ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 4 ವರ್ಷದಲ್ಲಿ ಭಾರತದ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಹೂಡಿಕೆ 12 ಪಟ್ಟು ಹೆಚ್ಚಳ

|
Google Oneindia Kannada News

ನವದೆಹಲಿ, ಜೂನ್ 27: ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಹೂಡಿಕೆಯ 12 ಪಟ್ಟು ಹೆಚ್ಚಳವಾಗಿದ್ದು, 2016 ರಲ್ಲಿ 381 ಮಿಲಿಯನ್ ಡಾಲರ್‌ನಿಂದ 2019 ರಲ್ಲಿ 4.6 ಬಿಲಿಯನ್ ಡಾಲರ್‌ಗೆ ತಲುಪಿದೆ. ಭಾರತದಲ್ಲಿ ಬಹುಪಾಲು ಯುನಿಕಾರ್ನ್‌ಗಳು ಕಾರ್ಪೊರೇಟ್‌ಗಳು ಚೀನಾದ ಹೂಡಿಕೆ ಸಂಸ್ಥೆಗಳಿಂದ ಪ್ರಭಾವಿತವಾಗಿವೆ ಎಂದು ಡೇಟಾ ಮತ್ತು ವಿಶ್ಲೇಷಣಾ ಸಂಸ್ಥೆ ಗ್ಲೋಬಲ್ ಡಾಟಾ ಹೇಳಿದೆ.

Recommended Video

ಸಿದ್ದರಾಮಯ್ಯನ ಸೊಸೆ ಮೇಘನಾರಾಜ್ ಮನೆಗೆ ಬಂದ್ರು | Smitha Rakesh meets Meghana Raj & Family

ಗ್ಲೋಬಲ್‌ಡೇಟಾದ ಗುಪ್ತಚರ ಕೇಂದ್ರವು ಕಳೆದ ನಾಲ್ಕು ವರ್ಷಗಳಲ್ಲಿ ಚೀನಾದ ಸ್ಟಾರ್ಟ್ ಅಪ್‌ಗಳಲ್ಲಿ 12 ಪಟ್ಟು ಬೆಳವಣಿಗೆಯನ್ನು ಗುರುತು ಮಾಡಿದೆ. 2016 ರಲ್ಲಿ 381 ಮಿಲಿಯನ್ ಡಾಲರ್‌ನಿಂದ 2019 ರಲ್ಲಿ 4.6 ಬಿಲಿಯನ್ ಡಾಲರ್‌ಗೆ ತೋರಿಸಿದೆ.

ಚೀನಾ ಮಿಲಿಟರಿಗೆ ಸೇರಿದ 20 ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದ ಪೆಂಟಗನ್ಚೀನಾ ಮಿಲಿಟರಿಗೆ ಸೇರಿದ 20 ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದ ಪೆಂಟಗನ್

ಚೀನಾದ ಹೂಡಿಕೆ 12 ಪಟ್ಟು ಏರಿಕೆ

ಚೀನಾದ ಹೂಡಿಕೆ 12 ಪಟ್ಟು ಏರಿಕೆ

ಒಂದು ಕಾಲದಲ್ಲಿ ಚೀನಾ ಅಗ್ಗದ ರಫ್ತು ಮಾಡುವ ದೇಶವಾಗಿತ್ತು. ಆದರೆ 2015 ರ ನಂತರ ತಂತ್ರಗಳು ಬದಲಾದವು. ಸ್ಟಾರ್ಟ್ಅಪ್ ಆಯಕಟ್ಟಿನ ರೀತಿಯಲ್ಲಿ ಕಂಪನಿಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಚೀನಾದ ಕಂಪನಿಗಳು ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಿವೆ. 2016 ರಿಂದ 2019 ರವರೆಗೆ ಭಾರತದಲ್ಲಿ ಚೀನಾದ ಹೂಡಿಕೆ 12 ಪರ್ಸೆಂಟ್ ಹೆಚ್ಚಾಗಿದೆ. 2016 ರಲ್ಲಿ ಚೀನಾದ ಹೂಡಿಕೆಗಳು ಕೇವಲ 381 ಮಿಲಿಯನ್ ಡಾಲರ್ (ಸುಮಾರು 3,048 ಕೋಟಿ ರೂ.) ಮತ್ತು 2019 ರ ವೇಳೆಗೆ ಅವು 4.6 ಬಿಲಿಯನ್ ಡಾಲರ್(ಸುಮಾರು 36,800 ಕೋಟಿ ರೂ.) ಕ್ಕೆ ಏರಿದೆ.

ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ಚೀನಾ ತಂತ್ರ

ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ಚೀನಾ ತಂತ್ರ

ಭಾರತದಲ್ಲಿನ ಯೂನಿಕಾರ್ನ್ ಸ್ಟಾರ್ಟ್ಅಪ್ ಕಂಪನಿಗಳಲ್ಲಿ ಹೆಚ್ಚಿನ ಹೂಡಿಕೆ ಕೇವಲ ಎರಡು ಚೀನಾದ ಕಂಪನಿಗಳಿಂದ ಬಂದಿರುವುದು ಗಮನಾರ್ಹ. ಅವುಗಳಲ್ಲಿ ಒಂದು ಚೀನಾದ ಪ್ರವರ್ತಕ ಜ್ಯಾಕ್ ಮಾಗೆ ಸೇರಿದ ಅಲಿಬಾಬಾ ಗ್ರೂಪ್. ಎರಡನೆಯದು ಟೆನ್ಸೆಂಟ್ ಗ್ರೂಪ್.


ಭಾರತದಲ್ಲಿ ಪ್ರಸ್ತುತ 24 ಯುನಿಕಾರ್ನ್ ಸ್ಟಾರ್ಟ್ಅಪ್ ಕಂಪನಿಗಳಿವೆ. ಅವುಗಳಲ್ಲಿ 17 ಯುನಿಕಾರ್ನ್ ಕಂಪನಿಗಳು ಚೀನಾದಲ್ಲಿ ಅತಿ ಹೆಚ್ಚು ಹೂಡಿಕೆ ಹೊಂದಿವೆ. ಯುನಿಕಾರ್ನ್ ಕಂಪನಿಗಳು 1 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿರುವ ಕಂಪನಿಗಳಾಗಿವೆ. ಪ್ರಸ್ತುತ, ದೇಶದ ಪ್ರತಿ ಆರಂಭಿಕ ಕಂಪನಿಯಲ್ಲೂ ಚೀನಾದ ಹೂಡಿಕೆ ಹೆಚ್ಚುತ್ತಿದೆ. ಕೆಲವು ಸಂದರ್ಭಗಳಲ್ಲಿ, ಇದು ಸಂಪೂರ್ಣವಾಗಿ ಚೀನಾದ ಹೂಡಿಕೆ ಸಂಸ್ಥೆಗಳಿಂದ ಪ್ರಾಬಲ್ಯ ಹೊಂದಿದೆ ಎಂದು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!

ಪೇಟಿಎಂ, ಓಲಾ, ಬೈಜೂಸ್‌ನಲ್ಲೂ ಹೂಡಿಕೆ

ಪೇಟಿಎಂ, ಓಲಾ, ಬೈಜೂಸ್‌ನಲ್ಲೂ ಹೂಡಿಕೆ

ಹೌದು ಪೇಟಿಎಂ, ಓಲಾ, ಬೈಜೂಸ್‌ ಕಂಪನಿಗಳ ಕುರಿತು ನೀವು ಕೇಳಿದ್ದಿರಿ. ಆದರೆ ನೀವು ಯೋಚಿಸುವ ಯಾವುದೇ ಆರಂಭಿಕ ಕಂಪನಿಗಳು ಸಂಪೂರ್ಣವಾಗಿ ನಮ್ಮ ಒಡೆತನದಲ್ಲಿಲ್ಲ. ಅಲಿಬಾಬಾ ಗ್ರೂಪ್ ಪೇಟಿಎಂ, ಬಿಗ್ ಬಾಸ್ಕೆಟ್, ಸ್ನ್ಯಾಪ್ ಡೀಲ್ ಮತ್ತು ಜ್ಹೊಮ್ಯಾಟೊದಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ. ಟೆನ್ಸೆಂಟ್ ಗ್ರೂಪ್ ಆ್ಯಪ್ ಬೇಸ್ ಸಂಸ್ಥೆ ಓಲಾ, ಸ್ವಿಗ್ಗಿ, ಬೈಜೂಸ್, ಹೈಕ್ ಮತ್ತು ಡ್ರೀಮ್ 11 ನಲ್ಲಿ ಹೂಡಿಕೆ ಮಾಡಿದೆ.

ಡಜನ್‌ಗಟ್ಟಲೇ ಕಂಪನಿಗಳು ಭಾರತದಲ್ಲಿ ಹೂಡಿಕೆ

ಡಜನ್‌ಗಟ್ಟಲೇ ಕಂಪನಿಗಳು ಭಾರತದಲ್ಲಿ ಹೂಡಿಕೆ

ಅಲಿಬಾಬಾ, ಟೆನ್ಸೆಂಟ್ ಎರಡು ಕಂಪನಿ ಮಾತ್ರವಲ್ಲ, ಡಜನ್‌ಗಟ್ಟಲೇ ಚೀನೀ ಹೂಡಿಕೆ ಕಂಪನಿಗಳು ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿವೆ. ಆದರೆ, ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ವಿವಾದದಿಂದ ಇದು ತಾತ್ಕಾಲಿಕವಾಗಿ ಮುರಿಯಲ್ಪಡುತ್ತದೆ ಎಂದು ವಿಶ್ಲೇಷಕರು ಗ್ರಹಿಸಿದ್ದಾರೆ. ಆದಾಗ್ಯೂ, ಉಭಯ ದೇಶಗಳ ನಡುವೆ ಬೃಹತ್ ದ್ವಿಪಕ್ಷೀಯ ವ್ಯಾಪಾರ ಇರುವುದರಿಂದ ಉಭಯ ದೇಶಗಳ ನಡುವೆ ಯಾವುದೇ ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

ಚೀನಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳಿಗೆ ಅಮೆರಿಕ ವೀಸಾ ನಿರ್ಬಂಧಚೀನಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳಿಗೆ ಅಮೆರಿಕ ವೀಸಾ ನಿರ್ಬಂಧ

English summary
12 times growth of chinese investments in indian start-ups over the past 4 years to USD 4.6 billion in 2019 from USD 381 Million In 2016 according to data and analytics firm Globaldata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X