ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸವಾರಿಗೆ ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ದರ 6ನೇ ದಿನವೂ ಕುಸಿತ

|
Google Oneindia Kannada News

ನವದೆಹಲಿ, ಜೂನ್ 06: ಲೋಕಸಭೆ ಚುನಾವಣೆ ಬಳಿಕ ನಿರೀಕ್ಷೆಯಂತೆ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದವು, ಆದರೆ, ಕಳೆದ ಆರು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 15 ರಿಂದ 17 ಪೈಸೆ ಮತ್ತು ಡೀಸೆಲ್‌ ಬೆಲೆಯಲ್ಲಿ 34 ರಿಂದ 37 ಪೈಸೆಗಳಷ್ಟು ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆಯಾಗಿದ್ದರಿಂದ ತೈಲ ಬೆಲೆ ಕುಸಿತ ಕಂಡು ಬಂದಿದೆ. ಮೇ 20ರಿಂದ ಇಂದಿನ ತನಕ ಸರಿ ಸುಮಾರು 70 ರಿಂದ 80 ಪೈಸೆಯಂತೆ ಇಂಧನ ದರ ಏರಿಕೆ ಮಾಡಲಾಗಿತ್ತು.

ವಾಹನ ಸವಾರಿಗೆ ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ದರ 6ನೇ ದಿನವೂ ಕುಸಿತ ವಾಹನ ಸವಾರಿಗೆ ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ದರ 6ನೇ ದಿನವೂ ಕುಸಿತ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಂಗಳವಾರ(ಮೇ 29)ದಂದು ನೀಡಿರುವ ಪ್ರಕಟಣೆಯಂತೆ, ಕಳೆದ 9 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 83ಪೈಸೆ ಹಾಗೂ ಡೀಸೆಲ್ ಬೆಲೆ 73 ಪೈಸೆ ಪ್ರತಿ ಲೀಟರ್ ಗೆ ಏರಿಕೆಯಾಗಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಸಂದರ್ಭದಲ್ಲಿ 19 ದಿನಗಳ ಕಾಲ ಇಂಧನ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಮೇ 14, 2018ರ ಪೆಟ್ರೋಲ್ ಬೆಲೆ 3.8 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3.38 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಚ್ಚಾತೈಲ ದರದಲ್ಲಿ ಇಳಿಕೆಯಾಗಿದೆ

ಕಚ್ಚಾತೈಲ ದರದಲ್ಲಿ ಇಳಿಕೆಯಾಗಿದೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆಯಾಗಿದ್ದು, ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 16 ಪೈಸೆ ಕಡಿಮೆಯಾಗಿದ್ದು, ಸದ್ಯ 71.07 ರೂ.ಗಳಷ್ಟಿದೆ. ಬುಧವಾರ 71.23 ಕ್ಕೆ ಮಾರಾಟವಾಗುತ್ತಿತ್ತು. ಇತ್ತ ಡೀಸೆಲ್‌ ದರ 65.22 ರೂ. ಇದ್ದು, 34 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್ ಗೆ 16 ಪೈಸೆ ಕಡಿಮೆಯಾಗುವ ಮೂಲಕ 73.47 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್‌ ದರ 67.42 ರೂ.ಇದ್ದು, 35 ಪೈಸೆ ಕಡಿಮೆಯಾಗಿದೆ.

ಸತತ ನಾಲ್ಕುದಿನಗಳಿಂದ ಇಳಿಮುಖವಾದ ಪೆಟ್ರೋಲ್, ಡೀಸೆಲ್ ದರ ಸತತ ನಾಲ್ಕುದಿನಗಳಿಂದ ಇಳಿಮುಖವಾದ ಪೆಟ್ರೋಲ್, ಡೀಸೆಲ್ ದರ

3 ರಿಂದ 5 ರು ಪ್ರತಿ ಲೀಟರ್

3 ರಿಂದ 5 ರು ಪ್ರತಿ ಲೀಟರ್

ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ರು ಪ್ರತಿ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ 3 ರು ಪ್ರತಿ ಲೀಟರ್ ಹಾಗೂ ಡೀಸೆಲ್ 5 ರು ಪ್ರತಿ ಲೀಟರ್ ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ಈ ನಷ್ಟವನ್ನು ಭರಿಸಲು ಈಗ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಬಹುದು. ಏಪ್ರಿಲ್, ಮೇ ತಿಂಗಳು(ಮೇ 19ರ ತನಕ)ಗಳಲ್ಲಿ ಸರ್ಕಾರಿ ಸ್ವಾಮ್ಯ ಮೂರು ತೈಲ ಕಂಪನಿಗಳಾದ ಐಒಸಿಎಲ್, ಎಚ್ ಪಿ ಹಾಗೂ ಬಿಪಿಸಿಎಲ್ ಗಳು ಇಂಧನ ಬೆಲೆ ಏರಿಕೆ ಮಾಡಿರಲಿಲ್ಲ.

ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ

ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ

ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಕಚ್ಚಾತೈಲ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

ಚುನಾವಣೆ ಬಳಿಕ ಇಂಧನ ದರ 70 ರಿಂದ 80 ಪೈಸೆ ಏರಿಕೆ ಚುನಾವಣೆ ಬಳಿಕ ಇಂಧನ ದರ 70 ರಿಂದ 80 ಪೈಸೆ ಏರಿಕೆ

6ದಿನಗಳಿಂದ ಇಳಿಮುಖವಾದ ಪೆಟ್ರೋಲ್, ಡೀಸೆಲ್ ದರ

6ದಿನಗಳಿಂದ ಇಳಿಮುಖವಾದ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ

* ಗುರುವಾರ (ಜೂನ್ 06)ದಂದು ಪೆಟ್ರೋಲ್: 71.07ರು(0.16 ಪೈಸೆ ಇಳಿಕೆ)
* ಬುಧವಾರದಂದು ಪೆಟ್ರೋಲ್ : 71.23 ರು(0.00ಪೈಸೆ )
* ಮಂಗಳವಾರದಂದು ಪೆಟ್ರೋಲ್ : 71.23ರು(-0.07 ಪೈಸೆ)

ಡೀಸೆಲ್ ಬೆಲೆ
* ಗುರುವಾರ(ಜೂನ್ 06)ದಂದು ಡೀಸೆಲ್ : 65.22ರು(0.34ಪೈಸೆ ಇಳಿಕೆ)
* ಬುಧವಾರದಂದು ಡೀಸೆಲ್: 65.56 ರು(0.00 ಪೈಸೆ)
* ಮಂಗಳವಾರದಂದು ಡೀಸೆಲ್: 65.56ರು (-0.20 ಪೈಸೆ)
****

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ

* ಗುರುವಾರ (ಜೂನ್ 06)ದಂದು ಪೆಟ್ರೋಲ್: 71.07ರು(0.16 ಪೈಸೆ ಇಳಿಕೆ)
* ಬುಧವಾರದಂದು ಪೆಟ್ರೋಲ್ : 71.23 ರು(0.00ಪೈಸೆ )
* ಮಂಗಳವಾರದಂದು ಪೆಟ್ರೋಲ್ : 71.23ರು(-0.07 ಪೈಸೆ)

ಡೀಸೆಲ್ ಬೆಲೆ
* ಗುರುವಾರ(ಜೂನ್ 06)ದಂದು ಡೀಸೆಲ್ : 65.22ರು(-0.34 ಪೈಸೆ ಇಳಿಕೆ)
* ಬುಧವಾರದಂದು ಡೀಸೆಲ್: 65.56 ರು(0.00ಪೈಸೆ)
* ಮಂಗಳವಾರದಂದು ಡೀಸೆಲ್: 65.56ರು (-0.20ಪೈಸೆ)
****

ನಿರೀಕ್ಷಿತ! ಲೋಕಸಭೆ ಫಲಿತಾಂಶದ ಬಳಿಕ ಪೆಟ್ರೋಲ್, ಡೀಸೆಲ್ ಏರಿಕೆ ನಿರೀಕ್ಷಿತ! ಲೋಕಸಭೆ ಫಲಿತಾಂಶದ ಬಳಿಕ ಪೆಟ್ರೋಲ್, ಡೀಸೆಲ್ ಏರಿಕೆ

English summary
Check rates in your cities, Petrol, diesel price slashed for the sixth consecutive day,The price of petrol in all the metro cities decreased by 15-17 paise per litre while diesel became cheaper by 34-37 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X