ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯೆಟ್ ತ್ರೈಮಾಸಿಕ ವರದಿ: ಲಾಭದ ಪ್ರಮಾಣ 128 ಕೋಟಿ ರೂಪಾಯಿಗೆ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 19: ದೇಶದ ಖ್ಯಾತ ಟೈರ್ ತಯಾರಕ ಕಂಪನಿಗಳಲ್ಲಿ ಒಂದಾದ ಸಿಯೆಟ್ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ವಾಹನ ಪೂರೈಕೆ ಮತ್ತು ಬೇಡಿಕೆಯಲ್ಲಿ ಚೇತರಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 167ರಷ್ಟು ಲಾಭದ ಬೆಳವಣಿಗೆಯನ್ನು ಸಾಧಿಸಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು 128 ಕೋಟಿ ರೂ.ಗಳ ಲಾಭವನ್ನು ಕಂಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 48 ಕೋಟಿ ರೂಪಾಯಿ ಆದಾಯವನ್ನು ಕಂಡಿದ್ದು, ಶೇಕಡಾ 26ರಷ್ಟು ಏರಿಕೆ ಕಂಡು 2,213 ಕೋಟಿ ರೂ. ತಲುಪಿದೆ.

"ಈ ತ್ರೈಮಾಸಿಕದ ಬೆಳವಣಿಗೆಯನ್ನು ವಿಭಾಗವು ವಿಶೇಷವಾಗಿ ಪ್ರಯಾಣಿಕರ ಕಾರು, ದ್ವಿಚಕ್ರ ಮತ್ತು ಕೃಷಿ ವಿಭಾಗಗಳಲ್ಲಿ ಹೊಸ ಸಾಮರ್ಥ್ಯಗಳ ಹಿನ್ನಲೆಯಲ್ಲಿ ಸಾಧಿಸಲಾಗಿದೆ. ವೈಯಕ್ತಿಕ ಚಲನಶೀಲತೆ ಮತ್ತು ಬಲವಾದ ಗ್ರಾಮೀಣ ಬೇಡಿಕೆಯಲ್ಲಿ ಗ್ರಾಹಕರ ಆದ್ಯತೆಯಿಂದಾಗಿ ಬದಲಿ ಮಾರುಕಟ್ಟೆ ಉತ್ಸಾಹಭರಿತವಾಗಿದೆ " ಎಂದು ಸಿಯೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅನಂತ್ ಗೋಯೆಂಕಾ ಹೇಳಿದರು.

 Ceat Q3 Report: Profit Jumps 167% To Rs 128 Crore

ತ್ರೈಮಾಸಿಕ ವರದಿ ಪ್ರಕಟಗೊಳ್ಳುವ ಮೊದಲು ಸಿಯೆಟ್‌ ನಿಫ್ಟಿಯಲ್ಲಿ ಮಂಗಳವಾರ ಶೇಕಡಾ 5.54ರಷ್ಟು ಏರಿಕೆ ಕಂಡಿದೆ. ಸಿಯೆಟ್ 66.80 ರೂಪಾಯಿ ಏರಿಕೆಗೊಂಡು 1,273.65 ರೂಪಾಯಿಗೆ ತಲುಪಿದೆ.

English summary
Tyre Maker Ceat reported a 167% growth in profit for the December quarter on the back of good recovery in supply to automakers as well as for replacement demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X