• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾನುವಾರದಿಂದ ಅಮೆರಿಕಾದಲ್ಲಿ ನಿಷೇಧಗೊಳ್ಳಲಿದೆ ಟಿಕ್‌ಟಾಕ್, ವೀಚಾಟ್!

|

ವಾಷಿಂಗ್ಟನ್, ಸೆಪ್ಟೆಂಬರ್ 18: ಚೀನಾದ ಜನಪ್ರಿಯ ವೀಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲು ಮತ್ತು ಮೆಸೇಜಿಂಗ್ ಮತ್ತು ಪಾವತಿ ಪ್ಲಾಟ್‌ಫಾರ್ಮ್ ವೀಚಾಟ್ ಬಳಕೆಯನ್ನು ನಿಷೇಧಿಸಲು ಅಮೆರಿಕಾ ಶುಕ್ರವಾರ ಆದೇಶಿಸಿದೆ. ಈ ಆ್ಯಪ್‌ಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನು ಹೊಂದಿದೆ ಎಂದು ಹೇಳಿದೆ.

ಅಮೆರಿಕಾ-ಚೀನಾ ಉದ್ವಿಗ್ನತೆ ಮತ್ತು ಅಮೆರಿಕದ ಹೂಡಿಕೆದಾರರಿಗೆ ಟಿಕ್ಟಾಕ್ ಮಾರಾಟದ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿ ಟ್ರಂಪ್ ಆಡಳಿತದ ಪ್ರಯತ್ನಗಳ ಮಧ್ಯೆ ಈ ಕ್ರಮವು ಭಾನುವಾರ ಜಾರಿಗೆ ಬರಲಿದೆ.

ಟಿಕ್‌ಟಾಕ್ -ಒರಾಕಲ್‌ ಒಪ್ಪಂದವನ್ನು ಪ್ರಶ್ನಿಸಿದ ಡೊನಾಲ್ಡ್‌ ಟ್ರಂಪ್: ಶೇ.100ರಷ್ಟು ಆಗಿರಬೇಕು ಎಂದು ತಾಕೀತು

"ಚೀನಾದ ಕಮ್ಯುನಿಸ್ಟ್ ಪಕ್ಷವು ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕದ ಆರ್ಥಿಕತೆಗೆ ಧಕ್ಕೆ ತರಲು ಈ ಅಪ್ಲಿಕೇಶನ್‌ಗಳನ್ನು ಬಳಸುವ ವಿಧಾನಗಳು ಮತ್ತು ಉದ್ದೇಶಗಳನ್ನು ಪ್ರದರ್ಶಿಸಿದೆ" ಎಂದು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿಕ್‌ಟಾಕ್ ಮಾಲೀಕರಾದ ಬೈಟ್‌ಡ್ಯಾನ್ಸ್‌ಗೆ ಅಮೆರಿಕಾ ಕಾರ್ಯಾಚರಣೆಯನ್ನು ಅಮೆರಿಕಾದ ಕಂಪನಿಗೆ ಮಾರಾಟ ಮಾಡಲು 90 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಅಂತೆಯೇ ಅನೇಕ ಕಂಪನಿಗಳು ಮಾತುಕತೆ ನಡೆಸಿದ್ದವು.

ಒರಾಕಲ್ ಕಾರ್ಪ್ ಈಗಾಗಲೇ ಬಹುತೇಕ ಅಂತಿಮ ಹಂತದ ಮಾತುಕತೆಯವರೆಗೆ ತಲುಪಿದೆ. ಅಮೆರಿಕಾ ಅಷ್ಟೇ ಅಲ್ಲದೆ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಖರೀದಿಸಲು ಗಂಭೀರವಾಗಿ ಪರಿಗಣಿಸುತ್ತಿದೆ. ಈ ವೇಳೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟಿಕ್‌ಟಾಕ್ ಕುರಿತಾಗಿ ಸಂಪೂರ್ಣ ಪಾಲು ಅಮೆರಿಕಾ ಕಂಪನಿಗೆ ನೀಡಿರಬೇಕು , ಈ ಕುರಿತು ತಾನೇ ಖುದ್ದಾಗಿ ಒರಾಕಲ್ -ಟಿಕ್‌ಟಾಕ್ ಒಪ್ಪಂದ ಪರಿಶೀಲಿಸುವುದಾಗಿ ತಿಳಿಸಿದ್ದರು.

"ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಶೇ. 100ರಷ್ಟು ಆಗಿರಬೇಕು. ಮತ್ತು ನಾನು ಒಪ್ಪಂದವನ್ನು ನೋಡಬೇಕಾಗಿದೆ." ಎಂದು ಟ್ರಂಪ್ ಇತ್ತೀಚೆಗಷ್ಟೇ ಹೇಳಿದರು.

ಆದರೆ ಈಗ ಅಮೆರಿಕಾದ ಈ ಕ್ರಮವನ್ನು ನೋಡಿದರೆ ಟಿಕ್‌ಟಾಕ್ ಅಮೆರಿಕಾ ಕಾರ್ಯಾಚರಣೆ ಪಾಲು ಸಂಪೂರ್ಣವಾಗಿ ಅಮೆರಿಕಾದ ಕಂಪನಿಗೆ ಲಭ್ಯವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಚೀನಾದ ಟೆಕ್ ಕಾರ್ಯಾಚರಣೆಗಳನ್ನು ಬೇಹುಗಾರಿಕೆಗಾಗಿ ಬಳಸಬಹುದೆಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಅಮೆರಿಕಾ ಭದ್ರತಾ ಕಾಳಜಿಗಳನ್ನು ನಿವಾರಿಸಲು ಟಿಕ್‌ಟಾಕ್‌ನ ಎಲ್ಲಾ ಅಥವಾ ಸಂಪೂರ್ಣ ಪಾಲನ್ನು ಮಾರಾಟ ಮಾಡುವ ಒಪ್ಪಂದವನ್ನು ಮುಕ್ತಾಯಗೊಳಿಸಲು ಟಿಕ್‌ಟಾಕ್ ಮೂಲ ಬೈಟ್‌ಡಾನ್ಸ್‌ನ ಮೇಲೆ ಒತ್ತಡವನ್ನು ಹೆಚ್ಚಿಸಿದ್ದಾರೆ.

English summary
America friday Ordered a ban on downloads of popular chinese owned video app Tiktok and messaging and payment paltform wechat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X