ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.31ರ ನಂತರ ಈ 6 ಬ್ಯಾಂಕುಗಳ ಚೆಕ್ ಪಾಸಾಗಲ್ಲ!

By Mahesh
|
Google Oneindia Kannada News

Recommended Video

ಮಾರ್ಚ್ 31, 2018ರ ನಂತರ ಈ ಬ್ಯಾಂಕ್ ಗಳ ಚೆಕ್ ಪಾಸಾಗುವುದಿಲ್ಲ | Oneindia Kannada

ಬೆಂಗಳೂರು, ಮಾರ್ಚ್ 21: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಜತೆ ಅಧೀನ ಬ್ಯಾಂಕುಗಳು ವಿಲೀನವಾದ ಬಳಿಕ ಅನೇಕ ಬದಲಾವಣೆಗಳಾಗಿವೆ. ಎಸ್.ಬಿ.ಐ. ನ ಪೂರ್ವ ಅಧೀನ ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಹೊಂದಿದ್ದ ಗ್ರಾಹಕರು, ಮಾರ್ಚ್ 31ರ ನಂತರ ಹಳೆ ಚೆಕ್ ಬುಕ್ ಬಳಸಲು ಸಾಧವಿಲ್ಲ.

ಈ ಹಿಂದೆ ಈ ಆರು ಬ್ಯಾಂಕ್ ಗಳಲ್ಲಿ ಯಾವುದಾದ್ರೂ ಒಂದು ಬ್ಯಾಂಕ್ ನಲ್ಲಿ ನಿಮ್ಮ ಖಾತೆಯಿದ್ದರೆ ಸೆಪ್ಟೆಂಬರ್ 30ರ ನಂತರ ಚೆಕ್ ಬುಕ್ ಬಳಸಲು ಸಾಧ್ಯವಿಲ್ಲ ಎಂದು ಆದೇಶಿಸಲಾಗಿತ್ತು.

Cheque Books Of These Banks Valid Only Till March 31, 2018


ಸೆಪ್ಟೆಂಬರ್ 30,2017 ರಂದು ಈ ಬ್ಯಾಂಕ್ ಗಳು ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನವಾಗಿತ್ತು. ಆದರೆ, ನಂತರ ಗ್ರಾಹಕರ ಒತ್ತಡಕ್ಕೆ ಮಣಿದು, ಹೊಸ ಸೂಚನೆಯನ್ನು ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದೆ.

ಎಸ್ ಬಿ ಐ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದೆ. ಎಸ್ ಬಿ ಐ ನ 5 ಸಹಯೋಗಿ ಬ್ಯಾಂಕ್ ಗಳಲ್ಲಿ ಹಳೆ ಚೆಕ್ ನಡೆಯುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಎಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ನ ಹಳೆ ಚೆಕ್ ಗಳು ಏಪ್ರಿಲ್ 1 ರ ನಂತರ ಮಾನ್ಯತೆ ಕಳೆದುಕೊಳ್ಳಲಿದೆ.

ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು ಚೆಕ್ ಬುಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್ ಕಾರ್ಡ್ ಗಳನ್ನು ಮತ್ತೊಮ್ಮೆ ನವೀಕರಿಸಲು ಕೋರಲಾಗಿದೆ. ಜತೆಗೆ ಎಸ್ಎಂಎಸ್, ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಮೂಲಕ ಹೊಸ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

English summary
State Bank of India (SBI), the largest lender of the country, today said that the customers of the erstwhile associate banks and the Bharatiya Mahila Bank (BMB), which merged with SBI last year, should apply for new cheque books by March 31
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X