ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆ

By Mahesh
|
Google Oneindia Kannada News

ಬೆಂಗಳೂರು, ಸೆ. 18: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಜತೆ ಅಧೀನ ಬ್ಯಾಂಕುಗಳು ವಿಲೀನವಾದ ಬಳಿಕ ಗ್ರಾಹಕರಿಗೆ ಮಹತ್ವದ ನಿರ್ದೇಶನ ಇಲ್ಲಿದೆ.

ಇದಪ್ಪಾ ವರಸೆ: ಖಾತೆ ಸ್ಥಗಿತಗೊಳಿಸುವುದಕ್ಕೂ ಸ್ಟೇಟ್ ಬ್ಯಾಂಕ್ ಶುಲ್ಕಇದಪ್ಪಾ ವರಸೆ: ಖಾತೆ ಸ್ಥಗಿತಗೊಳಿಸುವುದಕ್ಕೂ ಸ್ಟೇಟ್ ಬ್ಯಾಂಕ್ ಶುಲ್ಕ

ಎಸ್.ಬಿ.ಐ. ನ ಪೂರ್ವ ಅಧೀನ ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಹೊಂದಿದ್ದ ಗ್ರಾಹಕರು ಸೆಪ್ಟೆಂಬರ್ 30ರ ನಂತರ ಹಳೆ ಚೆಕ್ ಬುಕ್ ಬಳಸಲು ಸಾಧ್ಯವಿಲ್ಲ. ಎಸ್.ಬಿ.ಐ. ಪೂರ್ವ ಅಧೀನ ಬ್ಯಾಂಕ್ ಹಾಗೂ ಭಾರತೀಯ ಮಹಿಳಾ ಬ್ಯಾಂಕಿಗೆ ಈ ನಿಯಮ ಅನ್ವಯವಾಗಲಿದೆ.

Cheques of these SBI banks will become invalid after September 30

ಎಸ್.ಬಿ.ಐ. ಅಧೀನ ಬ್ಯಾಂಕ್ ಗಳಾದ ಎಸ್ ಬಿ ಬಿ ಜೆ, ಎಸ್ ಬಿ ಹೆಚ್, ಎಸ್ ಬಿ ಎಂ, ಎಸ್ ಬಿ ಪಿ,ಎಸ್ ಬಿ ಟಿ ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಗಳ ಗ್ರಾಹಕರು ತಮ್ಮ ಬಳಿ ಇರುವ ಚೆಕ್ ಬುಕ್ ಕೂಡಲೇ ಬದಲಾಯಿಸಿಕೊಳ್ಳಬೇಕಾಗಿ ಸೂಚಿಸಲಾಗಿದೆ. ಹಳೆ ಚೆಕ್ ಬುಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್ ಕಾರ್ಡ್ ಗಳನ್ನು ಮತ್ತೊಮ್ಮೆ ನವೀಕರಿಸಲು ಕೋರಲಾಗಿದೆ.

ಎಸ್ ಬಿಐನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಎಸ್ ಬಿಐನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಖಾತೆ ಹೊಂದಿದ್ದ ಗ್ರಾಹಕರು ಈಗ ಎಸ್ ಬಿಐನ ತಮ್ಮ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಿ ಚೆಕ್ ಬುಕ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. 2017 ಏಪ್ರಿಲ್ ನಲ್ಲಿ ಅಧೀನ ಬ್ಯಾಂಕುಗಳ ಜತೆ ಎಸ್ ಬಿಐ ವಿಲೀನವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Cheques of these SBI banks- SBBJ, SBH, SBM, SBP, SBI will become invalid after September 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X