ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಚೂಣಿ ಉದ್ಯಮಿಗಳ ಪಟ್ಟಿಯಿಂದ ಜಾಕ್ ಮಾ ಹೆಸರು ಕೈಬಿಟ್ಟ ಚೀನಾ ಸರ್ಕಾರಿ ಪತ್ರಿಕೆ

|
Google Oneindia Kannada News

ಬೀಜಿಂಗ್, ಫೆಬ್ರವರಿ 2: ಚೀನಾದ ಸರ್ಕಾರಿ ಮಾಧ್ಯಮವು ಪ್ರಕಟಿಸಿರುವ ದೇಶದ ಪ್ರಮುಖ ಉದ್ಯಮಶೀಲರ ಪಟ್ಟಿಯಿಂದ ಅಲಿಬಾಬಾ ಸಮೂಹದ ಸಂಸ್ಥಾಪಕ ಜಾಕ್ ಮಾ ಅವರ ಹೆಸರನ್ನು ಕೈಬಿಡಲಾಗಿದೆ. ಈ ಮೂಲಕ ಸರ್ಕಾರಕ್ಕೂ ಜಾಕ್ ಮಾ ಅವರ ನಡುವೆ ಸಂಘರ್ಷ ನಡೆಯುತ್ತಿದೆ ಎಂಬ ವರದಿಗಳಿಗೆ ಮತ್ತಷ್ಟು ಪುಷ್ಟಿ ದೊರೆತಿದೆ.

ಶಾಂಘೈ ಸೆಕ್ಯುರಿಟೀಸ್ ನ್ಯೂಸ್ ಮೊದಲ ಪುಟದಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಚೀನಾದ ಖ್ಯಾತ ಉದ್ಮಿ ಜಾಕ್ ಮಾ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರ ಬದಲು ಹುವೀ ಟೆಕ್ನಾಲಜೀಸ್‌ನ ರೆನ್ ಝೆಂಗ್‌ಫೀ, ಷಿಯೋಮಿ ಕಾರ್ಪ್ಸ್‌ನ ಲೀ ಜುನ್ ಮತ್ತು ಬಿವೈಡಿಯ ವಾಂಗ್ ಚುವಾನ್ಫು ಅವರನ್ನು ತಮ್ಮ ಕೊಡುಗೆಗಾಗಿ ಶ್ಲಾಘಿಸಲಾಗಿದೆ.

ಮೂರು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾಮೂರು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ

ಮಂಗಳವಾರ ಈ ಲೇಖನ ಪ್ರಕಟಗೊಂಡಿದ್ದು, ಅಲಿಬಾಬಾ ಕೂಡ ತನ್ನ ತ್ರೈಮಾಸಿಕ ಅವಧಿಯ ಆದಾಯದ ವರದಿ ಪ್ರಕಟಿಸಿದೆ. ಸರ್ಕಾರಿ ಸ್ವಾಮ್ಯದ ಪತ್ರಿಕೆಯು ಅಲಿಬಾಬಾವನ್ನು ಪರಿಗಣಿಸದೆ ಇರುವುದರ ಬಗ್ಗೆ ಸಂಸ್ಥೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 Chinese State Newspaper Not Mentioned Jack Ma In Its Leading Entrepreneurs

ಅಕ್ಟೋಬರ್ 24ರಂದು ತಮ್ಮ ಭಾಷಣದಲ್ಲಿ ಜಾಕ್ ಮಾ ಅವರು ಚೀನಾದ ಆರ್ಥಿಕ ನೀತಿ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಘಟನೆ ಬಳಿಕ ಅಲಿಬಾಬಾ ಸಮೂಹದ 37 ಬಿಲಿಯನ್ ಡಾಲರ್ ಐಪಿಒ ಯೋಜನೆಗೆ ಚೀನಾ ಸರ್ಕಾರ ತಡೆ ನೀಡಿತ್ತು. ನಂತರ 'ಆಫ್ರಿಕಾದ ಬಿಸಿನೆಸ್ ಹೀರೋಗಳು' ಎಂಬ ಟಿವಿ ಕಾರ್ಯಕ್ರಮದ ಫೈನಲ್‌ನ ತೀರ್ಪುಗಾರ ಪಟ್ಟಿಯಿಂದ ಜಾಕ್ ಮಾ ಹೆಸರನ್ನು ಕೈಬಿಡಲಾಗಿತ್ತು.

ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ನಾಪತ್ತೆ?ಚೀನಾದ ಕೋಟ್ಯಧಿಪತಿ ಉದ್ಯಮಿ ಜಾಕ್ ಮಾ ನಾಪತ್ತೆ?

ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಬಳಿಕ ಎರಡು ತಿಂಗಳವರೆಗೆ ಜಾಕ್ ಮಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರು ಎಲ್ಲಿದ್ದಾರೆ ಎನ್ನುವುದು ಕೂಡ ಬಹಿರಂಗವಾಗಿರಲಿಲ್ಲ. ಕಳೆದ ತಿಂಗಳು 50 ಸೆಕೆಂಡುಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.

English summary
Chinese Shanghai Securities News has not mentioned Jack Ma's name in its leading entrepreneurs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X