ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್‌ ಟಾಕ್ ಬ್ಯಾನ್: ಚೀನಾ ಸರ್ಕಾರ ಬಳಕೆದಾರರ ಡೇಟಾವನ್ನು ಕೋರಿಲ್ಲ ಎಂದ ಕಂಪನಿ

|
Google Oneindia Kannada News

ನವದೆಹಲಿ, ಜುಲೈ 4: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಜೂನ್ 29ರಂದು ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ ಭಾರತದಲ್ಲಿ ಭಾರೀ ಮಾರುಕಟ್ಟೆಯನ್ನು ಹೊಂದಿರುವ ಟಿಕ್‌ ಟಾಕ್ ಭಾರತ ಸರ್ಕಾರವನ್ನು ಭೇಟಿ ಮಾಡಿ ಬ್ಯಾನ್ ಕುರಿತು ಚರ್ಚಿಸಲಿದೆ ಎಂದು ಕೂಡ ವರದಿಯಾಗಿತ್ತು. ಈ ಭೇಟಿ ಜೊತೆಗೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಚೀನಾದ ಯಾವುದೇ ಹಸ್ತಕ್ಷೇಪ ಇರದು ಎಂದು ಟಿಕ್‌ ಟಾಕ್ ಹೇಳಿದೆ.

Recommended Video

ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

ರಾಯಿಟರ್ಸ್ ನೋಡಿದ ಪತ್ರವ್ಯವಹಾರದ ಪ್ರಕಾರ, ಭಾರತದಲ್ಲಿ 59 ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿದ ನಂತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್‌ಟಾಕ್ ಬೀಜಿಂಗ್‌ನಿಂದ ದೂರ ಉಳಿದಿದೆ ಎನ್ನಲಾಗಿದೆ.

ಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿಟಿಕ್‌ಟಾಕ್ ನಿಷೇಧ : ಕೇಂದ್ರ ಸರ್ಕಾರದ ಜೊತೆ ಬ್ಯಾನ್ ಕುರಿತು ಚರ್ಚಿಸಲಿರುವ ಟಿಕ್‌ ಟಾಕ್ ಕಂಪನಿ

ಚೀನಾ ಸರ್ಕಾರ ಎಂದಿಗೂ ಬಳಕೆದಾರರ ಡೇಟಾವನ್ನು ಕೋರಿಲ್ಲ

ಚೀನಾ ಸರ್ಕಾರ ಎಂದಿಗೂ ಬಳಕೆದಾರರ ಡೇಟಾವನ್ನು ಕೋರಿಲ್ಲ

ಜೂನ್ 28 ರಂದು ಭಾರತೀಯ ಸರ್ಕಾರಕ್ಕೆ ಟಿಕ್‌ಟಾಕ್ ಮುಖ್ಯ ಕಾರ್ಯನಿರ್ವಾಹಕ ಕೆವಿನ್ ಮೇಯರ್ ಬರೆದ ಪತ್ರವನ್ನು ನೋಡಿದೆ ಎಂದು ವರದಿ ಮಾಡಿರುವ ರಾಯಿಟರ್ಸ್ ಪ್ರಕಾರ, ಚೀನಾ ಸರ್ಕಾರ ಎಂದಿಗೂ ಬಳಕೆದಾರರ ಡೇಟಾವನ್ನು ಕೋರಿಲ್ಲ, ಅಥವಾ ಕೇಳಿದರೆ ಕಂಪನಿಯು ಅದನ್ನು ನೀಡುವುದಿಲ್ಲ ಎಂದು ಕೆವಿನ್ ಮೇಯರ್ ಬರೆದಿದ್ದಾರೆ.

ಸಿಂಗಾಪುರದಲ್ಲಿದೆಯಂತೆ ಭಾರತೀಯ ಬಳಕೆದಾರರ ಡೇಟಾ

ಸಿಂಗಾಪುರದಲ್ಲಿದೆಯಂತೆ ಭಾರತೀಯ ಬಳಕೆದಾರರ ಡೇಟಾ

''ಭಾರತೀಯ ಬಳಕೆದಾರರ ಟಿಕ್‌ಟಾಕ್ ಡೇಟಾಕ್ಕಾಗಿ ಚೀನಾ ಸರ್ಕಾರ ಎಂದಿಗೂ ನಮಗೆ ವಿನಂತಿಯನ್ನು ನೀಡಿಲ್ಲ ಎಂದು ನಾನು ಖಚಿತಪಡಿಸುತ್ತೇನೆ" ಎಂದು ಮೇಯರ್ ಪತ್ರ ಬರೆದಿರುವ ಜೊತೆಗೆ '' ಭಾರತೀಯ ಬಳಕೆದಾರರ ಡೇಟಾವನ್ನು ಸಿಂಗಾಪುರದ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದೆ. "ಭವಿಷ್ಯದಲ್ಲಿ ನಾವು ಎಂದಾದರೂ ಅಂತಹ ವಿನಂತಿಯನ್ನು ಸ್ವೀಕರಿಸಿದರೆ, ನಾವು ಅದನ್ನು ಅನುಸರಿಸುವುದಿಲ್ಲ." ಎಂದು ಪತ್ರದಲ್ಲಿ ಬರೆಯಲಾಗಿದೆ.

ಮುಂದಿನ ವಾರ ಕಂಪನಿ ಮತ್ತು ಸರ್ಕಾರದ ನಡುವಿನ ಸಭೆಯ ಮುಂಚೆಯೇ ಈ ಪತ್ರವನ್ನು ಕಳುಹಿಸಲಾಗಿದೆ, ಈ ವಿಷಯವನ್ನು ತಿಳಿದಿರುವ ಒಂದು ಮೂಲವು ರಾಯಿಟರ್ಸ್‌ಗೆ ತಿಳಿಸಿದೆ.

ಚೀನಾದಿಂದ ದೂರ ಉಳಿದಿದ್ದೇವೆ ಎಂದಿರುವ ಕಂಪನಿ

ಚೀನಾದಿಂದ ದೂರ ಉಳಿದಿದ್ದೇವೆ ಎಂದಿರುವ ಕಂಪನಿ

ಚೀನಾದಲ್ಲಿ ಲಭ್ಯವಿಲ್ಲದ ಟಿಕ್‌ಟಾಕ್, ಚೀನಾದ ಬೈಟ್‌ಡ್ಯಾನ್ಸ್‌ನ ಒಡೆತನದಲ್ಲಿದೆ. ಆದರೆ, ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸಲು ತನ್ನ ಚೀನೀ ಮೂಲಗಳಿಂದ ದೂರವಿರಲು ಪ್ರಯತ್ನಿಸಿದೆ ಎಂದು ಟಿಕ್‌ ಟಾಕ್ ಹೇಳಿದೆ. ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ವೀಚಾಟ್ ಮತ್ತು ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್‌ನ ಯುಸಿ ಬ್ರೌಸರ್ ಸೇರಿದಂತೆ 58 ಇತರ ಚೀನೀ ಅಪ್ಲಿಕೇಶನ್‌ಗಳ ಜೊತೆಗೆ, ಚೀನಾದೊಂದಿಗಿನ ಗಡಿ ಘರ್ಷಣೆಯ ನಂತರ ಭಾರತದಲ್ಲಿ ನಿಷೇಧಿಸಲಾಗಿದೆ.

 ಟಿಕ್‌ ಟಾಕ್ ನಿಷೇಧ ಹಿಂತೆಗೆತವಿಲ್ಲ

ಟಿಕ್‌ ಟಾಕ್ ನಿಷೇಧ ಹಿಂತೆಗೆತವಿಲ್ಲ

ಟಿಕ್‌ಟಾಕ್‌ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎಂದು ಭಾರತೀಯ ಸರ್ಕಾರದ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ. ಕಾನೂನು ಸವಾಲು ಯಶಸ್ವಿಯಾಗುವ ಸಾಧ್ಯತೆಯಿಲ್ಲ ಎಂದು ವಕೀಲರು ಹೇಳಿದ್ದಾರೆ, ಭಾರತವು ನಿಷೇಧಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿದೆ. ಹೀಗಾಗಿ ನಿಷೇಧ ಹಿಂತೆಗೆತ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಟಿಕ್‌ ಟಾಕ್ ಬ್ಯಾನ್‌ನಿಂದ ರೊಪೊಸೊ, ಚಿಂಗಾರಿಗೆ ಲಾಭ

ಟಿಕ್‌ ಟಾಕ್ ಬ್ಯಾನ್‌ನಿಂದ ರೊಪೊಸೊ, ಚಿಂಗಾರಿಗೆ ಲಾಭ

ಭಾರತದ ಭಾರೀ ವೇಗದಲ್ಲಿ ಬೆಳೆಯುತ್ತಿದ್ದ ಟಿಕ್‌ ಟಾಕ್‌ ಬ್ಯಾನ್‌ನಿಂದಾಗಿ ಸ್ಥಳೀಯ ಪ್ರತಿಸ್ಪರ್ಧಿಗಳಾದ ರೊಪೊಸೊಗೆ ಲಾಭವಾಗಿದೆ.ಟಿಕ್‌ ಟಾಕ್ ನಿಷೇಧ ಜಾರಿಗೆ ಬಂದ 48 ಗಂಟೆಗಳಲ್ಲಿ 22 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿದೆ. ಜೊತೆಗೆ ಚಿಂಗಾರಿ ಅಪ್ಲಿಕೇಶನ್ ಈಗಾಗಲೇ 1 ಕೋಟಿ ಡೌನ್‌ಲೋಡ್ ಆಗಿದೆ.

ಟಿಕ್‌ಟಾಕ್‌ನ ದೇಸಿ ಪರ್ಯಾಯ ಆ್ಯಪ್ 'ಚಿಂಗಾರಿ' 25 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಟಿಕ್‌ಟಾಕ್‌ನ ದೇಸಿ ಪರ್ಯಾಯ ಆ್ಯಪ್ 'ಚಿಂಗಾರಿ' 25 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌

 ಟಿಕ್‌ಟಾಕ್‌ನಿಂದ 3,500 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ

ಟಿಕ್‌ಟಾಕ್‌ನಿಂದ 3,500 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ

ರಾಯಿಟರ್ಸ್ ವರದಿ ಪ್ರಕಾರ ಪತ್ರದಲ್ಲಿ ಮೇಯರ್ ಬರೆದಿರುವಂತೆ ಕಂಪನಿಯ ಹೂಡಿಕೆಯಿಂದಾಗಿ ಭಾರತದಲ್ಲಿ 3,500 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಿಗಳು ಹಾಗೂ 14 ಭಾಷೆಗಳಲ್ಲಿ ಲಭ್ಯವಿರುವ ವಿಷಯವನ್ನು ಎತ್ತಿ ತೋರಿಸಿದೆ.

"ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಭಾರತದ ಭದ್ರತೆ ಮತ್ತು ಸಾರ್ವಭೌಮತ್ವವು ನಮಗೆ ಅತ್ಯಂತ ಮಹತ್ವದ್ದಾಗಿದೆ" ಎಂದು ಮೇಯರ್ ಬರೆದಿದ್ದಾರೆ. ಅಲ್ಲದೆ ಭಾರತದಲ್ಲೇ ಡೇಟಾ ಸೆಂಟರ್ ನಿರ್ಮಿಸುವ ನಮ್ಮ ಯೋಜನೆಗಳನ್ನು ನಾವು ಈಗಾಗಲೇ ಘೋಷಿಸಿದ್ದೇವೆ." ಎಂದಿದ್ದಾರೆ.

ಪತ್ರ ವ್ಯವಹಾರವನ್ನು ಮೊದಲು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಇತರ ಮಾಧ್ಯಮಗಳು ವರದಿ ಮಾಡಿವೆ.

English summary
Social media app TikTok In the letter indian government , TikTok Chief Executive Kevin Mayer said the Chinese government has never requested user data, nor would the company turn it over if asked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X