ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಲ್ ಅಂಡ್ ಎಫ್ ಎಸ್ ಮಾರಿ ಕೈ ತೊಳೆದುಕೊಳ್ಳಲು ಸರಕಾರ ಚಿಂತನೆ

|
Google Oneindia Kannada News

ಇನ್ ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಐಎಲ್ ಅಂಡ್ ಎಫ್ ಎಸ್) ಅನ್ನು ಪೂರ್ತಿ ನಗದಿಗೆ ಮಾರಾಟ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. $ 12.6 ಬಿಲಿಯನ್ ಸಾಲ ಹೊಂದಿರುವ ಕಂಪನಿಯನ್ನು ಪೋಷಿಸಲು ಎಲ್ಲ ಪ್ರಯತ್ನ ಮಾಡಿದ ನಂತರ ಈ ತೀರ್ಮಾನ ಮಾಡಲಾಗಿದೆ.

ಇದೇ ಯೋಜನೆಯನ್ನು ಬುಧವಾರದಂದು 'ದಿವಾಳಿ' ಕೋರ್ಟ್ ಮುಂದೆ ಪ್ರಸ್ತುತ ಪಡಿಸಲು ಚಿಂತನೆ ನಡೆದಿದೆ. ಸರಕಾರ ನೇಮಿಸಿದ ಮಂಡಳಿಯು ಐಎಲ್ ಅಂಡ್ ಎಫ್ ಎಸ್ ಅನ್ನು ಆರ್ಥಿಕವಾಗಿ ಸಬಲವಾಗಿರುವ ಹೂಡಿಕೆದಾರರಿಗೆ ಮಾರಾಟ ಮಾಡಲು ಯೋಚನೆ ನಡೆದಿದೆ. ಮುಖ್ಯವಾಗಿ ಈ ಕಂಪನಿ ಮುಂದುವರಿಸಿಕೊಂಡು ಹೋಗುವುದು ಮಾರಾಟದ ಹಿಂದಿನ ಉದ್ದೇಶವಾಗಿದೆ.

ಸಾಲದ ಸುಳಿಯಲ್ಲಿರುವ ಐಎಲ್ ಆಂಡ್ ಎಫ್ಎಸ್ ಕಂಪೆನಿ ಸೂಪರ್‌ಸೀಡ್ಸಾಲದ ಸುಳಿಯಲ್ಲಿರುವ ಐಎಲ್ ಆಂಡ್ ಎಫ್ಎಸ್ ಕಂಪೆನಿ ಸೂಪರ್‌ಸೀಡ್

ಒಟ್ಟಾರೆಯಾಗಿ ಮಾರಾಟ ಮಾಡಲು ಆಗದಿದ್ದರೆ, ಕಂಪನಿಯ ನಾನಾ ವ್ಯವಹಾರಗಳನ್ನು ಪ್ರತ್ಯೇಕ ಸಂಸ್ಥೆಗಳನ್ನಾಗಿ ಬೇರ್ಪಡಿಸಿ, ಪ್ರತಿಯೊಂದನ್ನು ಹಲವು ಖರೀದಿದಾರರಿಗೆ ಮಾರಾಟ ಮಾಡುವುದು ಅಥವಾ ಗ್ರೂಪ್ ಮಟ್ಟದಲ್ಲಿ ಹಣಕಾಸನ್ನು ಪೂರೈಸಿ, ಒಟ್ಟಾರೆ ಮಾರಾಟವನ್ನು ತಡೆಯುವುದರ ಬಗ್ಗೆ ಕೂಡ ಆಲೋಚನೆ ನಡೆದಿದೆ.

ಹಣ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ

ಹಣ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ

ಸರಕಾರವೇ ಕಂಪನಿಯನ್ನು ವಹಿಸಿಕೊಂಡ ನಂತರವೂ ಹಣ ಮರುಪಾವತಿ ಸರಿಯಾದ ಸಮಯಕ್ಕೆ ಮಾಡಲು ಆಗುತ್ತಿಲ್ಲ. ಕಂಪನಿಯ ನಗದು ಪ್ರಮಾಣ ಬಿಕ್ಕಟ್ಟು ಸರಿಪಡಿಸಿ, ಭಾರತದ ಸಾಲ ಮಾರುಕಟ್ಟೆಯಲ್ಲಿ ಐಎಲ್ ಅಂಡ್ ಎಫ್ ಎಸ್ ನ ವಿಶ್ವಾಸಾರ್ಹತೆ ಮರು ಸ್ಥಾಪನೆ ಮಾಡುವುದು ಸವಾಲಿನ ಕೆಲಸವಾಗಿದೆ. ಇದೇ ಸಂದರ್ಭದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ರುಪಾಯಿ ಮೌಲ್ಯ ಕೂಡ ಕುಸಿಯುತ್ತಿದೆ. ಗಂಭೀರ ಅಪರಾಧಗಳ ತನಿಖಾ ಕಚೇರಿಯು ಈ ತಿಂಗಳು ಐಎಲ್ ಅಂಡ್ ಎಫ್ ಎಸ್ ಹಗರಣದ ತನಿಖೆ ಕೂಡ ಆರಂಭಿಸಿದೆ. ಈ ಯೋಜನೆಯು ಹೊಸ ಮಂಡಳಿಯಿಂದ ಅಂಗೀಕಾರವಾಗಿದ್ದು, ಅದರ ನೇತೃತ್ವವನ್ನು ಉದಯ್ ಕೊಟಕ್ ವಹಿಸಿಕೊಂಡಿದ್ದಾರೆ. ಇದನ್ನೇ ಬುಧವಾರದಂದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಮುಂದಿಡಲಿದ್ದಾರೆ.

63 ಸಾವಿರ ಕೋಟಿ ರುಪಾಯಿ ಸಾಲದ ಮೊತ್ತ

63 ಸಾವಿರ ಕೋಟಿ ರುಪಾಯಿ ಸಾಲದ ಮೊತ್ತ

ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲದ ಮೊತ್ತ 2018ರ ಮಾರ್ಚ್ ಗೆ ಬ್ಯಾಲನ್ಸ್ ಶೀಟ್ ಪ್ರಕಾರ, ಒಟ್ಟಾರೆಯಾಗಿ 63 ಸಾವಿರ ಕೋಟಿ ರುಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕಿಂಗ್ ವಲಯದಿಂದ ಒಟ್ಟು ಮಾಡಿ ಹೇಳಬೇಕೆಂದರೆ ಹತ್ತಿರ ಹತ್ತಿರ 53 ಸಾವಿರ ಕೋಟಿ ರುಪಾಯಿ.

ಸ್ಥಾಪಕರು ಹುದ್ದೆ ತ್ಯಜಿಸಿದ ನಂತರ ಸಮಸ್ಯೆ ತಾರಕಕ್ಕೆ

ಸ್ಥಾಪಕರು ಹುದ್ದೆ ತ್ಯಜಿಸಿದ ನಂತರ ಸಮಸ್ಯೆ ತಾರಕಕ್ಕೆ

ಇದೀಗ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕಂಪನಿ ಮಂಡಳಿಯು ಆಸ್ತಿ ಮಾರಾಟಕ್ಕೆ ನೋಡುತ್ತಿದೆ. ಮುಖ್ಯವಾಗಿ ನಗದು ಅಗತ್ಯವಿದ್ದು, ಮರುಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಜುಲೈನಿಂದ ಈಚೆಗೆ, ಕಂಪನಿ ಸ್ಥಾಪಕ ರವಿ ಪಾರ್ಥಸಾರಥಿ ಅನಾರೋಗ್ಯ ಕಾರಣ ನೀಡಿ ಹುದ್ದೆ ತ್ಯಜಿಸಿದ ನಂತರ ಐಎಲ್ ಅಂಡ್ ಎಫ್ ಎಸ್ ನ ಸಮಸ್ಯೆ ತಾರಕಕ್ಕೇರಿದೆ.

348 ಸಹವರ್ತಿ ಸಂಸ್ಥೆಗಳಿವೆ

348 ಸಹವರ್ತಿ ಸಂಸ್ಥೆಗಳಿವೆ

ಆಗಸ್ಟ್ ನಿಂದ ಐಎಲ್ ಅಂಡ್ ಎಫ್ ಎಸ್ ಗುಂಪಿನಿಂದ ಸರಿಯಾದ ಮರುಪಾವತಿ ಆಗದೆ, ಹಣಕಾಸು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಯಿತು. ಕಾರ್ಪೊರೇಟ್ ಬಾಂಡ್ ಮೇಲೆ ಒತ್ತಡ ಹೆಚ್ಚಾಗಿ, ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ ಹೆಚ್ಚಾಯಿತು. ಐಎಲ್ ಅಂಡ್ ಎಫ್ ಎಸ್ ಗುಂಪಿನಲ್ಲಿ ನೇರ ಹಾಗೂ ಪರೋಕ್ಷವಾಗಿ 348 ಸಹವರ್ತಿ ಸಂಸ್ಥೆಗಳಿವೆ. ಲೈಫ್ ಇನ್ಷೂರೆನ್ಸ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಸ್ಥೆಗಳು ಐಎಲ್ ಅಂಡ್ ಎಫ್ ಎಸ್ ನಲ್ಲಿ ಹೂಡಿಕೆ ಮಾಡಿವೆ. ಅವುಗಳ ಹಿತವನ್ನೂ ಕಾಪಾಡಬೇಕಿದೆ.

English summary
The government is examining options including an outright sale of Infrastructure Leasing & Financial Services Ltd., a person with knowledge of the matter said, amid attempts to stem defaults at the lender with $12.6 billion of debt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X