ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿ

|
Google Oneindia Kannada News

ಜಗತ್ತಿಗೆ ಕೊರೊನಾ ಎಂಬ ಕಂಟಕವನ್ನ ಉಡುಗೊರೆಯಾಗಿ ನೀಡಿರುವ ಕುತಂತ್ರಿ ಚೀನಾ, ಇದೀಗ ಕಂಡವರ ಚಿತೆ ಮೇಲೆ ಅಭಿವೃದ್ಧಿ ಕನಸು ಕಾಣುತ್ತಿದೆ. ಚೀನಾ ಜಿಡಿಪಿ ಸತತ ಏರಿಕೆ ಕಾಣುತ್ತಿದ್ದು, 3ನೇ ತ್ರೈಮಾಸಿಕದಲ್ಲೂ ಚೀನಾ ಜಿಡಿಪಿ ಏರಿಕೆ ಕಂಡಿದೆ. ಕಳೆದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ 'ಕೊರೊನಾ' ಸೋಂಕನ್ನು ಪತ್ತೆ ಹಚ್ಚಲಾಗಿತ್ತು. ತಕ್ಷಣ ಚೀನಾ ವುಹಾನ್‌ನಲ್ಲಿ ಲಾಕ್‌ಡೌನ್ ಘೋಷಿಸಿತ್ತು. ಇದಾದ ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಚೀನಾ ಆರ್ಥಿಕತೆ ಕುಸಿದಿತ್ತು.

ಆದರೆ ಅದು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾತ್ರ. ತಕ್ಷಣ ಕೊರೊನಾ ವೈರಸ್ ಹಾವಳಿಯನ್ನು ಹಿಡಿತಕ್ಕೆ ತಂದ ಚೀನಾ ಸರ್ಕಾರ, ಮೆಲ್ಲಗೆ ವುಹಾನ್ ಸೇರಿದಂತೆ ಇಡೀ ಚೀನಾದಲ್ಲಿ ಕೈಗಾರಿಕಾ ಚಟುವಟಿಕೆಗಳು ನಡೆಯುವಂತೆ ನೋಡಿಕೊಂಡಿತ್ತು. ಪರಿಣಾಮ ಚೀನಾ 2ನೇ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್-ಜೂನ್ ನಡುವೆ 3.2%ರಷ್ಟು ಜಿಡಿಪಿ ಬೆಳವಣಿಗೆ ಕಂಡಿತ್ತು.

ಜಗತ್ತಿಗೆ ಚೀನಾ ದೊಡ್ಡಣ್ಣ..? ಸೋತು ಹೋಯಿತಾ ಅಮೆರಿಕ..? ಜಗತ್ತಿಗೆ ಚೀನಾ ದೊಡ್ಡಣ್ಣ..? ಸೋತು ಹೋಯಿತಾ ಅಮೆರಿಕ..?

ಇದೀಗ 3ನೇ ತ್ರೈಮಾಸಿಕ ಅಂದರೆ ಜುಲೈ-ಸೆಪ್ಟೆಂಬರ್ ಮಧ್ಯೆ 4.9%ರಷ್ಟು ಜಿಡಿಪಿ ಬೆಳವಣಿಗೆ ಕಂಡಿದೆ. ಒಂದೆಡೆ ಜಗತ್ತಿನ ಘಟಾನುಘಟಿ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿ ಹಳ್ಳ ಹಿಡಿಯುತ್ತಿದ್ದರೆ, ಮತ್ತೊಂದ್ಕಡೆ ಚೀನಾ ಮಾತ್ರ ಅಭಿವೃದ್ಧಿ ಹೊಂದುತ್ತಲೇ ಸಾಗಿದೆ. ಈ ಮೂಲಕ ಚೀನಾ ಕಂಡವರ ಚಿತೆ ಮೇಲೆ ಅಭಿವೃದ್ಧಿಯ ಕನಸು ಕಾಣುತ್ತಿದೆ.

ಅಮೆರಿಕ ಚುನಾವಣೆ ಮೇಲೂ ಪರಿಣಾಮ..?

ಅಮೆರಿಕ ಚುನಾವಣೆ ಮೇಲೂ ಪರಿಣಾಮ..?

ಒಂದು ಕಡೆ ಚೀನಾ ಅಭಿವೃದ್ಧಿ ಸಾಧಿಸುತ್ತಿದ್ದರೆ, ಮತ್ತೊಂದು ಕಡೆ ಚೀನಾಗೆ ಬದ್ಧ ಶತ್ರುವಾಗಿರುವ ಅಮೆರಿಕದಲ್ಲಿ ಈ ಬೆಳವಣಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಚೀನಿ ವೈರಸ್‌ಗೆ ಅಮೆರಿಕ ನಲುಗಿ ಹೋಗಿದ್ದು, ಭಾರಿ ಹಿನ್ನಡೆ ಅನುಭವಿಸಿದೆ. ಅಮೆರಿಕ ಜಿಡಿಪಿ ಊಹೆಗೂ ಮೀರಿ ಕುಸಿದಿದೆ. ಹತ್ತಾರು ವರ್ಷಗಳಷ್ಟು ಹಿಂದಕ್ಕೆ ಅಮೆರಿಕನ್ ಆರ್ಥಿಕತೆ ಜಾರಿದೆ. ಈ ಮಧ್ಯೆ ಅಧ್ಯಕ್ಷೀಯ ಚುನಾವಣೆ ಕೂಡ ಎದುರಾಗಿದೆ. ಜೊತೆಗೆ ಚೀನಾ ಜಿಡಿಪಿ ವರದಿ ಕೂಡ ಹೊರಬಿದ್ದಿದ್ದು, 2020ರ 3ನೇ ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ 4.9%ರಷ್ಟು ಬೆಳವಣಿಗೆ ಕಂಡಿದೆ. ಇದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

ಹಾಂಕಾಂಗ್‌ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..?ಹಾಂಕಾಂಗ್‌ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..?

ಚೀನಾದಲ್ಲಿ ಎಲ್ಲವೂ ಸರಿಹೋಗಿದೆ

ಚೀನಾದಲ್ಲಿ ಎಲ್ಲವೂ ಸರಿಹೋಗಿದೆ

ಪ್ರಪಂಚದಲ್ಲಿ ಕೊರೊನಾ ತಲ್ಲಣ ಸೃಷ್ಟಿಸಿದೆ. ಅದರಲ್ಲೂ ಜಗತ್ತಿಗೆ ಆಧುನಿಕತೆ ಪಾಠ ಹೇಳಿಕೊಟ್ಟ ಯುರೋಪ್ ರಾಷ್ಟ್ರಗಳು ಅಲ್ಲಾಡಿ ಹೋಗಿವೆ. ಅಮೆರಿಕದ ಸ್ಥಿತಿಯಂತೂ ಕೇಳುವುದೇ ಬೇಡ, ಕೊರೊನಾ ನಿರ್ವಣೆ ಸಾಧ್ಯವೇ ಆಗುತ್ತಿಲ್ಲ. ಜನರು ಓಡಾಡಲು, ನಡೆದಾಡಲು ನೂರಾರು ನಿಬಂಧನೆಗಳನ್ನ ಹೇರಲಾಗಿದೆ. ಆದರೆ ಚೀನಾದಲ್ಲೀಗ ಎಲ್ಲವೂ ಸರಿ ಹೋಗಿದೆ. ಕೊರೊನಾ ವೈರಸ್ ತವರು ಚೀನಾ, ಕೊರೊನಾ ಕಂಟಕದಿಂದ ಮುಕ್ತವಾಗಿದೆ. ಇದು ಅಲ್ಲಿನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಜನರು ಹೊರಬಂದು ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ವ್ಯಾಪಾರ, ವಹಿವಾಟು ಭರ್ಜರಿಯಾಗಿ ಸಾಗಿದೆ. ಕೈಗಾರಿಕೆಗಳು ಅಂದುಕೊಂಡಷ್ಟು ಉತ್ಪಾದನೆ ಗುರಿ ತಲುಪಿವೆ. ಪರಿಣಾಮ ಚೀನಾ ಅಭಿವೃದ್ಧಿ ಹೊಂದುತ್ತಿದೆ, ಆದ್ರೆ ಜಗತ್ತು ಚೀನಿ ವೈರಸ್ 'ಕೊರೊನಾ' ಕಾಟಕ್ಕೆ ನಲುಗುತ್ತಿದೆ.

ಚೀನಿ ಸರಕುಗಳು ವಿಶ್ವವ್ಯಾಪಿ ಹರಡಿವೆ

ಚೀನಿ ಸರಕುಗಳು ವಿಶ್ವವ್ಯಾಪಿ ಹರಡಿವೆ

ಜಗತ್ತು 'ಕೊರೊನಾ' ವೈರಸ್‌ನ ಹಾವಳಿಗೆ ತುತ್ತಾಗುವ ಮೊದಲೇ ಚೀನಿ ವಸ್ತು ಹಾವಳಿಗಳ ಮಿತಿಮೀರಿತ್ತು. ಅದರಲ್ಲೂ ಕೊರೊನಾ ಬಂದು ಅಪ್ಪಳಿಸಿದ ನಂತರ ವಿಶ್ವದ ಬಹುತೇಕ ದೇಶಗಳು ಲಾಕ್‌ಡೌನ್‌ಗೆ ತುತ್ತಾಗಿ, ಸ್ತಬ್ಧವಾಗಿ ಹೋದವು. ಆಗ ಅನಿವಾರ್ಯವಾಗಿ ಜನರು ಚೀನಿ ವಸ್ತುಗಳನ್ನೇ ಅವಲಂಬಿಸಬೇಕಾಯಿತು. ಈ ಪರಿಸ್ಥಿತಿ ಲಾಭ ಪಡೆದ ಚೀನಾ ಹಿಂದಿಗಿಂತಲೂ ಪ್ರಬಲವಾಗಿ ಬೆಳೆಯುತ್ತಿದೆ.

ಅಭಿವೃದ್ಧಿ ಜೊತೆಗೆ ನೆರೆಹೊರೆ ರಾಷ್ಟ್ರಗಳಿಗೆ ಕಿರುಕುಳ ನೀಡುತ್ತಿದೆ ಚೀನಿ ಗ್ಯಾಂಗ್. ಇಷ್ಟೇ ಅಲ್ಲ ಜಗತ್ತಿಗೆ ಆಧುನಿಕ ವ್ಯಾಪಾರದ ಪಾಠ ಕಲಿಸಿದ ಯುರೋಪ್ ಹಾಗೂ ಅಮೆರಿಕ ಕೂಡ ಚೀನಾ ವಸ್ತುಗಳಿಗೆ ಹಪಹಪಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನೇ ಚೀನಾ ಬಂಡವಾಳ ಮಾಡಿಕೊಂಡು ಅಭಿವೃದ್ಧಿ ಸಾಧಿಸುತ್ತಿದೆ.

ಚೀನಾ ಎದುರು ಹಿನ್ನಡೆ, ಏಷ್ಯಾದ 4ನೇ ಶಕ್ತಿಶಾಲಿ ದೇಶ ಭಾರತ: ವರದಿಚೀನಾ ಎದುರು ಹಿನ್ನಡೆ, ಏಷ್ಯಾದ 4ನೇ ಶಕ್ತಿಶಾಲಿ ದೇಶ ಭಾರತ: ವರದಿ

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭವಿಷ್ಯದ ಚಿಂತೆ

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭವಿಷ್ಯದ ಚಿಂತೆ

ನೂರಾರು ವರ್ಷಗಳಿಂದ ಇಡೀ ಜಗತ್ತನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭವಿಷ್ಯದ ಚಿಂತೆ ಎದುರಾಗಿದೆ. ಸಮುದ್ರಯಾನ, ಕೈಗಾರಿಕೆಗಳ ಸ್ಥಾಪನೆ, ಜಾಗತೀಕರಣದ ಜೊತೆ ಆಧುನಿಕ ಪ್ರಪಂಚಕ್ಕೆ ಹೊಸತನ್ನು ಪರಿಚಯಿಸಿದ ಯುರೋಪಿಯನ್ನರ ಬುಡ ಅಲುಗಾಡುತ್ತಿದೆ. ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಹೀಗೆ ಯುರೋಪ್ ಖಂಡದ ರಾಷ್ಟ್ರಗಳು ನಲುಗಿ ಹೋಗಿವೆ. ವಿಶ್ವದ ಪಾಲಿಗೆ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಕೂಡ ಕೊರೊನಾ ಸಂಕಷ್ಟ ಸ್ಥಿತಿಯಿಂದ ಹೊರಬರಲು ಆಗುತ್ತಿಲ್ಲ. ಹೀಗಿರುವಾಗ ಚೀನಾ ಆಳೆತ್ತರಕ್ಕೆ ಬೆಳೆದು ನಿಲ್ಲುತ್ತಿದೆ. ಇಷ್ಟುದಿನ ತಮ್ಮ ನೀತಿ, ನಿಯತ್ತನ್ನು ಅಮೆರಿಕ ಪಾಲಿಗೆ ಮೀಸಲಿಟ್ಟ ರಾಷ್ಟ್ರಗಳು ಚೀನಾ ಜೊತೆ ಸೇರುತ್ತಿವೆ. ಭವಿಷ್ಯದಲ್ಲಿ ಚೀನಿ ಗ್ಯಾಂಗ್ ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದೆ. ಇದು ಪಾಶ್ಚಿಮಾತ್ಯರ ನಿದ್ದೆಗೆಡಿಸಿದೆ.

Recommended Video

ಲಸಿಕೆ ಸಿಗತ್ತೋ ಇಲ್ವೋ ಗೊತ್ತಿಲ್ಲಾ ! ಆದ್ರೆ ಇದು ಮಾತ್ರ Ready ಇರ್ಬೇಕು | Oneindia Kannada
ನಡೆಯಲಿದೆಯಾ ಮತ್ತೊಂದು ಮಹಾಯುದ್ಧ..?

ನಡೆಯಲಿದೆಯಾ ಮತ್ತೊಂದು ಮಹಾಯುದ್ಧ..?

ಹೌದು, ಮೊದಲ ಮಹಾಯುದ್ಧ ಕೋಳಿ ಜಗಳದಂತೆ ಆರಂಭವಾಗಿ ಕೋಟ್ಯಂತರ ಜನರನ್ನು ಬಲಿಪಡೆಯಿತು. ಇದು ಮುಂದುವರಿದು ಪ್ರತಿಷ್ಠೆಗಾಗಿ ಹಿಟ್ಲರ್ & ಗ್ಯಾಂಗ್ 2ನೇ ಮಹಾಯುದ್ಧ ನಡೆಸಿತು. ಆದರೆ 2ನೇ ವರ್ಲ್ಡ್ ವಾರ್ ಬಳಿಕ ಜಗತ್ತು ಮಹಾ ಹಿಂಸೆಗೆ ಮುಂದಾಗಲಿಲ್ಲ. ಈಗ ಮತ್ತೊಂದು ಮಹಾಯುದ್ಧದ ಅನುಮಾನಗಳು ದಟ್ಟವಾಗುತ್ತಿವೆ. ಚೀನಿಗಳು ಬೆಳೆಯುತ್ತಿರುವ ಪರಿ ಹಾಗೂ ಚೀನಿಯರ ವಿರುದ್ಧ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಹಲ್ಲು ಮಸೆಯುತ್ತಿರುವ ಪರಿಸ್ಥಿತಿ ನೋಡಿದರೆ 3ನೇ ಮಹಾಯುದ್ಧದ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಈ ಬಾರಿ ಮಹಾಯುದ್ಧ ನಡೆದರೆ ಅದು ಗಡಿ, ಪ್ರತಿಷ್ಠೆಯ ವಿಚಾರಕ್ಕೆ ಅಲ್ಲ ಅಭಿವೃದ್ಧಿ ವಿಚಾರವಾಗಿ 3ನೇ ವರ್ಲ್ಡ್ ವಾರ್ ನಡೆಯಬಹುದೇನೋ. ಒಂದು ಕಡೆ ಕೊರೊನಾ ತವರು ಚೀನಾ ನಿಂತರೆ, ಮತ್ತೊಂದು ಬದಿಯಲ್ಲಿ ಪಾಶ್ಚಿಮಾತ್ಯರು ಒಗ್ಗಟ್ಟು ಪ್ರದರ್ಶಿಸಬಹುದು.

ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್

English summary
China economic is growing consistently after corona pandemic. Third-quarter GDP of China has revealed and Chinese GDP grown 4.9% in Third-quarter of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X