ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿ ಆ್ಯಪ್ಸ್‌ ಬ್ಯಾನ್:6 ದಿನದಲ್ಲಿ 1 ಕೋಟಿ ಡೌನ್‌ಲೋಡ್ ಆದ ಮೊಜ್ ಆ್ಯಪ್

|
Google Oneindia Kannada News

ನವದೆಹಲಿ, ಜುಲೈ 7: ಭಾರತೀಯ ಪ್ರಾದೇಶಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್‌ಚಾಟ್‌ನ ಮೊಜ್ ಆ್ಯಪ್, ಜೂನ್ 29 ರಂದು ಭಾರತ ಸರ್ಕಾರವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ನಂತರ ಪ್ರಾರಂಭಿಸಲಗಿತು. ಆಶ್ಚರ್ಯದ ವಿಚಾರ ಏನಪ್ಪಾ ಅಂದರೆ, ಆರು ದಿನಗಳಲ್ಲಿ 10 ದಶಲಕ್ಷ ಡೌನ್‌ಲೋಡ್‌ಗಳನ್ನು ಗಳಿಸಿದೆ.

ಮಂಗಳವಾರ ಮಾಡಿದ ಟ್ವೀಟ್‌ನಲ್ಲಿ, ಶೇರ್‌ಚಾಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಂಕುಶ್ ಸಚ್‌ದೇವ ಅವರು 30 ಗಂಟೆಗಳಲ್ಲಿ ಅಪ್ಲಿಕೇಶನ್ ಅನ್ನು ಕೋಡ್ ಮಾಡಲಾಗಿದ್ದು, ಇಂದು ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ನ ಉಚಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಟಿಕ್‌ ಟಾಕ್ ಬ್ಯಾನ್: ಚೀನಾ ಸರ್ಕಾರ ಬಳಕೆದಾರರ ಡೇಟಾವನ್ನು ಕೋರಿಲ್ಲ ಎಂದ ಕಂಪನಿಟಿಕ್‌ ಟಾಕ್ ಬ್ಯಾನ್: ಚೀನಾ ಸರ್ಕಾರ ಬಳಕೆದಾರರ ಡೇಟಾವನ್ನು ಕೋರಿಲ್ಲ ಎಂದ ಕಂಪನಿ

ಮೊಜ್ ಒಂದು ಕಿರು-ವೀಡಿಯೊ ವೇದಿಕೆಯಾಗಿದ್ದು, ಇದು ಟಿಕ್‌ಟಾಕ್‌ನ ವೈಶಿಷ್ಟ್ಯಗಳನ್ನು ಅನುಕರಿಸುತ್ತದೆ. ಶೇರ್‌ಚಾಟ್ ಸ್ವತಃ ಹೆಲೋಗೆ ಪ್ರತಿಸ್ಪರ್ಧಿಯಾಗಿದ್ದು, ಟಿಕ್‌ಟಾಕ್‌ನ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್ ಒಡೆತನದ ಮತ್ತೊಂದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದೀಗ ಗೂಗಲ್ ಪ್ಲೇನಲ್ಲಿನ ಉಚಿತ ಉಚಿತ ಅಪ್ಲಿಕೇಶನ್‌ಗಳಲ್ಲಿ ಮೂಲ ಅಪ್ಲಿಕೇಶನ್ ಅನ್ನು ಸಹ ಪಟ್ಟಿ ಮಾಡಲಾಗಿದೆ.

Chinese Apps Ban:Sharechats Moj App 10 Million Downloads In 6 Days

ಚೀನೀ ಅಪ್ಲಿಕೇಶನ್‌ಗಳ ನಿಷೇಧವು ಇತ್ತೀಚೆಗೆ ಭಾರತೀಯ ಅಪ್ಲಿಕೇಶನ್‌ಗಳಿಗೆ ದೊಡ್ಡ ಪ್ರಗತಿಗೆ ದಾರಿ ಮಾಡಿದೆ. ಜನರು ಟಿಕ್‌ಟಾಕ್ ಪರ್ಯಾಯಗಳನ್ನು ಹುಡುಕುತ್ತಿರುವುದರಿಂದ ಶೇರ್‌ಚಾಟ್‌ನಂತಹ ಅಪ್ಲಿಕೇಶನ್‌ಗಳು ಬಳಕೆದಾರರ ಒಳಹರಿವನ್ನು ಕಂಡಿದೆ. ಚಿಂಗಾರಿ, ಮಿಟ್ರಾನ್, ರೊಪೊಸೊ ಮತ್ತು ಬೊಲೊ ಇಂಡಿಯಾದಂತಹ ಇತರ ಭಾರತೀಯ ಅಪ್ಲಿಕೇಶನ್‌ಗಳು ನಿಷೇಧದ ನಂತರ ಡೌನ್‌ಲೋಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಪಡೆದಿವೆ.

ಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆ

ಚೀನಾದ ಆ್ಯಪ್‌ಗಳನ್ನು "ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತ" ಎಂಬ ಕಾರಣಕ್ಕೆ ಸರ್ಕಾರ ಅವುಗಳನ್ನು ನಿಷೇಧಿಸಿತ್ತು.

English summary
Indian regional social media platform Sharechat’s Moj app, 10 Million Downloads In 6 Days After Indian government on 29 June banned 59 Chinese apps
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X