ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣಕಾಸು ಅವ್ಯವಹಾರ ಆರೋಪ: ವಿಡಿಯೋಕಾನ್ ಎಂಡಿ ವೇಣುಗೋಪಾಲ್ ಧೂತ್ ಮೇಲೆ FIR ದಾಖಲು

|
Google Oneindia Kannada News

ನವದೆಹಲಿ, ಜೂನ್ 24: ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ಮೇಲೆ ಹಣಕಾಸು ಅವ್ಯವಹಾರ ಆರೋಪದ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿದೆ.

Recommended Video

New Married Couples Donated 50 Beds To A Mumbai Quarantine Centre | Oneindia Kannada

ಮೊಜಾಂಬಿಕ್‌ನಲ್ಲಿ ಕಂಪನಿಯ ತೈಲ ಮತ್ತು ಅನಿಲ ಆಸ್ತಿಗಳಿಗೆ ಹಣಕಾಸು ಒದಗಿಸುವಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಜೂನ್ 23 ರಂದು ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ವಿರುದ್ಧ ಪ್ರಕರಣ ದಾಖಲಿಸಿದೆ.

ಐಸಿಐಸಿಐ ಹಗರಣ: ಮಾಜಿ ಸಿಇಒ ಮನೆ ಮೇಲೆ ದಾಳಿ, ಎಷ್ಟು ಆಸ್ತಿ ವಶ?ಐಸಿಐಸಿಐ ಹಗರಣ: ಮಾಜಿ ಸಿಇಒ ಮನೆ ಮೇಲೆ ದಾಳಿ, ಎಷ್ಟು ಆಸ್ತಿ ವಶ?

ಕಂಪನಿಗಳೊಂದಿಗೆ ಒಳ ಒಪ್ಪಂದ, ಲಾಭದ ಆಸಕ್ತಿ

ಕಂಪನಿಗಳೊಂದಿಗೆ ಒಳ ಒಪ್ಪಂದ, ಲಾಭದ ಆಸಕ್ತಿ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಪರಿಚಿತ ಅಧಿಕಾರಿಗಳು, ಒಎನ್‌ಜಿಸಿ ವಿದೇಶ್, ಆಯಿಲ್ ಇಂಡಿಯಾ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ರಿಸೋರ್ಸಸ್ ಲಿಮಿಟೆಡ್ (ಬಿಪಿಸಿಎಲ್‌ನ ಅಂಗಸಂಸ್ಥೆ) ಮತ್ತು ಬ್ಯಾಂಕುಗಳ ಒಕ್ಕೂಟ ಮುಂದಾಳತ್ವದ ಎಸ್‌ಬಿಐ ಅಪರಿಚಿತ ಅಧಿಕಾರಿಗಳೊಂದಿಗೆ ಹಸ್ತಕ್ಷೇಪ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಡಿಯೋಕಾನ್‌ನ ಅಂಗಸಂಸ್ಥೆ ಮೊಜಾಂಬಿಕ್ ಮೂಲಕ ಡೀಲ್

ವಿಡಿಯೋಕಾನ್‌ನ ಅಂಗಸಂಸ್ಥೆ ಮೊಜಾಂಬಿಕ್ ಮೂಲಕ ಡೀಲ್

ವಿಡಿಯೊಕಾನ್ ಹೈಡ್ರೋಕಾರ್ಬನ್ ಹೋಲ್ಡಿಂಗ್ಸ್ ಲಿಮಿಟೆಡ್ (ವಿಎಚ್‌ಹೆಚ್ಎಲ್) ನ ಅಂಗಸಂಸ್ಥೆಯಾದ ವಿಡಿಯೋಕಾನ್ ಮೊಜಾಂಬಿಕ್ ರೋವುಮಾ 1 ಲಿಮಿಟೆಡ್ (ವಿಎಂಆರ್ಎಲ್) ನ ನಿರ್ದೇಶಕರು ಮತ್ತು ಪ್ರವರ್ತಕರೊಂದಿಗೆ ಎಸ್‌ಬಿಐ ನೇತೃತ್ವದ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. 2008 ರಲ್ಲಿ ವಿಡಿಯೊಕಾನ್ ಇಂಡಸ್ಟ್ರೀಸ್ ಲಿಮಿಟೆಡ್ (ವಿಐಎಲ್) ನ ಅಂಗಸಂಸ್ಥೆಯಾದ ವಿಹೆಚ್‌ಹೆಚ್ಎಲ್, ಯುಎಸ್ ಮೂಲದ ಅನಾಡಾರ್ಕೊದಿಂದ ಮೊಜಾಂಬಿಕ್‌ನ ರೋವುಮಾ ಏರಿಯಾ 1 ಬ್ಲಾಕ್‌ನಲ್ಲಿ ತೈಲ ಮತ್ತು ಅನಿಲ ಬ್ಲಾಕ್‌ನಲ್ಲಿ 10 ಪರ್ಸೆಂಟ್‌ರಷ್ಟು "ಭಾಗವಹಿಸುವ ಆಸಕ್ತಿಯನ್ನು"(Participating interest) ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನು ನಂತರ ಒಎನ್‌ಜಿಸಿ ವಿದೇಶ್ ಲಿಮಿಟೆಡ್ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ 2014 ರ ಜನವರಿಯಲ್ಲಿ 2,519 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇತರೆ ಹಣಕಾಸಿನ ಸೌಲಭ್ಯವನ್ನು ಪಡೆದುಕೊಂಡ VHHL

ಇತರೆ ಹಣಕಾಸಿನ ಸೌಲಭ್ಯವನ್ನು ಪಡೆದುಕೊಂಡ VHHL

ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಏಪ್ರಿಲ್ 2012 ರಲ್ಲಿ 2773.60 ಮಿಲಿಯನ್ ಡಾಲರ್ ಸ್ಟ್ಯಾಂಡ್‌ಬೈ ಲೆಟರ್ ಆಫ್ ಕ್ರೆಡಿಟ್ (ಎಸ್‌ಬಿಎಲ್‌ಸಿ) ಸೌಲಭ್ಯವನ್ನು ವಿಎಚ್‌ಎಚ್‌ಎಲ್‌ಗೆ ಮಂಜೂರು ಮಾಡಿತು. ವಿಚಾರಣೆಯ ಪ್ರಕಾರ, ಮೊಜಾಂಬಿಕ್, ಬ್ರೆಜಿಲ್ ಮತ್ತು ಇಂಡೋನೇಷ್ಯಾದಲ್ಲಿನ ತಮ್ಮ ಸಾಗರೋತ್ತರ ತೈಲ ಮತ್ತು ಅನಿಲ ಆಸ್ತಿಯ ಮೌಲ್ಯಮಾಪನ ಮತ್ತು ಅಭಿವೃದ್ಧಿಯ ಉದ್ದೇಶಕ್ಕಾಗಿ ಮತ್ತು ಈ ತೈಲ ಮತ್ತು ಅನಿಲ ಆಸ್ತಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸೌಲಭ್ಯಗಳ ಮರುಹಣಕಾಸಿಗೆ ಸಂಬಂಧಿಸಿದಂತೆ ಇತರ ಹಣಕಾಸಿನ ಅವಶ್ಯಕತೆಗಳನ್ನು ನೀಡಲಾಗಿದೆ.

ತೈಲ ಮತ್ತು ಅನಿಲ ವ್ಯವಹಾರದಲ್ಲಿ ವ್ಯವಹರಿಸುವ ಕೇಮನ್ ದ್ವೀಪಗಳಲ್ಲಿ ನೋಂದಾಯಿತವಾದ ವಿಎಚ್‌ಹೆಚ್ಎಲ್, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ (ವಿಐಎಲ್) ನ ಹಿಡುವಳಿ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. ವೇಣುಗೋಪಾಲ್ ಧೂತ್, ವಿಎಚ್‌ಎಚ್‌ಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

 ಐಸಿಐಸಿಐ ಬ್ಯಾಂಕ್‌ನೊಂದಿಗೂ ವೇಣುಗೋಪಾಲ್ ಧೂತ್ ಅವ್ಯವಹಾರ ಆರೋಪ

ಐಸಿಐಸಿಐ ಬ್ಯಾಂಕ್‌ನೊಂದಿಗೂ ವೇಣುಗೋಪಾಲ್ ಧೂತ್ ಅವ್ಯವಹಾರ ಆರೋಪ

ಹೌದು, ಈ ಹಿಂದೆ ಐಸಿಐಸಿಐ ಬ್ಯಾಂಕ್‌ನೊಂದಿಗೂ ಡೀಲ್ ಕುದುರಿಸಿ ಅವ್ಯವಹಾರದ ಆರೋಪಕ್ಕೆ ವಿಡಿಯೋಕಾನ್ ಎಂಡಿ ವೇಣುಗೋಪಾಲ್ ಧೂತ್ ಸಿಲುಕಿದ್ದರು. ಐಸಿಐಸಿಐ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವಧಿಯಲ್ಲಿ ವಿಡಿಯೋಕಾನ್‌ಗೆ ಅಕ್ರಮವಾಗಿ ಸಾಲವನ್ನು ಮಂಜೂರು ಮಾಡಲಾಗಿತ್ತು.

ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3,250 ಕೋಟಿ ರುಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ. ಐಸಿಐಸಿಐನ ಮಾಜಿ ಎಂಡಿ ಚಂದಾ ಕೊಚ್ಚಾರ್ ಹಾಗೂ ಕುಟುಂಬಕ್ಕೆ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಗೂ ಅಧಿಕ ಮೊತ್ತ ಸಿಕ್ಕಿದೆ. ಈ ಪ್ರಕರಣವು ವಿಚಾರಣೆ ನಡೆಯುತ್ತಿದ್ದು, ಈ ಹಿಂದೆ ಚಂದಾ ಕೊಚ್ಚರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ 78 ಕೋಟಿ ರುಪಾಯಿ ವಶಪಡಿಸಿಕೊಂಡಿತ್ತು.

English summary
CBI on June 23 booked Videocon chief Venugopal Dhoot on allegations of corruption in the financing of the company's oil and gas assets in Mozambique.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X