ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಎಫೆಕ್ಟ್!: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಸಾಧ್ಯತೆ

|
Google Oneindia Kannada News

ನವದೆಹಲಿ, ಮಾರ್ಚ್ 10: ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಿದ್ಧತೆ ಭರದಿಂದ ನಡೆಯುತ್ತಿದೆ. ಈ ತಿಂಗಳ ಅಂತ್ಯದಿಂದ ಚುನಾವಣೆ ಆರಂಭವಾಗಲಿದೆ. ಈ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವ ಸಾಧ್ಯತೆ ಇದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳನ್ನು ಕಡಿತಗೊಳಿಸುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿಯನ್ನು ಮೂಲೆ ಗುಂಪು ಮಾಡಲು ವಿರೋಧಪಕ್ಷಗಳಿಗೆ ತೈಲ ಬೆಲೆ ಏರಿಕೆ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ಚುನಾವಣೆಯಲ್ಲಿ ಅದರ ಬಿಸಿ ತಟ್ಟದಂತೆ ಮುಂಜಾಗ್ರತೆ ವಹಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ ಎಂದು ವರದಿಯಾಗಿದೆ.

ನಾಚಿಕೆಗೇಡಿನ ಸಂಗತಿ: ತೈಲ ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ಅರ್ಥಗರ್ಭಿತ ಟ್ವೀಟ್ನಾಚಿಕೆಗೇಡಿನ ಸಂಗತಿ: ತೈಲ ಬೆಲೆ ಏರಿಕೆ ಬಗ್ಗೆ ಸಿದ್ದರಾಮಯ್ಯ ಅರ್ಥಗರ್ಭಿತ ಟ್ವೀಟ್

ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ಗೆ ಏರಿಕೆಯಾಗಿದೆ. ಕಳೆದ ಒಂಬತ್ತು ದಿನಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿನ ತೈಲ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಇದರ ನಡುವೆಯೂ ಸಾರ್ವಜನಿಕ ವಲಯದ ತೈಲ ಚಿಲ್ಲರೆ ಮಾರಾಟಗಾರರು ಕೂಡ ಬೆಲೆ ಇಳಿಕೆ ಬಗ್ಗೆ ಒಲವು ಹೊಂದಿದ್ದಾರೆ.

5.5 ಲಕ್ಷ ಕೋಟಿ ರೂ ಆದಾಯ

5.5 ಲಕ್ಷ ಕೋಟಿ ರೂ ಆದಾಯ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲಗಳಾಗಿವೆ. ಕೋವಿಡ್-19 ಸಾಂಕ್ರಾಮಿಕ ಮತ್ತು ಅದರಿಂದ ಜಾರಿಯಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರಗಳಿಗೆ ಆದಾಯ ಸೃಷ್ಟಿ ಪ್ರಮುಖ ಸವಾಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲದ ಮೇಲಿನ ತೆರಿಗೆಗಳ ಮೂಲಕ ವರ್ಷಕ್ಕೆ 5.5 ಲಕ್ಷ ಕೋಟಿ ರೂ ಆದಾಯ ಸಂಗ್ರಹಿಸುತ್ತವೆ.

ಜಿಎಸ್‌ಟಿ ವ್ಯಾಪ್ತಿಗೆ ತಂದರೆ?

ಜಿಎಸ್‌ಟಿ ವ್ಯಾಪ್ತಿಗೆ ತಂದರೆ?

ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಈ ತೆರಿಗೆ ಅಡಿಯಲ್ಲಿ ಗರಿಷ್ಠ ಮಿತಿ ಶೇ 28 ಇರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ವಾರ್ಷಿಕ 2.5 ಲಕ್ಷ ಕೋಟಿ ಆದಾಯ ನಷ್ಟ ಅನುಭವಿಸಲಿವೆ. ಹೀಗಾಗಿ ಜಿಎಸ್‌ಟಿ ವ್ಯಾಪ್ತಿಗೆ ಇದನ್ನು ತರಲು ಸರ್ಕಾರ ಮುಂದಾಗುತ್ತಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಈಗಿರುವ ಬೆಲೆಗಿಂತ ಕಡಿಮೆ ದರಕ್ಕೆ ಗ್ರಾಹಕರಿಗೆ ತೈಲ ಲಭ್ಯವಾಗಲಿದೆ.

7 ವರ್ಷದಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು, ತೈಲ ತೆರಿಗೆ ಸಂಗ್ರಹ 459% ಪಟ್ಟು ಹೆಚ್ಚು: ಪೆಟ್ರೋಲಿಯಂ ಸಚಿವ7 ವರ್ಷದಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು, ತೈಲ ತೆರಿಗೆ ಸಂಗ್ರಹ 459% ಪಟ್ಟು ಹೆಚ್ಚು: ಪೆಟ್ರೋಲಿಯಂ ಸಚಿವ

ಬಂಡುಕೋರರ ದಾಳಿ ಕಾರಣ

ಬಂಡುಕೋರರ ದಾಳಿ ಕಾರಣ

ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆ ಕೇಂದ್ರವಾದ ಸೌದಿ ಅರೇಬಿಯಾದ ರಾಸ್ ತನುರಾದ ಮೇಲೆ ಡ್ರೋನ್ ಮೂಲಕ ಕ್ಷಿಪಣಿ ದಾಳಿ ನಡೆದಿತ್ತು. ಅದೃಷ್ಟವಶಾತ್ ಅದರಿಂದ ಘಟಕಕ್ಕೆ ಹಾನಿಯಾಗಿರಲಿಲ್ಲ. ಹೌತಿ ಬಂಡುಕೋರರು ನಡೆಸಿದ ಈ ದಾಳಿಯ ಪರಿಣಾಮ ದೇಶದ ಕಚ್ಚಾ ತೈಲ ಪೂರೈಕೆಯ ಸುರಕ್ಷತೆ ಬಗ್ಗೆ ಕಲವಳ ಉಂಟಾಗಿದ್ದು, ಕಚ್ಚಾ ತೈಲದ ಬೆಲೆ ಏಕಾಏಕಿ ಏರಿಕೆಯಾಗಿದೆ.

ಉತ್ಪಾದನೆ ಕಡಿತ ಮಾಡಿತ ಒಪೆಕ್

ಉತ್ಪಾದನೆ ಕಡಿತ ಮಾಡಿತ ಒಪೆಕ್

ಲಾಕ್‌ಡೌನ್ ವೇಳೆ 2020ರ ಏಪ್ರಿಲ್‌ನಲ್ಲಿ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಐತಿಹಾಸಿಕ ಕುಸಿತ ಕಂಡಿತ್ತು. ಆಗ ಬ್ಯಾರೆಲ್‌ಗೆ 19 ಡಾಲರ್ ಇತ್ತು. ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಪೂರೈಕೆ ದೇಶಗಳ ಸಂಸ್ಥೆ (ಒಪೆಕ್) 2020ರ ಮೇ ತಿಂಗಳಲ್ಲಿ 9.7 ಮಿಲಿಯನ್ ಬ್ಯಾರೆಲ್‌ನಷ್ಟು ಉತ್ಪಾದನೆ ಕಡಿತ ಮಾಡಿತ್ತು. ಸೌದ ಅರೇಬಿಯಾ ಕೂಡ ಬೇಡಿಕೆ ಹೆಚ್ಚಳಕ್ಕಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪ್ರತಿ ದಿನ 1 ಮಿಲಿಯನ್ ಬ್ಯಾರೆಲ್‌ನಷ್ಟು ಉತ್ಪಾದನೆ ಕಡಿತಕ್ಕೆ ನಿರ್ಧರಿಸಿದೆ. ಇದರಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಉತ್ಪಾದನೆ ಹೆಚ್ಚಿಸಬೇಕೆಂಬ ಭಾರತ ಹಾಗೂ ಇತರೆ ದೇಶಗಳ ಬೇಡಿಕೆಯನ್ನು ಒಪೆಕ್ ತಿರಸ್ಕರಿಸಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ

English summary
Centre may cut the taxes on petrol and diesel ahead of assembly elections in 4 states and one Union Territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X