ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಮೊಬೈಲ್‌ಗಳಿಗೆ ಇಳಿದ ಬೇಡಿಕೆ: ಜೂನ್ ತ್ರೈಮಾಸಿಕದಲ್ಲಿ ಮಾರಾಟ ಕುಸಿತ

|
Google Oneindia Kannada News

ನವದೆಹಲಿ, ಜುಲೈ 25: ಗಡಿ ಸಂಘರ್ಷದ ಬಳಿಕ ಚೀನಾ ಹಲವು ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಇಳಿಕೆಯಾಗಿದೆ. ಚೀನಾದ 59 ಆ್ಯಪ್‌ಗಳನ್ನು ನಿಷೇಧಗೊಳಿಸಿದ ಬಳಿಕ ಚೀನಾದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ಶೇ. 9ರಷ್ಟು ಕುಸಿತಗೊಂಡಿದೆ.

ಸೆಪ್ಟೆಂಬರ್‌ನಲ್ಲಿ ಆ್ಯಂಡ್ರಾಯ್ಡ್‌ 11 ಬಿಡುಗಡೆ: ಸಿಹಿ ತಿಂಡಿ ಹೆಸರು 'ರೆಡ್ ವೆಲ್ವೆಟ್ ಕೇಕ್'ಸೆಪ್ಟೆಂಬರ್‌ನಲ್ಲಿ ಆ್ಯಂಡ್ರಾಯ್ಡ್‌ 11 ಬಿಡುಗಡೆ: ಸಿಹಿ ತಿಂಡಿ ಹೆಸರು 'ರೆಡ್ ವೆಲ್ವೆಟ್ ಕೇಕ್'

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾದ ಬ್ರಾಂಡ್‌ಗಳ ಪಾಲು ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. 72ಕ್ಕೆ ಇಳಿದಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಇದು ಶೇ. 81ರಷ್ಟಿದೆ ಎಂದು ಮಾರುಕಟ್ಟೆ ಸಂಶೋಧಕ ಕೌಂಟರ್‌ಪಾಯಿಂಟ್ ರಿಸರ್ಚ್ ಹೇಳಿದೆ. ಪ್ರಮುಖ ಬ್ರಾಂಡ್‌ಗಳಾದ ಒಪ್ಪೊ, ವಿವೊ ಮತ್ತು ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಯ ಮಧ್ಯೆ ರಿಯಲ್ಮೆ ಪೂರೈಕೆ ಬಿಕ್ಕಟ್ಟನ್ನು ಎದುರಿಸಿತು.

ಏತನ್ಮದೆ, ಕೊರಿಯಾ ಮೂಲದ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್‌ಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಅದರ ವಹಿವಾಟು ಶೇಕಡಾ 16ರಿಂದ ಶೇಕಡಾ 26ಕ್ಕೆ ಏರಿಕೆಯಾಗಿದೆ.

China Smartphones

ಕೌಂಟರ್ ಪಾಯಿಂಟ್ ರಿಸರ್ಚ್ ನ ಸಂಶೋಧನಾ ವಿಶ್ಲೇಷಕಿ ಶಿಲ್ಪಿ ಜೈನ್, ಚೀನಾ ದೇಶದಿಂದ ಸ್ಮಾರ್ಟ್ ಫೋನ್ ಗಳ ಪೂರೈಕೆ ಕಡಿಮೆಯಾಗಿರುವುದು ಮತ್ತು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಮನೋಭಾವ ಭಾರತೀಯರಲ್ಲಿ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಜೂನ್ ನಲ್ಲಿ ನಡೆದ ಭಾರತ-ಚೀನಾ ಗಡಿ ಸಂಘರ್ಷವೇ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ.

ಭಾರತದಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಗೂಗಲ್ ಜೊತೆ ಸೇರಿಕೊಂಡು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಇಳಿಯುತ್ತಿದ್ದು ಚೀನಾದ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಹೊಡೆತ ಬೀಳಲಿದೆ. ರಿಲಯನ್ಸ್ ಜಿಯೊ ಮತ್ತು ಗೂಗಲ್ ಜೊತೆಯಾಗಿ 4ಜಿ ಅಥವಾ 5ಜಿ ಆ್ಯಂಡ್ರಾಯ್ಡ್‌ ಸ್ಮಾರ್ಟ್ ಫೋನ್ ಗಳನ್ನು ಭಾರತದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಪೂರೈಸಲು ಮುಂದಾಗುತ್ತಿದೆ.

ಸ್ಥಳೀಯ ಸ್ಮಾರ್ಟ್ ಫೋನ್ ಬ್ರಾಂಡ್ ಗಳಾದ ಮೈಕ್ರೊಮ್ಯಾಕ್ಸ್, ಲಾವಾ ಕೂಡ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

English summary
The share of Chinese brands in India’s smartphone market dropped to 72% in the quarter ended June 30, compared to a peak of 81% in the first three months of this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X