• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟ್‌ಕಾಯಿನ್ ಖರೀದಿ ಮಾಡಿದ ಚೀನಾ APPS ತಯಾರಿಕಾ ಕಂಪನಿ !

|
Google Oneindia Kannada News

ಬೆಂಗಳೂರು, ಮಾರ್ಚ್‌ 10: ಚೀನಾದ ಅಗ್ರಗಣ್ಯ ಆಪ್ ತಯಾರಿಕಾ ಕಂಪನಿ ಮೇತೂ ಐಎನ್ ಸಿ, 40 ಮಿಲಿಯನ್ ಮೌಲ್ಯದ ಬಿಟ್‌ ಕಾಯಿನ್ ಖರೀದಿಸಿದೆ. ಈ ಮೂಲಕ ತನ್ನ ಟ್ರಜರಿಯಲ್ಲಿ ನೂರು ಮಿಲಿಯನ್ ಮೌಲ್ಯದ ಕ್ರಿಪ್ಟೋ ಕರೆನ್ಸಿ ಹೊಂದಿರುವುದಾಗಿ ಪ್ರಕಟಿಸುವ ಮೂಲಕ ಚೀನಾ ಮೂಲದ ಕಂಪನಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.

2008 ರಲ್ಲಿ ಆರಂಭವಾದ ಮೇತೂ ಐಎನ್ ಸಿ ಕಂಪನಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಿಸಿ ನಾನಾ ಆಪ್‌ಗಳನ್ನು ತಯಾರಿಸಿದೆ. ಈ ಸಂಸ್ಥೆಯ ಆಪ್ ಗಳನ್ನು ವಿಶ್ವದಾದ್ಯಂತ 1 ಬಿಲಿಯನ್ ಯೂಸರ್ಸ್ ಹೊಂದಿದೆ. ಮೇತೂ ಆಪ್‌ಗಳನ್ನು ಮಾಸಿಕ 295 ಮಿಲಿಯನ್ ಜನರು ಳಕೆ ಮಾಡುತ್ತಿದ್ದಾರೆ. ವಿಶ್ವದ ಹದಿನೈದು ದೇಶಗಳಲ್ಲಿ ತಲಾ ಹತ್ತು ಮಿಲಿಯನ್ ಮಂದಿ ಮೇತೂ ಆಪ್ ಬಳಕೆ ಮಾಡುವ ಗ್ರಾಹಕರಿದ್ದಾರೆ.

ಮಾರ್ಚ್ 9ರಂದು ಬಿಟ್ ಕಾಯಿನ್ ಮೌಲ್ಯ ಮತ್ತೆ ಏರಿಕೆಮಾರ್ಚ್ 9ರಂದು ಬಿಟ್ ಕಾಯಿನ್ ಮೌಲ್ಯ ಮತ್ತೆ ಏರಿಕೆ

ಇನ್ನು ಬಿಟ್ ಕಾಯಿನ್ ಖರೀದಿ ಬಗ್ಗೆ ಮೇತೂ ಕಂಪನಿ ಹೇಳಿಕೆ ನೀಡುತ್ತಿದ್ದಂತೆ ಕಂಪನಿ ಷೇರು ಮೌಲ್ಯ ಶೇ. 14 ಕ್ಕೇರಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ಜಾಗತಿಕ ಪ್ರಖ್ಯಾತಿ ಕ್ರಿಪ್ಟೋ ಕರೆನ್ಸಿಯನ್ನು ಖರೀದಿಸಿದ್ದೇವೆ ಎಂದು ಹೇಳಿಕೊಂಡಿದೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಸಂಬಂಧ ಕಂಪನಿ ಎಲ್ಲಾ ಬೋರ್ಡ್ ಡೈರಕ್ಟರ್ ಬಳಿ ಚರ್ಚಿಸಿ ಅವರಿಂದ ಅನುಮತಿ ಪಡೆದ ಬಳಿಕವಷ್ಟೇ ಖರೀಸಿದ್ದು ಎಂದೂ ಸಹ ಹೇಳಿಕಂಡಿದೆ. ಇದೀಗ ತನ್ನ ಬಳಿ ನೂರು ಮಿಲಿಯನ್ ಮೌಲ್ಯದ ಕ್ರಿಪ್ಟೋ ಕರೆನ್ಸಿ ಇರುವುದಾಗಿ ತಿಳಿಸಿದೆ.

ಇತ್ತೀಚೆಗೆ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ 1.5 ಬಿಲಿಯನ್ ಮೌಲ್ಯದ ಬಿಟ್ ಕಾಯಿನ್ ಖರೀದಿಸಿ ಸುದ್ದಿಯಾಗಿದ್ದರು. ತನ್ನ ಉಪಕರಣಗಳನ್ನು ಬಿಟ್ ಕಾಯಿನ್ ಗೆ ಮಾರಾಟ ಮಾಡುವುದಾಗಿ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಟೆಸ್ಲಾ ಷೇರು ಮೌಲ್ಯ ಪಾತಾಳಕ್ಕೆ ಕುಸಿದಿತ್ತು. ವಿಯರ್ಯಾಸ ಎಂದರೆ ಚೀನಾ ಮೂಲದ ಕಂಪನಿ ಬಿಟ್ ಕಾಯಿನ್ ಖರೀದಿ ಮಾಡಿದ ಬೆನ್ನಲ್ಲೇ ಅದರ ಷೇರು ಶೇ. 14 ರಷ್ಟು ಮೌಲ್ಯ ಹೆಚ್ಚಳಗೊಂಡಿದೆ.

English summary
Chinese App Meitu buys 40 million of Bitcoin know more...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X