ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಚೆಕ್ ಬುಕ್, ಪಾಸ್ ಬುಕ್ ಇನ್ಮುಂದೆ ವರ್ಕ್ ಆಗಲ್ಲ!

|
Google Oneindia Kannada News

ನವದೆಹಲಿ, ಮಾರ್ಚ್ 15: ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲು ಮತ್ತು ಚೆಕ್ ಪಾವತಿಗೆ ಸಂಬಂಧಿಸಿದಂತೆ ವಂಚನೆ ಮತ್ತು ದುರುಪಯೋಗದ ಪ್ರಕರಣಗಳನ್ನು ಕಡಿಮೆ ಮಾಡಲು ಆರ್‌ಬಿಐ ಹಲವು ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುತ್ತಿದೆ. ಚೆಕ್ ಬುಕ್ ಹಾಗೂ ಪಾಸ್ ಬುಕ್ ಬಳಕೆ ಕುರಿತಂತೆ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಏಪ್ರಿಲ್ 1, 2021ರಿಂದ ಮೊದಲುಗೊಂಡು ಎಂಟು ಬ್ಯಾಂಕುಗಳಲ್ಲಿ ಹಳೆ ಚೆಕ್ ಬುಕ್, ಪಾಸ್ ಬುಕ್ ಇನ್ಮುಂದೆ ವರ್ಕ್ ಆಗಲ್ಲ, ಗ್ರಾಹಕರು ಹೊಸ ಅಗತ್ಯವಿದ್ದರೆ ಹೊಸ ಚೆಕ್ ಬುಕ್, ಪಾಸ್ ಬುಕ್‌ಗಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ.

ಚೆಕ್ ಹೊಸ ಪಾವತಿ ನಿಯಮ ಜನವರಿ 1ರಿಂದ ಜಾರಿ: ಈ ತಪ್ಪುಗಳನ್ನು ಮಾಡದಿರಿ!ಚೆಕ್ ಹೊಸ ಪಾವತಿ ನಿಯಮ ಜನವರಿ 1ರಿಂದ ಜಾರಿ: ಈ ತಪ್ಪುಗಳನ್ನು ಮಾಡದಿರಿ!

ಇದರ ಜೊತೆಗೆ ಏಪ್ರಿಲ್ 1, 2021ರಿಂದ ಅನೇಕ ಬ್ಯಾಂಕುಗಳ ಐಎಫ್‌ಎಸ್‌ಸಿ ಹಾಗೂ ಎಂಐಸಿಆರ್ ಕೋಡ್ ಬದಲಾಗುತ್ತಿದ್ದು, ಈ ಬಗ್ಗೆ ಕೂಡಾ ಗ್ರಾಹಕರು ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ.

ಯಾವ ಯಾವ ಬ್ಯಾಂಕ್

ಯಾವ ಯಾವ ಬ್ಯಾಂಕ್

ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಒರಿಯೇಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಲಹಾಬಾದ್ ಬ್ಯಾಂಕ್ ಈ ಬಗ್ಗೆ ಪ್ರಕಟಣೆ ಹೊರಡಿಸಿವೆ.

ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ

ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ

ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಸ್‌ಎಂಎಸ್ ಮೂಲಕ ನಡೆಯುತ್ತಲೇ ಇರುತ್ತದೆ. ಜೊತೆಗೆ ವ್ಯವಹಾರ ಸ್ವರೂಪ ಬದಲಾವಣೆ ಬಗ್ಗೆ ಕೂಡಾ ತಿಳಿಸಲಾಗುತ್ತಿದೆ. ವಿಶೇಷವಾಗಿ ಬ್ಯಾಂಕುಗಳ ವಿಲೀನವಾದ ಬಳಿಕ ಗ್ರಾಹಕರದಲ್ಲಿ ಸಹಜವಾಗಿ ಗೊಂದಲ ಮೂಡಿದೆ.

ಬ್ಯಾಂಕ್ ಶಾಖೆಗಳಲ್ಲಿ ಫ್ಲೆಕ್ಸ್‌ಗಳು, ಬೋರ್ಡ್‌ಗಳು, ಎಟಿಎಂಗಳು ಮತ್ತು ಅವರ ವೆಬ್ ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕುಗಳು ಹೊಸ ನಿಯಮ ತಿಳಿಸಲು ಆರ್ ಬಿ ಐ ನಿರ್ದೇಶಿಸಿದೆ.

ಚೆಕ್‌ ಬರೆಯುವಾಗ ಈ ತಪ್ಪು ಮಾಡಬೇಡಿ

ಚೆಕ್‌ ಬರೆಯುವಾಗ ಈ ತಪ್ಪು ಮಾಡಬೇಡಿ

* ಚೆಕ್‌ಗಳನ್ನು ಯಾವಾಗಲೂ ಶಾಶ್ವತ ಶಾಯಿಯಿಂದ(ಪರ್ಮನೆಂಟ್ ಇಂಕ್) ಮಾತ್ರ ತುಂಬಿಸಬೇಕು.
* ನೀವು ಡ್ರಾಪ್‌ಬಾಕ್ಸ್‌ನಲ್ಲಿ ಚೆಕ್‌ಬಾಕ್ಸ್‌ಗೆ ಹೋದಾಗ, ಮೊದಲು ಡ್ರಾಪ್‌ಬಾಕ್ಸ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ.
* ಚೆಕ್‌ಗಳಲ್ಲಿ ಮೊತ್ತ, ಹೆಸರು ಬರೆಯುವಾಗ ಚಿತ್ತು, ಕಾಟು(ತಿದ್ದುವುದು) ಮಾಡುವಂತಿಲ್ಲ.
* ಬಳಸದ ಹಳೆಯ ಚೆಕ್‌ಗಳನ್ನು ನಾಶಮಾಡಿ.
* ಚೆಕ್‌ನಲ್ಲಿ ಖಾಲಿ ಜಾಗವನ್ನು ಬಿಡುವುದನ್ನು ತಪ್ಪಿಸಬೇಕು.
* ನಿಮ್ಮ ಚೆಕ್ ವಿವರಗಳ ದಾಖಲೆಯನ್ನು ಇರಿಸಿ.

ಗ್ರಾಹಕರು ಏನು ಮಾಡಬೇಕು

ಗ್ರಾಹಕರು ಏನು ಮಾಡಬೇಕು

ಮೇಲ್ಕಂಡ ಬ್ಯಾಂಕುಗಳಲ್ಲದೆ, ಯಾವುದೇ ಬ್ಯಾಂಕ್ ಈ ರೀತಿ ನಿಯಮ ಜಾರಿಗೆ ತಂದರೆ, ಗ್ರಾಹಕರು ಮೊದಲಿಗೆ ತಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಅವಲಂಬಿತದ ಹೆಸರು ..ಇತ್ಯಾದಿ ವಿವರ ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕು. ನಂತರ ಚೆಕ್ ಬುಕ್, ಪಾಸ್ ಬುಕ್ ವಿಲೀನಗೊಂಡ ಬ್ಯಾಂಕಿನಿಂದಲೇ ಪಡೆದುಕೊಳ್ಳಬೇಕು. ಹೊಸ ಪಾಸ್ ಬುಕ್‌ನಲ್ಲಿ ಅಪ್ಡೇಟ್ ಮಾಹಿತಿಯನ್ನು ದಾಖಲಿಸಿ, ಇತ್ತೀಚಿನ ವ್ಯವಹಾರಗಳನ್ನು ಪ್ರಿಂಟ್ ಮಾಡಿಸಬೇಕು.

ಯಾವ ಯಾವ ಬ್ಯಾಂಕ್ ವಿಲೀನ

ಯಾವ ಯಾವ ಬ್ಯಾಂಕ್ ವಿಲೀನ

2019ರ ಏಪ್ರಿಲ್ ತಿಂಗಳಿನಿಂದ ಮೊದಲುಗೊಂಡು ದೇನಾ ಬ್ಯಾಂಕ್, ವಿಜಯ ಬ್ಯಾಂಕ್ ವಿಲೀನವಾಗಿವೆ. ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎರಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ಏಪ್ರಿಲ್ 1, 2020ರಿಂದ ವಿಲೀನಗೊಂಡಿವೆ.

ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವಿಲೀನವಾಗಿವೆ. ಆಂಧ್ರ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕುಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನವಾಗಿವೆ. ಅಲಹಾಬಾದ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ವಿಲೀನವಾಗಿವೆ. ಒಟ್ಟಾರೆ, 10 ಸಾರ್ವಜನಿಕವಲಯದ ಬ್ಯಾಂಕುಗಳ ವಿಲೀನವಾಗಿ ನಾಲ್ಕು ದೊಡ್ಡ ಬ್ಯಾಂಕುಗಳಾಗಿವೆ. 2017ರಲ್ಲಿ 27 ರಾಷ್ಟ್ರೀಕೃತ ಸಾರ್ವಜನಿಕ ವಲಯ ಬ್ಯಾಂಕ್‌ಗಳಿದ್ದವು.

English summary
Know more Why Cheque Book and Passbook of these banks invalid from April 1, 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X