ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲದ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು ಯಾಕೆ?

|
Google Oneindia Kannada News

ನವದೆಹಲಿ, ಡಿಸೆಂಬರ್, 16(ಪಿಟಿಐ): ಜನರ ಮೂಗಿಗೆ ತೈಲ ಕಂಪನಿಗಳು ತುಪ್ಪ ಸವರಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 30 ಪೈಸೆ ಮತ್ತು ಪ್ರತಿ ಲೀಟರ್ ಡೀಸಲ್ ಮೇಲೆ 1.17 ರು. ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ.

ಈ ಹೆಚ್ಚಳದಿಂದ ಮೂಲ ಅಬಕಾರಿ ಸುಂಕ ಪೆಟ್ರೊಲ್ ಗೆ 7.06 ರು. ಆದರೆ ಡೀಸೆಲ್ ಗೆ 5.83 ರು. ಆಗುತ್ತದೆ. ಈ ಅಬಕಾರಿ ಸುಂಕ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ 2,500 ಸಾವಿರ ಕೋಟಿ ಆದಾಯ 2015-16 ರ ಹಣಕಾಸು ವರ್ಷದಲ್ಲಿ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.[ಜನರ ಮೂಗಿಗೆ ತುಪ್ಪ ಸವರಿದ ತೈಲ ಕಂಪನಿಗಳು]

Central Govt hikes excise duty on petrol, diesel

ಕಳೆದ ಆರು ವಾರಗಳಲ್ಲಿ ಎರಡನೇ ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ನವೆಂಬರ್ 7 ರಂದು ಅಬಕಾರಿ ಸುಂಕದಲ್ಲಿ ಪೆಟ್ರೋಲ್ ಗೆ ರು.1.60 ಮತ್ತು ಪ್ರತಿ ಲೀಟರ್ ಡೀಸಲ್ ಮೇಲೆ 40 ಪೈಸೆ ಹೆಚ್ಚಳ ಮಾಡಲಾಗಿತ್ತು.[ಲೀಟರ್ ಪೆಟ್ರೋಲ್‌ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ಕೇಂದ್ರ ಸರ್ಕಾರ ಒಟ್ಟು ಕಳೆದ ಹಣಕಾಸು ವರ್ಷದಲ್ಲಿ 99,184 ಕೋಟಿ ರು. ಸಂಗ್ರಹ ಮಾಡಿತ್ತು. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 33,042 ಕೋಟಿ ಸಂಗ್ರಹ ಮಾಡಿದೆ.

ಕೇಂದ್ರ ಸರ್ಕಾರ ಆದಾಯ ಸಂಗ್ರಹಣೆ ಉದ್ದೇಶದಿಂದ ಆಗಾಗ ಅಬಕಾರಿ ಸುಂಕ ಹೆಚ್ಚಳ ಮಾಡುವುದು ಸಾಮಾನ್ಯ. ಅಲ್ಲದೇ ಕೋಲ್ ಇಂಡಿಯಾದ ಅಪಾರ ಪ್ರಮಾಣದ ಷೇರುಗಗಳನ್ನು ಮಾರಾಟ ಮಾಡಿತ್ತು. ತರಂಗಾಂತರ ಹಂಚಿಕೆಯಿಂದಲೂ ಆದಾಯ ಗಳಿಸಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಮುಖವಾಗಿದ್ದರೂ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿರುವುದರಿಂದ ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ದರದಲ್ಲಿ ಗಣನೀಯ ಪ್ರಮಾಣದ ಇಳಿಕೆ ಅಸಾಧ್ಯ ಎಂದೇ ವಿಶ್ಲೇಷಣೆ ಮಾಡಲಾಗಿದೆ.

English summary
The Central government today increased excise duty on petrol by Rs 0.30 per litre and by Rs 1.17 a litre on diesel to make use of slump in oil prices to garner an additional Rs 2,500 crore. Basic excise duty on unbranded petrol has been increased from Rs 7.06 per litre to Rs 7.36 and the same on unbranded diesel from Rs 4.66 to Rs 5.83 per litre. .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X