• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಡಿಎಲ್ ಪಾಲನ್ನು ಮಾರಾಟ ಮಾಡುವ ಯೋಚನೆಯಲ್ಲಿ ಕೇಂದ್ರ ಸರ್ಕಾರ

|

ನವದೆಹಲಿ, ಸೆಪ್ಟೆಂಬರ್ 08: ಕಳೆದ ತಿಂಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಲ್ಲಿ, 5,020 ಕೋಟಿ ಷೇರು ಮಾರಾಟದ ನಂತರ ಕೇಂದ್ರ ಸರ್ಕಾರ ಮತ್ತೊಂದು ರಕ್ಷಣಾ ಉತ್ಪಾದಕ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ನಲ್ಲಿ ತನ್ನ ಪಾಲನ್ನು ಮಾರಾಟ ಮಾಡುವ ಚಿಂತನೆಯಲ್ಲಿದೆ.

ಸೋಮವಾರ, ಬಿಡಿಎಲ್ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದ್ದು, ಸರ್ಕಾರವು ಕನಿಷ್ಠ 183 ಮಿಲಿಯನ್ ಷೇರುಗಳನ್ನು ಆರಂಭಿಕ ಕೊಡುಗೆಯಲ್ಲಿ ಮಾರಾಟ ಮಾಡಲು ನೋಡುತ್ತಿದೆ, ಮತ್ತು ಹೆಚ್ಚುವರಿ ಚಂದಾದಾರಿಕೆ ಪಡೆದರೆ ಇನ್ನೂ 9.1 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಬಹುದು.

ಎಲ್‌ಐಸಿ ಐಪಿಒ: ಶೇಕಡಾ 25ರಷ್ಟು ಪಾಲು ಮಾರಾಟಕ್ಕೆ ಸಿದ್ಧತೆ

ಮಾರಾಟದ ಪ್ರಸ್ತಾಪದ ಆರಂಭಿಕ ಬೆಲೆಯನ್ನು ಪ್ರತಿ ಷೇರಿಗೆ 330 ರುಪಾಯಿ ಎಂದು ನಿಗದಿಪಡಿಸಲಾಗಿದೆ. ಸೋಮವಾರ ಬಿಎಸ್‌ಇಯಲ್ಲಿ ಬಿಡಿಎಲ್‌ನ ಮುಕ್ತಾಯ ಬೆಲೆ 384.5 ರೂಪಾಯಿಯಾಗಿದ್ದು ಇದು ಶೇಕಡಾ 14 ರಿಯಾಯಿತಿಯಲ್ಲಿದೆ.

ಜೂನ್ 30 ರ ವೇಳೆಗೆ ಸರ್ಕಾರವು ಬಿಡಿಎಲ್‌ನಲ್ಲಿ ಶೇಕಡಾ 87.75 ನಷ್ಟು ಪಾಲನ್ನು ಹೊಂದಿದೆ. ಮಂಗಳವಾರ ಪ್ರಾರಂಭವಾಗಲಿರುವ ಎರಡು ದಿನಗಳ ಷೇರು ಮಾರಾಟವು ಈ ಹಣಕಾಸು ವರ್ಷದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ವಿತರಣಾ ಗುರಿಯ 2.1 ಟ್ರಿಲಿಯನ್ ಭಾಗವಾಗಿದೆ.

English summary
The Central Govt is looking to dilute its stake in another defence manufacturer, Bharat Dynamics Ltd (BDL), following the Rs 5,020 crore share sale in Hindustan Aeronautics Ltd (HAL) last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X