• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಾಹಕರೇ ಗಮನಿಸಿ: ಜುಲೈ1 ರಿಂದ ಆಗಲಿದೆ ಈ 7 ಬದಲಾವಣೆ

|
Google Oneindia Kannada News

ಕೊರೊನಾ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ, ಲಾಕ್ ಡೌನ್ ದೆಸೆಯಿಂದ ಕೊಳ್ಳುವಿಕೆಗೆ ಇದ್ದ ತಡೆ ಈಗ ತೆರವಾಗಿದೆ. ಆನ್ ಲೈನ್ ಮಾರುಕಟ್ಟೆ ಚಾಲನೆಯಲ್ಲಿದ್ದರೂ ದಿನದಿಂದ ದಿನಕ್ಕೆ ಅನೇಕ ವಸ್ತುಗಳ ದರ ಏರಿಕೆಯಾಗುತ್ತಿವೆ. ಜುಲೈ 1ರಿಂದ ಪ್ರಮುಖ 7 ಬದಲಾವಣೆಗಳಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳುವ ಸಾಧ್ಯತೆಗಳಿವೆ. ಕೋವಿಡ್ 19 ಹೊಡೆತದಿಂದ ತತ್ತರಿಸಿರುವ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.

ಪ್ರಮುಖವಾಗಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ತಿಂಗಳ ಮೊದಲ ದಿನ ಪರಿಷ್ಕರಣೆಯಾಗಲಿದೆ. ಆದಾಯ ತೆರಿಗೆ ಕುರಿತಂತೆ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರವಂತೂ ಏರುತ್ತಿದೆ. ಇದರಿಂದ ಸರಕು ಸಾಗಣೆ ಅವಲಂಬಿತ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಒಟ್ಟಾರೆ, ತಿಂಗಳ ಆರಂಭದಲ್ಲಿ ಜೇಬಿಗೆ ಕತ್ತರಿ ಬೀಳಲಿದ್ದು, ಜನ ಸಾಮಾನ್ಯರು ಚಿಂತೆ ಸಹಜವಾಗಿದೆ. ಒಟ್ಟಾರೆ, ಜುಲೈ 1 ರಿಂದ ಏನೇನು ಬದಲಾವಣೆ ಮುಂದೆ ಓದಿ...

ಎಸ್‌ಬಿಐ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಪಡೆಯೋದು ಹೇಗೆ? ಎಸ್‌ಬಿಐ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಪಡೆಯೋದು ಹೇಗೆ?

ಎಸ್ಬಿಐ ಎಟಿಎಂ

ಎಸ್ಬಿಐ ಎಟಿಎಂ

ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ವ್ಯವಸ್ಥೆಯ ವಿಥ್ ಡ್ರಾ ದರದಲ್ಲಿ ಬದಲಾವಣೆ ತರಲಾಗುತ್ತಿದೆ. ನಾಲ್ಕು ಬಾರಿ ಮಾತ್ರ ಉಚಿತವಾಗಿ ಎಸ್ಟಿಬಿ ಎಟಿಎಂನಿಂದ ವಿಥ್ ಡ್ರಾ ಮಾಡಿಕೊಳ್ಳಬಹುದು. ನಂತರದ ಎಲ್ಲಾ ವಿಥ್ ಡ್ರಾ ಮೇಲೆ 15 ರು ಪ್ಲಸ್ ಜಿಎಸ್ ಟಿ ವಿಧಿಸಲಾಗುತ್ತದೆ. ಜುಲೈ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

SBI ಚೆಕ್ ಬುಕ್ ಬಳಕೆ

SBI ಚೆಕ್ ಬುಕ್ ಬಳಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆ ಗ್ರಾಹಕರು ಬಳಸುವ ಚೆಕ್ ಲೀಫ್ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಜುಲೈ 1 ರಿಂದ ಚೆಕ್ ಲೀಫ್ ಬಳಕೆ ಮಿತಿಗೊಳಿಸಲಾಗಿದ್ದು, ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಖಾತೆದಾರರು ಆರ್ಥಿಕ ವರ್ಷದಲ್ಲಿ 10 ಚೆಕ್ ಲೀಫ್ ಬಳಸಲು ಅನುಮತಿ ಇರುತ್ತದೆ. ಇದರ ನಂತರ ಬಳಸಿದರೆ 40 ರು ಪ್ಲಸ್ ಜಿಎಸ್ಟಿ (ಪ್ರತಿ 10 ಲೀಫ್ ನಂತೆ) ಹಾಗೂ 75 ರು ಪ್ಲಸ್ ಜಿಎಸ್ಟಿ (ಪ್ರತಿ 25 ಲೀಫ್ ನಂತೆ) ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಹಿರಿಯ ನಾಗರಿಕರಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ.

ಗ್ರಾಹಕರ ಜೇಬಿಗೆ ಕತ್ತರಿ: ಜೂನ್ 1 ರಿಂದ ಏನೇನು ಬದಲಾವಣೆಗ್ರಾಹಕರ ಜೇಬಿಗೆ ಕತ್ತರಿ: ಜೂನ್ 1 ರಿಂದ ಏನೇನು ಬದಲಾವಣೆ

ಎಲ್ ಪಿ ಜಿ ಸಿಲಿಂಡರ್ ಬೆಲೆ

ಎಲ್ ಪಿ ಜಿ ಸಿಲಿಂಡರ್ ಬೆಲೆ

ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶಿತ ಎಲ್ ಪಿ ಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ 14.2 ಕೆ.ಜಿ ಸಿಲಿಂಡರ್ ಬೆಲೆ 812 ರು ನಷ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.

IFSC, swift ಕೋಡ್ ಬದಲು

IFSC, swift ಕೋಡ್ ಬದಲು

ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಹಳೆ ಚೆಕ್ ಬುಕ್, ಕೋಡ್ ಜುಲೈ 1ರಿಂದ ಕಾರ್ಯನಿರ್ವಹಿಸುವುದಿಲ್ಲ. ವಿಲೀನದ ಬಳಿಕ ಸಿಂಡಿಕೇಟ್ ಬ್ಯಾಂಕ್ IFSC ಕೋಡ್ (SYNB) ಇನ್ಮುಂದೆ ಕೆನರಾಬ್ಯಾಂಕಿನ CNRB ಆಗಿ ಬದಲಾಗಲಿದೆ. NEFT/RTGS/IMPS ಮೂಲಕ ವ್ಯವಹರಿಸುವಾಗ ದಯವಿಟ್ಟು ಹೊಸ IFSC ಕೋಡ್(CNRB) ಎಂದು ತನ್ನ ಗ್ರಾಹಕರಿಗೆ ಕೆನರಾಬ್ಯಾಂಕ್ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಚೆಕ್ ಬುಕ್ ಬದಲಾವಣೆ

ಚೆಕ್ ಬುಕ್ ಬದಲಾವಣೆ

ಎಸ್ಬಿಐ, ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕುಗಳ ಗ್ರಾಹಕರಲ್ಲದೆ ಆಂಧ್ರ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಗ್ರಾಹಕರು ಕೂಡಾ ಚೆಕ್ ಬುಕ್ ಬದಲಾವಣೆ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಏಪ್ರಿಲ್ 1 2020ರಂದು ಈ ಎರಡು ಬ್ಯಾಂಕ್ ವಿಲೀನವಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆಗಿದೆ. ಹೀಗಾಗಿ, ಆಂಧ್ರ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಗ್ರಾಹಕರು ಹೊಸ ಚೆಕ್ ಬುಕ್ ಪಡೆದುಕೊಳ್ಳಬೇಕಾಗುತ್ತದೆ.

  ಎರಡು ವರ್ಷಗಳಿಂದ ವಿರಾಟ್ ಕೊಹ್ಲಿಯನ್ನ ಕಾಡ್ತಿದೆ ಶತಕದ ಬರ | Oneindia Kannada
  ಹೀರೋ ಮೋಟೋಕಾರ್ಪ್ ಬೆಲೆ ಏರಿಕೆ

  ಹೀರೋ ಮೋಟೋಕಾರ್ಪ್ ಬೆಲೆ ಏರಿಕೆ

  ಹೀರೋ ಮೋಟೋಕಾರ್ಪ್ ಸಂಸ್ಥೆಯ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಬೆಲೆ ಜುಲೈ 1ರಿಂದ ಏರಿಕೆಯಾಗಲಿದೆ. ಈ ಬಗ್ಗೆ ಕಳೆದ ವಾರವೇ ಸಂಸ್ಥೆ ಘೋಷಿಸಿತ್ತು. ಕಚ್ಚಾವಸ್ತು ಬೆಲೆ ಏರಿಕೆ, ಸರಕು ಸಾಗಣೆ ವ್ಯತ್ಯಯ, ಲಾಕ್ ಡೌನ್ ನಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರಿಂದ ಎಲ್ಲಾ ಸ್ತರದ ವಾಹನಗಳ ಬೆಲೆ ಏರಿಕೆ ಅನಿವಾರ್ಯ ಎಂದು ಸಂಸ್ಥೆ ಹೇಳಿದೆ.

  English summary
  Changes From July 1: From revised ATM withdrawal charges to new IFSC codes, the account holders of various banks will be affected by these changes from July 1.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X