• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಆರ್‌ಸಿಟಿಸಿ ಪಾಲು ಮಾರಾಟ ಮಾಡಲು ಸರ್ಕಾರ ಚಿಂತನೆ

|

ನವದೆಹಲಿ, ಸೆಪ್ಟೆಂಬರ್ 09: ಭಾರತೀಯ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪ್‌ನಲ್ಲಿನ (ಐಆರ್‌ಸಿಟಿಸಿ) ಶೇಕಡಾ 15ರಿಂದ 20ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

   ಮತ್ತೆ China ಗಡಿಯಲ್ಲಿ ದೊಣ್ಣೆ ಹಿಡಿದು ನಿಂತ ಚೀನಾ ಸೈನಿಕರು | Oneindia Kannada

   ಕಳೆದ ತಿಂಗಳು, ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಐಆರ್‌ಸಿಟಿಸಿ ಎನ್‌ಎಸ್‌ಇ ಶೇಕಡಾ 2.95ರಷ್ಟು ಮಾರಾಟವನ್ನು ನಿರ್ವಹಿಸಲು ಸೆಪ್ಟೆಂಬರ್ 10 ರೊಳಗೆ ವ್ಯಾಪಾರಿ ಬ್ಯಾಂಕರ್‌ಗಳಿಂದ ಬಿಡ್‌ಗಳನ್ನು ಆಹ್ವಾನಿಸಿತ್ತು.

   ಎಲ್‌ಐಸಿ ಐಪಿಒ: ಶೇಕಡಾ 25ರಷ್ಟು ಪಾಲು ಮಾರಾಟಕ್ಕೆ ಸಿದ್ಧತೆ

   ಐಆರ್‌ಸಿಟಿಸಿಯಲ್ಲಿ ಕೇಂದ್ರವು ಈಗ ಶೇಕಡಾ 87.40ರಷ್ಟು ಷೇರುಗಳನ್ನು ಹೊಂದಿದೆ. ಸೆಬಿ ರೂಪಿಸಿರುವ ಸಾರ್ವಜನಿಕರು ಹೊಂದಿರಬೇಕಾದ ಪಾಲಿಗೆ ಸಂಬಂಧಿಸಿದ ನಿಯಮ ಪಾಲಿಸಬೇಕು ಎಂದಾದಲ್ಲಿ ಸರ್ಕಾರವು ತನ್ನ ಪಾಲನ್ನು ಶೇ. 75ರಷ್ಟಕ್ಕೆ ತಗ್ಗಿಸಬೇಕಿದೆ.

   ಭಾರತೀಯ ರೈಲ್ವೆಯಲ್ಲಿ ಆಹಾರ ಪೂರೈಕೆ ಸೇವೆ, ಆನ್‌ಲೈನ್ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸುವ ಸೇವೆ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರಿನ ಪೂರೈಕೆಯ ಹೊಣೆಯನ್ನು ಐಆರ್‌ಸಿಟಿಸಿಗೆ ನೀಡಲಾಗುತ್ತದೆ.

   ಸರ್ಕಾರವು ಐಆರ್‌ಸಿಟಿಸಿಯ ಪಾಲುಗಳನ್ನು ಮಾರಾಟ ಮಾಡಲಿದೆ ಎಂದು ವರದಿಯಾದ ಬಳಿಕ ಮಂಗಳವಾರ ಬಿಎಸ್‌ಇ ವಿನಿಮಯ ಕೇಂದ್ರದಲ್ಲಿ ಶೇ 2.57 ರಷ್ಟು ಇಳಿಕೆ 1,378.05 ಕ್ಕೆ ತಲುಪಿದ್ದವು.

   English summary
   The government plans to sell about 15-20 per cent stake in Indian Railway Catering and Tourism Corp (IRCTC) via offer for sale (OFS) and would like to complete the transaction in minimum number of tranches.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X