• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಚೇರ್ಮನ್ ಲೀ ಕುನ್ ಹೀ ಇನ್ನಿಲ್ಲ

|

ಸಿಯೋಲ್, ಅ. 25: ದಕ್ಷಿಣ ಕೊರಿಯಾ ಮೂಲದ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಚೇರ್ಮನ್ ಲೀ ಕುನ್ ಹೀ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಟಿವಿ ಮಾರುಕಟ್ಟೆಯಿಂದ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣ ತನಕ ಸ್ಯಾಮ್ ಸಂಗ್ ಸಂಸ್ಥೆ ಬೆಳೆಯಲು ಲೀ ಕುನ್ ಕಾರಣರಾಗಿದ್ದಾರೆ.

2014ರ ಮೇ ತಿಂಗಳಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಲೀ ಅವರು ಮತ್ತೆ ಚೇತರಿಸಿಕೊಂಡಿರಲಿಲ್ಲ. ಲೀ ಅವರ ಸ್ಮರಣೆ ಹಾಗೂ ಶ್ರೇಷ್ಠ ಜೀವನ ಪಥವನ್ನು ಸ್ಯಾಮ್ ಸಂಗ್ ಹಂಚಿಕೊಂಡಿದೆ. ಅವರ ಆಶಯ, ಘನತೆಗೆ ತಕ್ಕಂತೆ ಸಂಸ್ಥೆ ಮುಂದುವರೆಯಲಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೋ ಸಂಸ್ಥೆಯನ್ನು 30 ವರ್ಷಗಳ ಹಿಂದೆ ತಮ್ಮ ತಂದೆಯಿಂದ ಪಡೆದ ಲೀ ಕುನ್, ಜಾಗತಿಕ ಬ್ರ್ಯಾಂಡ್ ಆಗಿ ಬೆಳೆಯಲು ಶ್ರಮಿಸಿದರು. ಸ್ಮಾರ್ಟ್ ಫೋನ್, ಟಿವಿ, ಮೆಮೋರಿ ಚಿಪ್, ಹಾರ್ಡ್ ಡಿಸ್ಕ್ ಹೀಗೆ ಅನೇಕ ಉತ್ಪನ್ನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಾಧನೆ ಸ್ಯಾಮ್ ಸಂಗ್ ಸಂಸ್ಥೆಗೆ ಸೇರಿದೆ.

ಏಷ್ಯಾದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದಕ್ಷಿಣ ಕೊರಿಯಾದ ಬೆಳವಣಿಗೆಯಲ್ಲೂ ಸ್ಯಾಮ್ ಸಂಗ್ ಪ್ರಮುಖ ಪಾತ್ರವಹಿಸಿದೆ. ಜೀವ ವಿಮೆ, ಹೋಟೆಲ್, ಅಮ್ಯೂಸ್ ಮೆಂಟ್ ಪಾರ್ಕ್ ಹೀಗೆ ದೇಶದ ವ್ಯಾಪಾರ ವಹಿವಾಟಿನ ಶೇ 20ರಷ್ಟು ಪಾಲು ಸ್ಯಾಮ್ ಸಂಗ್ ಹೊಂದಿದೆ.

2008ರಲ್ಲಿ ತೆರಿಗೆ ವಂಚನೆ ಆರೋಪ ಹೊತ್ತಿದ್ದ ಲೀ ಕುನ್ ಅವರು ತಮ್ಮ ತಂದೆ ಕೈಗಾರಿಕಾ ಹರಿಕಾರ ಬೈಯುಂಗ್ ಚುಲ್ ಅವರ ಮಾರ್ಗದರ್ಶನದಲ್ಲೇ ನಡೆದು ದೇಶದ ಒಳಿತಿಗಾಗಿ ದುಡಿದಿದ್ದೇನೆ ಎಂದಿದ್ದರು. ಜಪಾನ್ ತಂತ್ರಜ್ಞಾನ ಬಳಸುತ್ತಿದ್ದ ಸಂಸ್ಥೆಯಲ್ಲಿ ಕೊರಿಯಾದ ಸ್ವಂತ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಲೀ ಕುನ್ ಕಾರಣರಾದರು.

ಸ್ಯಾಮ್ ಸಂಗ್ ಮೋಟರ್ಸ್ ನಿರ್ಮಿಸಿ ಕೈಸುಟ್ಟುಕೊಂಡ ಲೀಕುನ್ ಹಲವು ವಿವಾದಕ್ಕೆ ಕಾರಣರಾಗಿದ್ದರು. 2009ರಲ್ಲಿ ಕ್ಷಮಾದಾನ ಪಡೆದು 2010ರಲ್ಲಿ ಮತ್ತೆ ಸ್ಯಾಮ್ ಸಂಗ್ ಬೋರ್ಡ್ ಸೇರಿದ ಲೀ ಕುನ್ ನಂತರ ನಿಧಾನವಾಗಿ ಲೀ ಜಿ ಯಂಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

English summary
Samsung Electronics chairman Lee Kun-Hee, who transformed the small television maker into a global giant of consumer electronics, has died. He was 78.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X