ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ಕಡಿಮೆಯಾಗದಂತೆ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಸಲು ಇದೆ ಅವಕಾಶ

|
Google Oneindia Kannada News

ನವದೆಹಲಿ, ಮಾರ್ಚ್ 3: ಪೆಟ್ರೋಲ್ ಮತ್ತು ಡೀಸೆಲ್ ದರವು ನಿರಂತರ ಏರಿಕೆಯಿಂದ ಸಾರ್ವಕಾಲಿಕ ದಾಖಲೆಯತ್ತ ಸಾಗಿದೆ. ಕಳೆದ ಒಂಬತ್ತು ತಿಂಗಳಿನಿಂದ ತೈಲ ಬೆಲೆ ಹೆಚ್ಚಳವಾಗುತ್ತಲೇ ಇದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 91.17 ರೂ ಇದ್ದರೆ, ಡೀಸೆಲ್ ದರ ಲೀಟರ್‌ಗೆ 81.47 ರೂಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಂಡುಬಂದಿದ್ದರಿಂದ ತೈಲ ಮಾರುಕಟ್ಟೆ ಕಂಪೆನಿಗಳು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ.

ಕಳೆದ ಎರಡು ವಾರಗಳಲ್ಲಿ ಜಾಗತಿಕ ತೈಲ ದರವು ಬ್ಯಾರೆಲ್‌ಗೆ 67 ಡಾಲರ್‌ಗೆ ತಲುಪಿತ್ತು. ಆದರೆ ಈಗ ಅದು ಬ್ಯಾರೆಲ್‌ಗೆ 63 ಡಾಲರ್‌ಗೆ ಇಳಿದಿದ್ದು, ಮುಂದಿನ ತಿಂಗಳಿನಿಂದ ಉತ್ಪಾದನಾ ಕಡಿತದ ನಿಯಮ ಕೊಂಚ ಸಡಿಲವಾಗುವ ಸಾಧ್ಯತೆ ಇದೆ.

ಕೋವಿಡ್‌ನಿಂದ ಉಂಟಾದ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಧಿಕ ಅಬಕಾರಿ ಸುಂಕ ವಿಧಿಸಿದೆ. ಆದರೆ ಈ ಎರಡೂ ತೈಲಗಳಿಂದ ಗುರಿ ಹೊಂದಿರುವ ಆದಾಯದ ಮೇಲೆ ಪರಿಣಾಮ ಉಂಟಾಗದಂತೆಯೂ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8.5 ರೂವರೆಗೂ ಕಡಿತಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಮುಂದೆ ಓದಿ.

4.35 ಲಕ್ಷ ಕೋಟಿ ರೂ ಸಂಗ್ರಹ

4.35 ಲಕ್ಷ ಕೋಟಿ ರೂ ಸಂಗ್ರಹ

'ಆಟೊಮೊಬೈಲ್ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸದೆ ಇದ್ದರೆ 2021-22ನೇ ಸಾಲಿನಲ್ಲಿ (2021ರ ಏಪ್ರಿಲ್‌ನಿಂದ 2022ರ ಮಾರ್ಚ್ 31ರವರೆಗೆ) ಅಂದಾಜಿತ 3.2 ಲಕ್ಷ ಕೋಟಿಯ ಬದಲು 4.35 ಲಕ್ಷ ಕೋಟಿ ಸಂಗ್ರಹಿಸಬಹುದು ಎಂದು ನಾವು ಅಂದಾಜಿಸಿದ್ದೇವೆ' ಎಂಬುದಾಗಿ ವಿಶ್ಲೇಷಕರು ಹೇಳಿದ್ದಾರೆ.

8.5 ರೂಪಾಯಿ ಕಡಿತ ಮಾಡಬಹುದು

8.5 ರೂಪಾಯಿ ಕಡಿತ ಮಾಡಬಹುದು

'ಹೀಗೆ ಈ ಬಾರಿ ಅಬಕಾರಿ ಸುಂಕವನ್ನು 2021ರ ಏಪ್ರಿಲ್ 1ರಂದು ಅಥವಾ ಮುನ್ನ ಲೀಟರ್‌ಗೆ 8.5 ರೂಪಾಯಿ ಕಡಿತ ಮಾಡಿದರೂ, 2022ರ ಹಣಕಾಸು ವರ್ಷದ ಬಜೆಟ್ ಗುರಿಯನ್ನು ಮುಟ್ಟಬಹುದಾಗಿದೆ' ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

ಕೇಂದ್ರಕ್ಕೆ ಕಾರಣಗಳಿವೆ

ಕೇಂದ್ರಕ್ಕೆ ಕಾರಣಗಳಿವೆ

ಬೇಡಿಕೆಯ ಚೇತರಿಕೆ, ಖಾಸಗೀಕರಣ ಮತ್ತು ಹಣದುಬ್ಬರದ ಸಾಧ್ಯತೆಯ ಕಾರಣಗಳಿಂದ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಬಹುದು ಎಂಬ ಆಶಾಭಾವ ವ್ಯಕ್ತಪಡಿಸಬಹುದು. ಆದರೆ ಇದು ಲೀಟರ್‌ಗೆ 8.5 ರೂಪಾಯಿಗಿಂತ ಕಡಿಮೆ ಇರುವ ಸಾಧ್ಯತೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ.

ಕಳೆದ ವರ್ಷ ಸುಂಕ ಹೆಚ್ಚಳ

ಕಳೆದ ವರ್ಷ ಸುಂಕ ಹೆಚ್ಚಳ

ತೈಲದ ಮೇಲಿನ ಅಬಕಾರಿ ಸುಂಕವನ್ನು ಮಾರ್ಚ್ 2020ರಿಂದ ಮೇ 2020ರ ಅವಧಿಯಲ್ಲಿ ಪೆಟ್ರೋಲ್ ಮೇಲೆ ಲೀಟರ್‌ಗೆ 13 ರೂ ಹಾಗೂ ಡೀಸೆಲ್ ಮೇಲೆ 16ರೂ ಹೆಚ್ಚಿಸಲಾಗಿತ್ತು. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ 31.8 ರೂ ಇದ್ದರೆ, ಪೆಟ್ರೋಲ್ ಮೇಲಿನ ಸುಂಕ 32.9 ರೂ. ಇದೆ.

English summary
Experts says the Centre can reduce excise duty on petrol and diesel by Rs 8.5 per litre without hurting revenue target.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X