ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಚೀನಾದ ಮೊಬೈಲ್ ಮಾರಾಟಕ್ಕೆ ನಿಷೇಧ ಬಿತ್ತಾ?

|
Google Oneindia Kannada News

ನವದೆಹಲಿ, ಆಗಸ್ಟ್ 30: ಭಾರತದಲ್ಲಿ ಚೀನಾ ಕಂಪನಿಗಳ ಮೊಬೈಲ್ ಮಾರಾಟವನ್ನು ನಿಷೇಧಿಸಲಾಗುತ್ತಿದೆಯೇ? ಇಂಥದೊಂದು ಪ್ರಶ್ನೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಉತ್ತರ ಕೊಟ್ಟಿದ್ದಾರೆ.

ಭಾರತದಿಂದ ತಮ್ಮ ರಫ್ತು ಪ್ರಮಾಣವನ್ನು ಹೆಚ್ಚು ಮಾಡುವಂತೆ ಚೀನಾದ ಮೊಬೈಲ್ ಕಂಪನಿಗಳಿಗೆ ಸರ್ಕಾರವೇ ಕೇಳಿದೆ. ಚೀನಾದ ಅಂತಹ ಸಂಸ್ಥೆಗಳು ತಯಾರಿಸಿದ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ಗಳ ಮಾರಾಟವನ್ನು ನಿಷೇಧಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

12,000 ರುಪಾಯಿಗಿಂತ ಕಡಿಮೆ ಮೌಲ್ಯದ ಚೀನಾ ಮೊಬೈಲ್‌ ಬ್ಯಾನ್ ಮಾಡಲು ನಿರ್ಧಾರ?12,000 ರುಪಾಯಿಗಿಂತ ಕಡಿಮೆ ಮೌಲ್ಯದ ಚೀನಾ ಮೊಬೈಲ್‌ ಬ್ಯಾನ್ ಮಾಡಲು ನಿರ್ಧಾರ?

ಎಲೆಕ್ಟ್ರಾನಿಕ್ ಪರಿಸರ ವ್ಯವಸ್ಥೆಯಲ್ಲಿ ಭಾರತೀಯ ಕಂಪನಿಗಳಿಗೆ ಪ್ರಮುಖ ಪಾತ್ರವಿದೆ, ಆದರೆ ವಿದೇಶಿ ಬ್ರಾಂಡ್‌ಗಳನ್ನು ಹೊರಗಿಡುವುದು ಇದರ ಅರ್ಥವಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರು ತಿಳಿಸಿದ್ದಾರೆ.

ಅತಿಹೆಚ್ಚಿನ ರಫ್ತು ಮಾಡುವ ಕೆಲವು ಚೀನೀ ಕಂಪನಿಗಳು

ಅತಿಹೆಚ್ಚಿನ ರಫ್ತು ಮಾಡುವ ಕೆಲವು ಚೀನೀ ಕಂಪನಿಗಳು

"ಕೆಲವು ಚೀನೀ ಬ್ರಾಂಡ್‌ಗಳೊಂದಿಗೆ ನಾವು ಪಾರದರ್ಶಕವಾಗಿ ಇರುವುದಕ್ಕೆ ಕಾರಣವಿದೆ. ಏನೆಂದರೆ ಅಂಥ ಕಂಪನಿಗಳು ಅತಿಹಚ್ಚಿನ ಸರಕುಗಳನ್ನು ರಫ್ತು ಮಾಡುತ್ತವೆ ಎಂಬುದು ಭಾರತದ ನಿರೀಕ್ಷೆಯಾಗಿದೆ. ಇದನ್ನು ನಂಬಿಕೊಂಡು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. 12,000ಕ್ಕಿಂತ ಕಡಿಮೆ ಬೆಲೆಯ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡದಂತೆ ಚೀನಾದ ಕಂಪನಿಗಳನ್ನು ನಿರ್ಬಂಧಿಸುವ ಸರ್ಕಾರದ ವರದಿಯ ಯೋಜನೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಲೋನ್ ಆ್ಯಪ್‌ಗಳಿಂದ ಸುಲಿಗೆ; ಚೀನಾಗೆ ಮಾಹಿತಿ ರವಾನೆ: 22 ಮಂದಿ ಬಂಧನಲೋನ್ ಆ್ಯಪ್‌ಗಳಿಂದ ಸುಲಿಗೆ; ಚೀನಾಗೆ ಮಾಹಿತಿ ರವಾನೆ: 22 ಮಂದಿ ಬಂಧನ

ಚೀನಾ ಕಂಪನಿಗಳ ಮೊಬೈಲ್ ನಿಷೇಧದ ಸುದ್ದಿ ಹೇಗೆ ಬಂತು?

ಚೀನಾ ಕಂಪನಿಗಳ ಮೊಬೈಲ್ ನಿಷೇಧದ ಸುದ್ದಿ ಹೇಗೆ ಬಂತು?

ಭಾರತದಲ್ಲಿ ಚೀನಾದ ಕಂಪನಿಗಳಿಗೆ ಸೇರಿದ 12,000 ರೂಪಾಯಿಗಿಂತ ಕಡಿಮೆ ಬೆಲೆಯ ಮೊಬೈಲ್ ಮಾರಾಟವನ್ನು ನಿಷೇಧಿಸಲಾಗುತ್ತದೆ ಎಂಬ ಸುದ್ದಿ ಎಲ್ಲಿಂದ ಬಂತು ಎಂಬುದರ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು. ಇದರ ಜೊತೆಗೆ ಪೂರೈಕೆ ಸರಪಳಿ, ವಿಶೇಷವಾಗಿ ಘಟಕಗಳ ಪೂರೈಕೆ ಸರಪಳಿ, ಹೆಚ್ಚು ಪಾರದರ್ಶಕವಾಗಿರಬೇಕು ಮತ್ತು ಹೆಚ್ಚು ಮುಕ್ತವಾಗಿರಬೇಕು. ಹೀಗಿರುವಾಗ ಮಾರುಕಟ್ಟೆಯ ಒಂದು ನಿರ್ದಿಷ್ಟ ವಿಭಾಗದಿಂದ 12,000ಗಿಂತ ಕಡಿಮೆ ಬೆಲೆ ಮೊಬೈಲ್ ಅನ್ನು ನಿಷೇಧಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಉತ್ಪಾದನೆ ಹೆಚ್ಚಿಸುವ ಉದ್ದೇಶ

ದೇಶದಲ್ಲಿ ಉತ್ಪಾದನೆ ಹೆಚ್ಚಿಸುವ ಉದ್ದೇಶ

ದೇಶೀಯ ಮೌಲ್ಯವರ್ಧನೆ ಹೆಚ್ಚುತ್ತಿರುವ ಬಗ್ಗೆ ಉದ್ಯಮ ಸಂಸ್ಥೆ ICEA ಸಹಯೋಗದೊಂದಿಗೆ ICRIER ಸಿದ್ಧಪಡಿಸಿದ ವರದಿಯನ್ನು ಸಚಿವರು ಬಿಡುಗಡೆ ಮಾಡಿದರು. ಇದೇ ವೇಳೆ 2025-26ರ ಹೊತ್ತಿಗೆ ವೇಳೆಗೆ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಅನ್ನು 300 ಶತಕೋಟಿ ಯುಎಸ್ ಡಾಲರ್ ಮಾಡುವ ಗುರಿಯನ್ನು ಹೊಂದಲಾಗಿದ್ದು, ಇದರಲ್ಲಿ 120 ಶತಕೋಟಿ ಯುಎಸ್ ಡಾಲರ್ ರಫ್ತು ಮಾಡುವುದಕ್ಕೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಉತ್ಪಾದನೆಯು ಸುಮಾರು 76 ಶತಕೋಟಿ ಯುಎಸ್ ಡಾಲರ್ ಇದೆ ಎಂದು ಅಂದಾಜಿಸಲಾಗಿದೆ.

ವಿದೇಶಿ ಬ್ರ್ಯಾಂಡ್ ಹೊರಗಿಡುವ ವಿಚಾರವಿಲ್ಲ

ವಿದೇಶಿ ಬ್ರ್ಯಾಂಡ್ ಹೊರಗಿಡುವ ವಿಚಾರವಿಲ್ಲ

"ನಮ್ಮ ಯೋಜನೆಯಲ್ಲಿ, ಭಾರತೀಯ ಬ್ರಾಂಡ್‌ಗಳಿಗೆ ಸ್ಥಳವಿದೆ. ನಮ್ಮ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ, ಭಾರತೀಯ ಬ್ರ್ಯಾಂಡ್‌ಗಳು, ಭಾರತೀಯ ಉದ್ಯಮಿಗಳಿಗೂ ಸಹ ಪಾತ್ರವಿದೆ. ಇದು ವಿದೇಶಿ ಪೂರೈಕೆದಾರರು ಅಥವಾ ವಿದೇಶಿ ಬ್ರ್ಯಾಂಡ್‌ಗಳನ್ನು ಹೊರಗಿಡುವ ಬಗ್ಗೆ ಅಲ್ಲ, ಆದರೆ ಇದು ನಮ್ಮ ನೀತಿ ಮತ್ತು ಭಾರತೀಯ ಬ್ರಾಂಡ್‌ಗಳನ್ನು ನಿರ್ಮಿಸುವುದು ಭಾರತ ಸರ್ಕಾರದ ಕಡ್ಡಾಯ ಕರ್ತವ್ಯ ಎಂದು ನಾವು ನಂಬುತ್ತೇವೆ" ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಅನ್ಯಾಯದ ವ್ಯಾಪಾರ ಪದ್ಧತಿಗಳಿಂದಾಗಿ ಭಾರತೀಯ ಬ್ರಾಂಡ್‌ಗಳಿಂದ ಹೊಡೆತ ಬೀಳುತ್ತಿದೆ ಎಂದು ತಿಳಿದರೆ, ನಾವು ಮಧ್ಯಪ್ರವೇಶಿಸಿ ಆ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತೇವೆ. ಈ ಉದ್ಯಮವು ಹೆಚ್ಚುತ್ತಿರುವ ದೇಶೀಯ ಮೌಲ್ಯವರ್ಧನೆಯ ಅಗತ್ಯತೆಗಳ ಬಗ್ಗೆ ತನ್ನ ವರದಿಯನ್ನು ಸಲ್ಲಿಸಿದ್ದು, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

"ದೇಶೀಯ ಉತ್ಪಾದನೆ, ಪೂರೈಕೆ ಮತ್ತು ಬಳಕೆಗೆ ಹೆಚ್ಚುವರಿಯಾದ ಸಂದರ್ಭದಲ್ಲಿ ನಾವು ಆಕ್ರಮಣಕಾರಿಯಾಗಿ ರಫ್ತು ಮಾಡಬೇಕು ಎಂಬುದು ಈ ವರದಿಯಲ್ಲಿನ ನಿಲುವು ಆಗಿದೆ. ನಮ್ಮೊಂದಿಗೆ ಸ್ಪರ್ಧಿಸುತ್ತಿರುವ ಇತರ ಆರ್ಥಿಕತೆಗಳ ಪ್ರಮಾಣವನ್ನು ಪಡೆಯಲು ರಫ್ತುಗಳು ಬಹಳ ಮುಖ್ಯ. ಆ ರಫ್ತು ಒಂದು ಪೂರೈಕೆ ಸರಪಳಿ ಹೂಡಿಕೆಗಳನ್ನು ರಚಿಸುವ ಪರಿಣಾಮ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತದೆ," ಎಂದು ಅವರು ಹೇಳಿದರು.

English summary
Chinese Mobile Phones are banned in India?: Here Read Minister Clarification
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X