ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ 2021: ಈ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಸಾಧ್ಯತೆ

|
Google Oneindia Kannada News

ನವದೆಹಲಿ, ಜನವರಿ 19: ಮುಂಬರುವ ಕೇಂದ್ರ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್‌ನಲ್ಲಿ 50ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳವಾಗುವ ಸಾಧ್ಯತೆ ಇದೆ.

ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ 50ಕ್ಕೂ ಹೆಚ್ಚು ವಸ್ತುಗಳ ಆಮದು ಸುಂಕವನ್ನು ಶೇಕಡಾ 5ರಿಂದ 10ರಷ್ಟು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 ಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆ ಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆ

ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬೆಂಬಲಿಸಲು ಹಾಗೂ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಆಮದು ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಇದರ ಜೊತೆಗೆ ಆದಾಯ ಹೆಚ್ಚಳದ ಕಡೆಗೂ ಸಹ ಗಮನವನ್ನು ಹರಿಸಿದೆ.

Central Budget 2021: Govt Likely To Raise Import Duty By 5 To 10%

ಆಮದು ಸುಂಕಗಳ ಹೆಚ್ಚಳವು ಎಲೆಕ್ಟ್ರಿಕ್ ವಾಹನ ತಯಾರಕರ ಮೇಲೂ ಪರಿಣಾಮ ಬೀರಲಿದ್ದು, ಭಾರತವನ್ನ ಪ್ರವೇಶಿಸಲು ಸಜ್ಜಾಗಿರುವ ಟೆಸ್ಲಾ ಕೂಡ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ.

ಫೆಬ್ರವರಿ 1ರಂದು ಮಂಡನೆಯಾಗಲಿರುವ 2021-22ನೇ ಸಾಲಿನ ಬಜೆಟ್‌ ಮೋದಿ ಸರ್ಕಾರದ ಎರಡನೇ ಅವಧಿಯ ಮೂರನೇ ಬಜೆಟ್ ಆಗಿರುತ್ತದೆ.

ಯಾವೆಲ್ಲಾ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳವಾಗಬಹುದು?

ಸ್ಮಾರ್ಟ್‌ಫೋನ್

ರೆಫ್ರಿಜರೇಟರ್

ಏರ್‌ ಕಂಡೀಷನರ್

ಎಲೆಕ್ಟ್ರಾನಿಕ್ ಉಪಕರಣಗಳು

ಎಲೆಕ್ಟ್ರಿಕ್ ವಾಹನಗಳು

ಪೀಠೋಪಕರಣಗಳು

English summary
India is considering hiking import duties by 5%-10% on more than 50 items including smartphones, electronic components and appliances in the upcoming budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X