ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಎಂಟೇ ವರ್ಷ: ಅಮೆರಿಕಕ್ಕೆ ಭಾರಿ ಹೊಡೆತ ನೀಡಲಿದೆ ಚೀನಾ!

|
Google Oneindia Kannada News

ಲಂಡನ್, ಡಿಸೆಂಬರ್ 26: ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕವನ್ನು 2028ರಲ್ಲಿ ಹಿಂದಿಕ್ಕುವ ಮೂಲಕ ಜಗತ್ತಿನ ಅತಿ ದೊಡ್ಡ ಆರ್ಥಿಕತೆಯಾಗಿ ಚೀನಾ ಹೊರಹೊಮ್ಮಲಿದೆ ಎಂದು ಚಿಂತಕರ ಚಾವಡಿಯೊಂದು ಹೇಳಿದೆ. ಇದಕ್ಕೂ ಮುನ್ನ 2033ರ ವೇಳೆಗೆ ಆರ್ಥಿಕತೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಚೀನಾ ಮುನ್ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಎರಡು ದೇಶಗಳಲ್ಲಿ ಹರಡಿರುವ ಕೊರೊನಾ ವೈರಸ್ ಸೋಂಕಿನ ಸ್ಥಿತಿಯನ್ನು ಗಮನಿಸಿದರೆ ಐದು ವರ್ಷ ಮೊದಲೇ ಚೀನಾ ಈ ಸಾಧನೆ ಮಾಡಲಿದೆ ಎಂದು ಹೇಳಲಾಗಿದೆ.

'ಜಾಗತಿಕ ಆರ್ಥಿಕತೆಗಳ ಬದಲಾಗುವ ಆಲೋಚನೆಗಳು ಚೀನಾ ಮತ್ತು ಅಮೆರಿಕಗಳ ನಡುವಿನ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ರಾಜಕೀಯಗಳ ಹೋಯ್ದಾಟಗಳ ಮೇಲೆ ಅವಲಂಬಿತವಾಗಿರುತ್ತದೆ' ಎಂದು ಆರ್ಥಿಕ ಮತ್ತು ವ್ಯವಹಾರ ಸಂಶೋಧನೆಗಳ ಕೇಂದ್ರವು ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಅತಿದೊಡ್ಡ ಆರ್ಥಿಕತೆಯಾಗುವ ಸಾಮರ್ಥ್ಯವಿದೆ: ಪಿಯೂಷ್ ಗೋಯಲ್ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಅತಿದೊಡ್ಡ ಆರ್ಥಿಕತೆಯಾಗುವ ಸಾಮರ್ಥ್ಯವಿದೆ: ಪಿಯೂಷ್ ಗೋಯಲ್

'ಕೊರೊನಾ ವೈರಸ್ ಪಿಡುಗು ಮತ್ತು ಅದಕ್ಕೆ ಅನುಗುಣವಾದ ಆರ್ಥಿಕ ಕುಸಿತವು ನಿಶ್ಚಿತವಾಗಿಯೂ ಈ ತಿಕ್ಕಾಟದಲ್ಲಿ ಚೀನಾದ ಪರವಾಗಿ ಕೆಲಸ ಮಾಡಲಿದೆ' ಎಂದು ವರದಿ ತಿಳಿಸಿದೆ.

ಸಿಇಬಿಆರ್ ಪ್ರಕಾರ ಚೀನಾವು ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಕೌಶಲದಿಂದ ನಿರ್ವಹಿಸಿದೆ. ಆರಂಭದಲ್ಲಿಯೇ ಕಠಿಣ ಲಾಕ್‌ಡೌನ್ ಜಾರಿಗೆ ತಂದಿತು. ಇದು ಪಶ್ಚಿಮದ ದೀರ್ಘಾವಧಿ ಬೆಳವಣಿಗೆಗೆ ಹೊಡೆತ ನೀಡಿತು. ಜತೆಗೆ ಚೀನಾದ ಆರ್ಥಿಕತೆಯು ಸುಧಾರಣೆಯಾಯಿತು. ಮುಂದೆ ಓದಿ.

ಚೀನಾ ಪ್ರಗತಿ ಹೆಚ್ಚಳ

ಚೀನಾ ಪ್ರಗತಿ ಹೆಚ್ಚಳ

2021-25ರ ಅವಧಿಯಲ್ಲಿ ಚೀನಾ ಪ್ರತಿವರ್ಷ 5.7ರಷ್ಟು ಸರಾಸರಿ ಆರ್ಥಿಕ ಪ್ರಗತಿ ಸಾಧಿಸಲು ನಿರೀಕ್ಷಿಸಿದೆ. 2026-30ರ ಅವಧಿಗೆ ಶೇ 4.5ರ ಸರಾಸರಿಯ ನಿಧಾನಗತಿಯ ಬೆಳವಣಿಗೆ ಉಂಟಾಗಲಿದೆ.

2021ರಿಂದ ಅಮೆರಿಕವು ಮತ್ತೆ ತಲೆ ಎತ್ತಲಿದ್ದು, ಕೋವಿಡ್ ಪಿಡುಗಿನ ನಂತರದ ಅವಧಿಯಲ್ಲಿ ಪ್ರಬಲ ಆರ್ಥಿಕತೆಯನ್ನು ಕಾಣುವ ನಿರೀಕ್ಷೆಯಿದೆ. 2022-2024ರ ಅವಧಿಯಲ್ಲಿ ಅದರ ಬೆಳವಣಿಗೆ ವರ್ಷಕ್ಕೆ ಶೇ 1.9ರಷ್ಟು ನಿಧಾನವಾಗಿ ಸಾಗಲಿದ್ದು, ಬಳಿಕ ಶೇ 1.6ರಷ್ಟು ಇರಲಿದೆ.

ಮೂರನೇ ಸ್ಥಾನಕ್ಕೇರಲಿದೆ ಭಾರತ

ಮೂರನೇ ಸ್ಥಾನಕ್ಕೇರಲಿದೆ ಭಾರತ

ಡಾಲರ್‌ಗಳ ಲೆಕ್ಕದಲ್ಲಿ 2030ರ ಆರಂಭದವರೆಗೂ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಜಪಾನ್ ಮುಂದುವರಿಯಲಿದೆ. ಬಳಿಕ ನಾಲ್ಕನೇ ಸ್ಥಾನದಲ್ಲಿರುವ ಜರ್ಮನಿಯನ್ನು ಐದನೇ ಸ್ಥಾನಕ್ಕೆ ತಳ್ಳುವ ಮೂಲಕ ಭಾರತವು ಜಪಾನ್‌ ಜಾಗವನ್ನು ಆಕ್ರಮಿಸಲಿದೆ ಎಂದು ವರದಿ ತಿಳಿಸಿದೆ.

ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ

ಬ್ರಿಟನ್ ಆರನೇ ಸ್ಥಾನಕ್ಕೆ

ಬ್ರಿಟನ್ ಆರನೇ ಸ್ಥಾನಕ್ಕೆ

ಸಿಇವಿಆರ್ ವರದಿಯ ಪ್ರಕಾರ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಯುನೈಟೆಡ್ ಕಿಂಗ್‌ಡಮ್, 2024ರ ಬಳಿಕ ಆರನೇ ಸ್ಥಾನಕ್ಕೆ ಕುಸಿಯಲಿದೆ.

ಆದರೆ 2021ರ ಬಳಿಕ ಯುರೋಪಿಯನ್ ಒಕ್ಕೂಟದ ಏಕ ಮಾರುಕಟ್ಟೆಯಿಂದ ಹೊರಬಂದರೂ ಬ್ರಿಟನ್‌ನ ಜಿಡಿಪಿಯು 2035ರ ವೇಳೆಗೆ ಫ್ರಾನ್ಸ್‌ಗಿಂತ ಶೇ 23ರಷ್ಟು ಹೆಚ್ಚಾಗಿರಲಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ಬ್ರಿಟನ್ ಪ್ರಮುಖವಾಗಿ ಮುನ್ನಡೆಯಲಿದೆ ಎಂದು ಹೇಳಿದೆ.

ಯುರೋಪ್ ಪಾಲು ಕುಸಿತ

ಯುರೋಪ್ ಪಾಲು ಕುಸಿತ

2020ರಲ್ಲಿ ಟಾಪ್ 10 ಜಾಗತಿಕ ಆರ್ಥಿಕತೆಗಳಲ್ಲಿನ ಶೇ 19ರಷ್ಟು ಪಾಲನ್ನು ಯುರೋಪ್ ಹೊಂದಿದೆ. ಆದರೆ 2035ರ ವೇಳೆಗೆ ಇದು ಶೇ 12ಕ್ಕೆ ಇಳಿಯಲಿದೆ. ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್ ನಡುವಿನ ವಿಭಜನೆ ಕಠೋರವಾಗಿದ್ದರೆ ಅದು ಮತ್ತಷ್ಟು ಕಡಿಮೆಇರಲಿದೆ ಎಂದು ಸಿಇಬಿಆರ್ ತಿಳಿಸಿದೆ.

2021ರಲ್ಲಿ ಭಾರತವು ವೇಗವಾಗಿ ಬೆಳೆಯಲಿರುವ ಏಷ್ಯಾದ ಆರ್ಥಿಕತೆಯಾಗಲಿದೆ!2021ರಲ್ಲಿ ಭಾರತವು ವೇಗವಾಗಿ ಬೆಳೆಯಲಿರುವ ಏಷ್ಯಾದ ಆರ್ಥಿಕತೆಯಾಗಲಿದೆ!

English summary
An annual report by CEBR says China will overtake US as world's biggest economy by 2028.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X