ. ಖಾಸಗಿ ಹಿತಾಸಕ್ತಿಗಳಿಗೆ ಕೆಲಸ ಮಾಡುವ ಇಂಥವರು ಅಧಿಕಾರದಲ್ಲಿರುವುದು ದೇಶದ ದುರಂತ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಭಾರತ್ ಪೆಟ್ರೋಲಿಯಂ ಷೇರು ಮಾರಲು ಮುಂದಾದ ಕೇಂದ್ರ ಸರ್ಕಾರಭಾರತ್ ಪೆಟ್ರೋಲಿಯಂ ಷೇರು ಮಾರಲು ಮುಂದಾದ ಕೇಂದ್ರ ಸರ್ಕಾರ

ಬಿಪಿಸಿಎಲ್ ರಾಷ್ಟ್ರೀಕೃತಗೊಳಿಸುವ ಕಾಯ್ದೆ 1976 ಹಾಗೂ ತಿದ್ದುಪಡಿ ಕಾಯ್ದೆ 2016ಗೆ ಬೇಕಾದ ಮರು ತಿದ್ದುಪಡಿಯನ್ನು ಮಾಡಲಾಗಿದೆ. ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ಸಿಗಬೇಕಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಲ್ಲಿ ಸರ್ಕಾರ ಶೇ.53.3 ಪಾಲು ಹೊಂದಿದೆ. ಈ ಷೇರುಗಳ ಮಾರಾಟದಿಂದ 60-70 ಸಾವಿರ ಕೋಟಿ ರೂಪಾಯಿ ಆದಾಯ ಬರಬಹುದೆಂಬ ನಿರೀಕ್ಷೆ ಹೊಂದಲಾಗಿದೆ. ಬಿಪಿಸಿಎಲ್ ಮಾರುಕಟ್ಟೆ ಮೌಲ್ಯ ಅಕ್ಟೋಬರ್ 04, 2019ಕ್ಕೆ 1.11 ಲಕ್ಷ ಕೋಟಿ ರು ನಷ್ಟಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

 ಸರ್ಕಾರಿ ಸಂಸ್ಥೆ ಖಾಸಗೀಕರಣ ಯತ್ನ

ಸರ್ಕಾರಿ ಸಂಸ್ಥೆ ಖಾಸಗೀಕರಣ ಯತ್ನ

2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರವು ಭಾರತ್ ಪೆಟ್ರೋಲಿಯಂ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದರು. ಈ ಪ್ರಕ್ರಿಯೆ ಬಗ್ಗೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸರ್ಕಾರಿ ಸ್ವಾಮ್ಯ ಬಿಪಿಸಿಎಲ್ ಹಾಗೂ ಎಚ್ ಪಿಸಿಎಲ್ ಖಾಸಗೀಕರಣಕ್ಕೆ ಸಂಸತ್ತಿನ ಅನುಮೋದನೆ ಅಗತ್ಯ ಎಂದು ಹೇಳಿತ್ತು.

ಬಿಪಿಸಿಎಲ್ ಷೇರುಗಳ ಖರೀದಿಗೆ ಪೈಪೋಟಿ

ಬಿಪಿಸಿಎಲ್ ಷೇರುಗಳ ಖರೀದಿಗೆ ಪೈಪೋಟಿ

ಬಿಪಿಸಿಎಲ್ ಷೇರುಗಳನ್ನು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ಸುಕವಾಗಿದೆ ಎನ್ನಲಾಗಿದೆ. ಇದಲ್ಲದೆ ಯುಕೆಯ ಬಿಪಿ, ಕುವೈಟ್ ಪೆಟ್ರೋಲಿಯಂ, ಮಲೇಷಿಯಾದ ಪೆಟ್ರೋನಾಸ್, ಸೌದಿ ಅರಾಮ್ಕೋ ಹಾಗೂ ಶೆಲ್ ಮತ್ತು ಎಸ್ಸಾರ್ ಆಯಿಲ್ ಕೂಡಾ ರೇಸಿನಲ್ಲಿವೆ.

ಇಂಧನ ದರ ಏರುಪೇರು

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

'ಅದಾನಿ, ಅಂಬಾನಿ ಸೇರಿದಂತೆ ಖಾಸಗಿ ಉದ್ಯಮಕ್ಕೆ ಉತ್ತೇಜನ ನೀಡಲು ಮೋದಿ ಮಾಡುತ್ತಿರುವುದು ದೇಶದ್ರೋಹಿ ಕ್ರಮ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

15,078ಪೆಟ್ರೋಲ್ ಪಂಪ್ ಹೊಂದಿರುವ ಬಿಪಿಸಿಎಲ್

ಮುಂಬೈನಲ್ಲಿ ನಾಲ್ಕು ತೈಲ ಘಟಕ, ಕೇರಳದ ಕೊಚ್ಚಿ, ಮಧ್ಯಪ್ರದೇಶದ ಬಿನಾ, ಅಸ್ಸಾಂನ ನುಮಾಲಿಗರ್ ನಲ್ಲಿ ತೈಲ ಘಟಕಗಳನ್ನು ಬಿಪಿಸಿಎಲ್ ಹೊಂದಿದ್ದು, ಒಟ್ಟಾರೆ, 38.3 ಮಿಲಿಯನ್ ಟನ್ ಕಚ್ಚಾತೈಲವನ್ನು ಇಂಧನವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ. ಇದರ ಜೊತೆಗೆ 15,078ಪೆಟ್ರೋಲ್ ಪಂಪ್ ಹಾಗೂ 6,004 ಎಲ್ ಪಿಜಿ ವಿತರಣೆಯನ್ನು ಬಿಪಿಸಿಎಲ್ ಹೊಂದಿದೆ. ಭಾರತ 294.4 ಮಿಲಿಯನ್ ಟನ್ ತೈಲ ಸಂಸ್ಕರಣಾ ಸಾಮರ್ಥ್ಯ, 65 554 ಪೆಟ್ರೋಲ್ ಪಂಪ್ ಹಾಗೂ 24 026 ಎಲ್ ಪಿ ಜಿ ವಿತರಣೆಯನ್ನು ಹೊಂದಿದೆ.

English summary
#ChowkidarChorHai: BPCL workers protest, Karnataka Congress condemn Modi government ahead of a proposed move to fully privatise state-owned fuel retailer Bharat Petroleum Corp Ltd, the government had quietly repealed the legislation that had nationalised the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X