ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 1ರಿಂದ ಮತ್ತೆ ಬೆಲೆ ಏರಿಕೆ ಬಿಸಿ, ಶ್ರೀಸಾಮಾನ್ಯ ಇತ್ತ ಗಮನಿಸು!

|
Google Oneindia Kannada News

ಅವಧಿಗೆ ಮುನ್ನ ಮುಂಗಾರು ಮಳೆ ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದ್ದು, ಹೊಸ ತಿಂಗಳ ಆರಂಭದಲ್ಲಿ ಆಗುವ ಪ್ರಮುಖ ಹಣಕಾಸು ಬದಲಾವಣೆಗಳನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. ಇಂಧನ ದರಗಳ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದರೂ, ಜಾಗತಿಕವಾಗಿ ಕಚ್ಚಾತೈಲ ದರ ದಿನದಿಂದ ದಿನಕ್ಕೆ ಏರುತ್ತಿದೆ. ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ಬಿಸಿ ಮತ್ತೆ ತಟ್ಟುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ರಷ್ಯಾ-ಉಕ್ರೇನ್ ಯುದ್ಧದ ಕಾರಣಕ್ಕಾಗಿ ಈಗಾಗಲೇ ಇಂಧನ ಪೂರೈಕೆ ವ್ಯತ್ಯಯವಾಗುತ್ತಿದೆ. ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲೂ ಏರಿಳಿತ ಮುಂದುವರಿದಿದೆ. ಅಡುಗೆ ಎಣ್ಣೆಯಿಂದ ಹಿಡಿದು ಪ್ರಮುಖ ಅಗತ್ಯ ಸರಕು ಸೇವೆಗಳ ಬೆಲೆ ಏರಿಕೆಯಾಗುವ ನಿರೀಕ್ಷೆಗಳಿವೆ. ಈ ಎಲ್ಲ ಬೆಳವಣಿಗೆಗಳು ದೇಶದ ಬ್ಯಾಂಕಿಂಗ್ ವಲಯ ಸೇರಿದಂತೆ ಹಲವು ವಲಯಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ. ಪ್ರಮುಖ ವೈಯಕ್ತಿಕ ಹಣಕಾಸು ಬದಲಾವಣೆಗಳ ಬಗ್ಗೆ ಮುಂಚಿತವಾಗಿ ತಿಳಿದರೆ ಅದಕ್ಕೆ ಸೂಕ್ತ ತಯಾರಿ ಮಾಡಿಕೊಂಡು ಆರ್ಥಿಕ ವ್ಯವಹಾರ ನಿರ್ವಹಣೆಗೆ ದಾರಿ ಕಾಣಬಹುದು.

ಜೂನ್‌ 2022ರಿಂದ ಪ್ರಮುಖ 5 ವೈಯಕ್ತಿಕ ಹಣಕಾಸು ಬದಲಾವಣೆ ತಿಳಿಯಿರಿ

ಜೂನ್‌ನಲ್ಲಿನ ಪ್ರಮುಖ ಹಣಕಾಸು ಬದಲಾವಣೆಗಳಲ್ಲಿ ಎಸ್‌ಬಿಐ ಗೃಹ ಸಾಲ, ಆಕ್ಸಿಸ್ ಬ್ಯಾಂಕ್ ಸೇವಾ ಶುಲ್ಕ ಹೆಚ್ಚಳ, ಕಾರು ವಿಮೆ ಹೆಚ್ಚಳ, ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಪರಿಷ್ಕರಣೆ ಮತ್ತು ಎಟಿಎಫ್ ಇಂಧನ ಬೆಲೆಗಳು ಸೇರಿವೆ. ಹಣಕಾಸಿನ ವಿಚಾರದಲ್ಲಿ ಈ ಹೊಸ ನಿಯಮಗಳು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿವೆ.

ಎಸ್‌ಬಿಐ ಗೃಹ ಸಾಲ ಬಡ್ಡಿದರ

ಎಸ್‌ಬಿಐ ಗೃಹ ಸಾಲ ಬಡ್ಡಿದರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗೃಹ ಸಾಲದ ಇಬಿಎಲ್‌ಆರ್‌ ಅನ್ನು 40 ಬೇಸಿಸ್ ಪಾಯಿಂಟ್‌ ಹೆಚ್ಚಳ ಮಾಡಿದೆ. ಹೀಗಾಗಿ, ಗೃಹ ಸಾಲದ ಬಡ್ಡಿದರ 7.05 ಪ್ರತಿಶತಕ್ಕೆ ಹೆಚ್ಚಾಗಿದೆ, ಪರಿಷ್ಕೃತ ಬಡ್ಡಿದರಗಳು ಜೂನ್ 1, 2022 ರಂದು ಜಾರಿಗೆ ಬರುತ್ತವೆ. external benchmark lending rate(ಇಬಿಎಲ್‌ಆರ್) ಶೇಕಡ 6.65ರಷ್ಟಿದ್ದರೆ, ರೆಪೊ-ಲಿಂಕ್ಡ್ ಲೆಂಡಿಂಗ್ ದರ (ಆರ್‌ಎಲ್‌ಎಲ್‌ಆರ್) ಶೇಕಡ 6.25 ರಷ್ಟಿತ್ತು. ಎಸ್‌ಬಿಐ ಎಂಸಿಎಲ್‌ಆರ್ ಅನ್ನು ಕೂಡಾ ಹತ್ತು ಮೂಲಾಂಕ ಏರಿಕೆ ಮಾಡಿದೆ. ಹೀಗಾಗಿ, ಮನೆ ಸಾಲದ ಇಎಂಐ ಕಂತು, ಬಡ್ಡಿದರ ಹೆಚ್ಚಳವಾಗಲಿದೆ.

ಆಕ್ಸಿಸ್ ಬ್ಯಾಂಕ್ ಸರ್ವೀಸ್ ಚಾರ್ಜ್

ಆಕ್ಸಿಸ್ ಬ್ಯಾಂಕ್ ಸರ್ವೀಸ್ ಚಾರ್ಜ್

ಖಾಸಗಿ ವಲಯದ ಪ್ರಮುಖ ಆರ್ಥಿಕ ಸಂಸ್ಥೆ ಆಕ್ಸಿಸ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕ್‌ನಲ್ಲಿ ಉಳಿತಾಯ ಮತ್ತು ಸಂಬಳ ಖಾತೆಗಳನ್ನು ಹೊಂದಿರುವ ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಅಲ್ಲದ ಸೇವಾ ಶುಲ್ಕಗಳನ್ನು ಪರಿಷ್ಕರಿಸುವುದಾಗಿ ಹೇಳಿದೆ. ಹೊಸ ಶುಲ್ಕಗಳ ಪೈಕಿ ಕನಿಷ್ಠ ಖಾತೆಯ ಬ್ಯಾಲೆನ್ಸ್ ಹೊಂದಿರದಿದ್ದರೆ ತಿಂಗಳಿಗೆ ವಿಧಿಸಲಾಗುವ ಸೇವಾ ಶುಲ್ಕದ ಹೆಚ್ಚಳವಾಗಲಿದೆ ಮತ್ತು ಮಾಸಿಕ ಸರಾಸರಿ ಬ್ಯಾಲೆನ್ಸ್ ಅಗತ್ಯತೆಯ ಹೆಚ್ಚಳವನ್ನು ಒಳಗೊಂಡಿರುತ್ತದೆ. ಜೂನ್ 1 ರಿಂದ ಮಾಸಿಕ ಸರಾಸರಿ ಬ್ಯಾಲೆನ್ಸ್ ಅಗತ್ಯವು 15,000 ರೂ.ನಿಂದ 25,000 ರೂ.ಗೆ ಏರಲಿದೆ ಎಂದು ಬ್ಯಾಂಕ್ ಪ್ರಕಟಿಸಲಿದೆ. ಜೊತೆಗೆ ಖಾತೆಯನ್ನು ನಿರ್ವಹಿಸದಿರುವ ಮಾಸಿಕ ಸೇವಾ ಶುಲ್ಕವನ್ನು ಕೂಡಾ ಹೆಚ್ಚಳವಾಗಲಿದೆ.

ಖಾಸಗಿ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆ

ಖಾಸಗಿ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆ

1000 ಸಿಸಿ ಮೀರದ ಖಾಸಗಿ ಕಾರುಗಳಿಗೆ ಥರ್ಡ್-ಪಾರ್ಟಿ ವಿಮೆಯ ವಾರ್ಷಿಕ ದರವನ್ನು 2019-20 ರಲ್ಲಿ ರೂ 2,072 ರಿಂದ ರೂ 2,094 ಗೆ ನಿಗದಿಪಡಿಸಲಾಗಿದೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆ ಹೊರಡಿಸಿದೆ. ಹೊಸ ದರಗಳ ಪ್ರಕಾರ 1000 ಸಿಸಿ ಮತ್ತು 1500 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆ 2019-20 ರಲ್ಲಿ 3,221 ರಿಂದ 3,416 ಕ್ಕೆ ಹೆಚ್ಚಿಸಲಾಗಿದೆ.

1500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಖಾಸಗಿ ವಾಹನಗಳ ಪ್ರೀಮಿಯಂಗಳು ರೂ 7,890 ರಿಂದ ರೂ 7,897 ಕ್ಕೆ ತಲುಪಿದೆ. ಇನ್ನು 150 ಸಿಸಿಗಿಂತ ಹೆಚ್ಚಿನ ಆದರೆ 350 ಸಿಸಿಗಿಂತ ಕಡಿಮೆಯ ದ್ವಿಚಕ್ರ ವಾಹನಗಳಿಗೆ ವಿಮಾ ಪ್ರೀಮಿಯಂ ರೂ 1,366 ಆಗಿರುತ್ತದೆ. 350 ಸಿಸಿಗಿಂತ ಹೆಚ್ಚಿನ ದ್ವಿಚಕ್ರ ವಾಹನಗಳು ರೂ 2,804 ಪ್ರೀಮಿಯಂ ಅನ್ನು ಕಟ್ಟಬೇಕಾಗುತ್ತದೆ. 1000 ಸಿಸಿ ಮೀರದ ಹೊಸ ಕಾರಿಗೆ ಮೂರು ವರ್ಷಗಳ ಸಿಂಗಲ್ ಪ್ರೀಮಿಯಂ ಅನ್ನು 6,521 ರೂ.ಗೆ ನಿಗದಿಪಡಿಸಲಾಗಿದೆ. ಈ ಪರಿಷ್ಕೃತ ದರಗಳು ಜೂನ್ 1, 2022 ರಿಂದ ಅನ್ವಯವಾಗುತ್ತವೆ.

ತಿಂಗಳ ಅಡುಗೆ ಅನಿಲ ದರ ಏರಿಕೆ

ತಿಂಗಳ ಅಡುಗೆ ಅನಿಲ ದರ ಏರಿಕೆ

ಪ್ರತಿ ತಿಂಗಳಿನಂತೆ ಜೂನ್ 1ರಂದು ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ನಿಶ್ಚಿತವಾಗಿದೆ. ಕಚ್ಚಾತೈಲ ಬೆಲೆ ಏರಿಕೆ ನಡುವೆ, ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮ ಕೈಗೊಂಡರೂ, ಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆ ನಿರಂತರವಾಗಿ ಚಾಲ್ತಿಯಲ್ಲಿದೆ. ದೆಹಲಿ ಹಾಗೂ ಮುಂಬೈನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 1003ರು ದಾಟಿದೆ.

ಎಇಪಿಎಸ್ ಶುಲ್ಕ

ಎಇಪಿಎಸ್ ಶುಲ್ಕ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಆಧಾರ್ ಸಕ್ರಿಯಗೊಳಿಸಿದ ಪಾವತಿಗೆ (ಎಇಪಿಎಸ್) ಶುಲ್ಕವನ್ನು ವಿಧಿಸಲಾಗುತ್ತದೆ, ಈ ವ್ಯವಸ್ಥೆ ಜೂನ್ 1ರಿಂದಲೇ ಎಲ್ಲೆಡೆ ಜಾರಿಗೆ ಬರದಿದ್ದರೂ ಜೂನ್ 15, 2022 ರಂದು ಸಂಪೂರ್ಣ ಜಾರಿಗೆ ತರಲಾಗುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಭಾರತೀಯ ಅಂಚೆಯ ಅಂಗಸಂಸ್ಥೆಯಾಗಿದ್ದು, ಎಇಪಿಎಸ್ ನಗದು ಹಿಂಪಡೆಯುವಿಕೆ, ಎಇಪಿಎಸ್ ನಗದು ಠೇವಣಿ ಸೇರಿದಂತೆ ಪ್ರತಿ ತಿಂಗಳು ಮೊದಲ ಮೂರು ಎಇಪಿಎಸ್ ವಹಿವಾಟುಗಳು ಉಚಿತವಾಗಿರುತ್ತದೆ. ಉಚಿತ ವಹಿವಾಟಿನ ಬಳಿಕ ನಡೆಸುವ ಎಲ್ಲಾ ವಹಿವಾಟಿಗೆ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿ ನಗದು ಹಿಂಪಡೆಯುವಿಕೆ ಅಥವಾ ನಗದು ಠೇವಣಿಗೆ ರೂ 20 ಮತ್ತು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಮಿನಿ ಸ್ಟೇಟ್‌ಮೆಂಟ್ ವಹಿವಾಟಿಗೆ ರೂ 5 ಮತ್ತು ಜಿಎಸ್‌ಟಿ ವೆಚ್ಚವಾಗುತ್ತದೆ.

ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಇದರ ಲಾಭಗಳೇನು?

English summary
New Rules In June: The key financial changes in June include SBI home loan, Axis Bank service charge hike, car insurance hike, revision in LPG cylinder prices, and ATF fuel prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X