• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಡಿ ವಿವಾದದ ನಡುವೆ ಚೀನಾದ ಟೆನ್ಸೆಂಟ್ ಕಂಪನಿ Flipkartನಲ್ಲಿ 62.8 ಮಿಲಿಯನ್ ಡಾಲರ್ ಹೂಡಿಕೆ

|

ನವದೆಹಲಿ, ಸೆಪ್ಟೆಂಬರ್ 17: ಕೇಂದ್ರ ಸರ್ಕಾರವು ಭಾರತದಲ್ಲಿ ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸುತ್ತಿದ್ದರೂ, ಗಡಿ ವಿವಾದ ಇನ್ನೂ ಶಮನವಾಗದಿದ್ದರೂ ಚೀನಾದ ತಂತ್ರಜ್ಞಾನದ ಪ್ರಮುಖ ಸಂಸ್ಥೆ ಟೆನ್ಸೆಂಟ್ ಕಂಪನಿಯು, ಬೆಂಗಳೂರು ಮೂಲದ ಇ-ಕಾಮರ್ಸ್ ಫ್ಲಿಪ್‌ಕಾರ್ಟ್‌ನಲ್ಲಿ 62.8 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ನಿಯಂತ್ರಕ ದಾಖಲಾತಿಗಳು ಬುಧವಾರ ತೋರಿಸಿದೆ.

ಬೆಂಗಳೂರಿನಲ್ಲಿ ಆರಂಭಗೊಂಡ ಫ್ಲಿಪ್‌ಕಾರ್ಟ್‌ ಇದೀಗ ಭಾರತದಾದ್ಯಂತ ಸಾಕಷ್ಟು ಖ್ಯಾತಿ ಪಡೆದಿದ್ದು, ಟೆನ್ಸೆಂಟ್‌ ಹೂಡಿಕೆಯು ವಾಲ್ಮಾರ್ಟ್ ನೇತೃತ್ವದ 1.2 ಬಿಲಿಯನ್ ಡಾಲರ್ ಹಣದ ಸುತ್ತಿನ ಭಾಗವಾಗಬಹುದು ಎಂದು ಎಂಟ್ರಾಕ್ರ್ ವರದಿ ಮಾಡಿದೆ. ಇದು ಹಣಕಾಸಿನ ವರ್ಷದಲ್ಲಿ ಎರಡು ಹಂತಗಳಲ್ಲಿರುತ್ತದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ. ಈ ನಿಧಿಸಂಗ್ರಹದೊಂದಿಗೆ, ಫ್ಲಿಪ್‌ಕಾರ್ಟ್‌ ಕಂಪನಿಯು 24.9 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ಹೇಳಿದೆ.

ಹಬ್ಬದ ಋತುವಿನಲ್ಲಿ ಫ್ಲಿಪ್‌ಕಾರ್ಟ್‌ನಿಂದ 70,000 ಕ್ಕೂ ಅಧಿಕ ಉದ್ಯೋಗ ಸೃಷ್ಟಿ

ವಾಲ್ಮಾರ್ಟ್ ಇದುವರೆಗೆ 660.25 ಮಿಲಿಯನ್ ಡಾಲರ್, ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ 8.14 ಮಿಲಿಯನ್ ಡಾಲರ್ ಮತ್ತು ಟೆನ್ಸೆಂಟ್ ಸೇರ್ಪಡೆಯೊಂದಿಗೆ ಫ್ಲಿಪ್‌ಕಾರ್ಟ್ ಪ್ರಸ್ತುತ ಈ ವರ್ಷ 731.20 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ ಎಂದು ವರದಿ ಹೇಳಿದೆ.

ವಾಲ್ಮಾರ್ಟ್ ನಂತರ, ಟೆನ್ಸೆಂಟ್ ಕಂಪನಿಯು ಫ್ಲಿಪ್‌ಕಾರ್ಟ್‌ನಲ್ಲಿ ಎರಡನೇ ಅತಿದೊಡ್ಡ ಷೇರುದಾರರಾಗಿದ್ದು, ತನ್ನ ಪಾಲನ್ನು ಶೇ. 5 ರಿಂದ ಶೇ. 5.34ಕ್ಕೆ ಹೆಚ್ಚಿಸಿದೆ.

English summary
Chinese technology major Tencent has invested $62.8 million into e-commerce platform Flipkart, regulatory filings showed on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X