• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತತ ನಾಲ್ಕುದಿನಗಳಿಂದ ಇಳಿಮುಖವಾದ ಪೆಟ್ರೋಲ್, ಡೀಸೆಲ್ ದರ

|

ನವದೆಹಲಿ, ಜೂನ್ 02: ಲೋಕಸಭೆ ಚುನಾವಣೆ ಬಳಿಕ ನಿರೀಕ್ಷೆಯಂತೆ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದವು, ಆದರೆ, ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ದೇಶದ ಪ್ರಮುಖ ಮೆಟ್ರೋ ನಗರಗಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 2 ರಿಂದ 12 ಪೈಸೆ ಮತ್ತು ಡೀಸೆಲ್‌ ಬೆಲೆಯಲ್ಲಿ 19 ರಿಂದ 21 ಪೈಸೆಗಳಷ್ಟು ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆಯಾಗಿದ್ದರಿಂದ ತೈಲ ಬೆಲೆ ಕುಸಿತ ಕಂಡು ಬಂದಿದೆ. ಮೇ 20ರಿಂದ ಇಂದಿನ ತನಕ ಸರಿ ಸುಮಾರು 70 ರಿಂದ 80 ಪೈಸೆಯಂತೆ ಇಂಧನ ದರ ಏರಿಕೆ ಮಾಡಲಾಗಿತ್ತು.

ನಿರೀಕ್ಷಿತ! ಲೋಕಸಭೆ ಫಲಿತಾಂಶದ ಬಳಿಕ ಪೆಟ್ರೋಲ್, ಡೀಸೆಲ್ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಂಗಳವಾರ(ಮೇ 29)ದಂದು ನೀಡಿರುವ ಪ್ರಕಟಣೆಯಂತೆ, ಕಳೆದ 9 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 83ಪೈಸೆ ಹಾಗೂ ಡೀಸೆಲ್ ಬೆಲೆ 73 ಪೈಸೆ ಪ್ರತಿ ಲೀಟರ್ ಗೆ ಏರಿಕೆಯಾಗಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಸಂದರ್ಭದಲ್ಲಿ 19 ದಿನಗಳ ಕಾಲ ಇಂಧನ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಮೇ 14, 2018ರ ಪೆಟ್ರೋಲ್ ಬೆಲೆ 3.8 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3.38 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಏಪ್ರಿಲ್, ಮೇ ತಿಂಗಳಲ್ಲಿ ಬೆಲೆ ಏರಿಕೆಯಾಗಿರಲಿಲ್ಲ

ಏಪ್ರಿಲ್, ಮೇ ತಿಂಗಳಲ್ಲಿ ಬೆಲೆ ಏರಿಕೆಯಾಗಿರಲಿಲ್ಲ

ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ರು ಪ್ರತಿ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ 3 ರು ಪ್ರತಿ ಲೀಟರ್ ಹಾಗೂ ಡೀಸೆಲ್ 5 ರು ಪ್ರತಿ ಲೀಟರ್ ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ಈ ನಷ್ಟವನ್ನು ಭರಿಸಲು ಈಗ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಬಹುದು. ಏಪ್ರಿಲ್, ಮೇ ತಿಂಗಳು(ಮೇ 19ರ ತನಕ)ಗಳಲ್ಲಿ ಸರ್ಕಾರಿ ಸ್ವಾಮ್ಯ ಮೂರು ತೈಲ ಕಂಪನಿಗಳಾದ ಐಒಸಿಎಲ್, ಎಚ್ ಪಿ ಹಾಗೂ ಬಿಪಿಸಿಎಲ್ ಗಳು ಇಂಧನ ಬೆಲೆ ಏರಿಕೆ ಮಾಡಿರಲಿಲ್ಲ.

ಕಚ್ಚಾ ತೈಲ ಬೆಲೆ ಮೇಲೆ ಎಲ್ಲವೂ ನಿರ್ಧಾರ

ಕಚ್ಚಾ ತೈಲ ಬೆಲೆ ಮೇಲೆ ಎಲ್ಲವೂ ನಿರ್ಧಾರ

ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಕಚ್ಚಾತೈಲ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

ಬೆಂಗಳೂರಲ್ಲಿ ಇಂಧನ ದರ

ಬೆಂಗಳೂರಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 12 ಪೈಸೆ ಕಡಿಮೆಯಾಗಿದ್ದು, ಡೀಸೆಲ್‌ ದರ 68.37 ರೂ. ಇದ್ದು, 20 ಪೈಸೆ ಕಡಿಮೆಯಾಗಿದೆ.

* ಭಾನುವಾರ (ಜೂನ್ 02)ದಂದು ಪೆಟ್ರೋಲ್: 73.89ರು(0.12 ಪೈಸೆ ಇಳಿಕೆ)

* ಶನಿವಾರದಂದು ಪೆಟ್ರೋಲ್ : 74.01 ರು(-0.06ಪೈಸೆ )

* ಶುಕ್ರವಾರದಂದು ಪೆಟ್ರೋಲ್ : 73.07ರು(-0.07 ಪೈಸೆ)

ಡೀಸೆಲ್ ಬೆಲೆ

* ಭಾನುವಾರ(ಜೂನ್ 02)ದಂದು ಡೀಸೆಲ್ : 68.37ರು(0.20 ಪೈಸೆ ಇಳಿಕೆ)

* ಶನಿವಾರದಂದು ಡೀಸೆಲ್: 68.57 ರು(-0.10 ಪೈಸೆ)

* ಶುಕ್ರವಾರದಂದು ಡೀಸೆಲ್: 68.67ರು (-0.13 ಪೈಸೆ)

****

ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಇಳಿಕೆ

ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಇಳಿಕೆ

ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ

* ಭಾನುವಾರ (ಜೂನ್ 02)ದಂದು ಪೆಟ್ರೋಲ್: 71.50 ರು(0.12 ಪೈಸೆ ಇಳಿಕೆ)

* ಶನಿವಾರದಂದು ಪೆಟ್ರೋಲ್ : 71.62 ರು(-0.11ಪೈಸೆ )

* ಶುಕ್ರವಾರದಂದು ಪೆಟ್ರೋಲ್ : 71.73ರು (-0.07 ರಪೈಸೆ)

ಡೀಸೆಲ್ ಬೆಲೆ

* ಭಾನುವಾರ(ಜೂನ್ 02)ದಂದು ಡೀಸೆಲ್ : 66.16ರು(0.20 ಪೈಸೆ ಇಳಿಕೆ)

* ಶನಿವಾರದಂದು ಡೀಸೆಲ್: 66.36 ರು(-0.15 ಪೈಸೆ)

* ಶುಕ್ರವಾರದಂದು ಡೀಸೆಲ್: 66.51ರು (-0.12 ಪೈಸೆ)

****

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Check rates in your cities, Petrol, diesel price slashed for the fourth consecutive day,The price of petrol in all the metro cities decreased by 2-12 paise per litre while diesel became cheaper by 19-21 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more