ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ದೊಡ್ಡ ವಂಚನೆ ಕೇಸ್: ಡಿಎಚ್‌ಎಫ್‌ಎಲ್‌ ವಿರುದ್ಧ 34,615 ಕೋಟಿ ವಂಚನೆ ಪ್ರಕರಣ ದಾಖಲು

|
Google Oneindia Kannada News

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ 34,615 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ದಿವಾನ್ ಹೌಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್) ಕಪಿಲ್ ಮತ್ತು ಧೀರಜ್ ವಾಧವನ್ ಅವರ ವಿರುದ್ಧ ಪ್ರಕರಣ ದಾಖಲಾದ ನಂತರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಬುಧವಾರ ಮುಂಬೈನ 12 ಸ್ಥಳಗಳಲ್ಲಿ ದಾಳಿ ನಡೆಸಿದೆ. ಇದು ದೊಡ್ಡ ಬ್ಯಾಂಕ್ ವಂಚನೆ ತನಿಖೆ ಇದಾಗಿದೆ ಎಂದು ಸಿಬಿಐ ತಿಳಿಸಿದೆ.

ಸೋಮವಾರ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ನಂತರ ವಾಧವಾನ್‌ಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಎಫ್‌ಐಆರ್‌ನಲ್ಲಿ, ಡಿಎಚ್‌ಎಫ್‌ಎಲ್‌ನ ಪ್ರವರ್ತಕರು ಸಾರ್ವಜನಿಕ ಅಧಿಕಾರಿಗಳು ಸೇರಿದಂತೆ ಇತರರೊಂದಿಗೆ ಪಿತೂರಿ ನಡೆಸಿದ್ದಾರೆ ಮತ್ತು 2010 ಮತ್ತು 2018 ರ ನಡುವೆ 42,871 ಕೋಟಿ ರುಪಾಯಿ ಸಾಲ ಮಂಜೂರು ಮಾಡಲು ಬ್ಯಾಂಕ್‌ಗನ್ನು ಪ್ರೇರೇಪಿಸಿದ್ದಾರೆ ಎಂದು ಹೇಳಲಾಗಿದೆ.

ಸ್ಚಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ ದ್ವಿಗುಣ: 14 ವರ್ಷಗಳಲ್ಲೇ ಅತ್ಯಧಿಕಗೊಂಡ ಮೊತ್ತಸ್ಚಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ ದ್ವಿಗುಣ: 14 ವರ್ಷಗಳಲ್ಲೇ ಅತ್ಯಧಿಕಗೊಂಡ ಮೊತ್ತ

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (DHFL) ಸಂಸ್ಥೆಯ ಅಂದಿನ ಸಿಎಂಡಿ ಕಪಿಲ್ ವಾಧವಾನ್, ನಿರ್ದೇಶಕರಾದ ಧೀರಜ್ ವಾಧವನ್, ಸೇರಿದಂತೆ 6ಕ್ಕೂ ಅಧಿಕ ರಿಯಲ್ ಎಸ್ಟೇಟ್ ಸಂಸ್ಥೆಗಳ ಮೇಲೆ ಕ್ರಿಮಿನಲ್ ಸಂಚು ಆರೋಪ ಹೊರೆಸಲಾಗಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಸಂಸ್ಥೆಗೆ ಮಾಡಿರುವ ವಂಚನೆ ಮೊತ್ತ 34,165 ಕೋಟಿ ರುಪಾಯಿ ಮೀರುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿದೆ.

ವಿವಿಧ ಕಡೆಗಳಲ್ಲಿ ಸಾಲದ ಹಣ ಬಳಕೆ

ವಿವಿಧ ಕಡೆಗಳಲ್ಲಿ ಸಾಲದ ಹಣ ಬಳಕೆ

ದೂರಿನಲ್ಲಿ ಫೊರೆನ್ಸಿಕ್ ಆಡಿಟ್ ಮತ್ತು ಪರಿಶೀಲನೆಗೆ ಉಲ್ಲೇಖಿಸಲಾಗಿದೆ. ವಿಶೇಷ ಲೆಕ್ಕ ಪರಿಶೋಧನೆ ಮತ್ತು ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯು ಗಮನಾರ್ಹವಾದ ಹಣಕಾಸಿನ ಅಕ್ರಮಗಳು, ಸಂಬಂಧಿತ ಪಕ್ಷಗಳ ಮೂಲಕ ಹಣವನ್ನು ತಿರುಗಿಸುವುದು, ಅಸ್ತಿತ್ವದಲ್ಲಿಲ್ಲದ ಚಿಲ್ಲರೆ ಸಾಲಗಳನ್ನು ತೋರಿಸಲು ಪುಸ್ತಕಗಳ ತಯಾರಿಕೆ, ನಿಧಿಗಳ ರೌಂಡ್-ಟ್ರಿಪ್ಪಿಂಗ್ ಮತ್ತು ಕಪಿಲ್ ಅವರ ಆಸ್ತಿಗಳ ಸೃಷ್ಟಿಗೆ ತಿರುಗಿಸಿದ ಮೊತ್ತದ ಬಳಕೆಯನ್ನು ಸೂಚಿಸುತ್ತದೆ.

ವಾಧವಾನ್‌ ಒಟ್ಟು 29,100 ಕೋಟಿ ರುಪಾಯಿ ಮೊತ್ತದ ಬ್ಯಾಂಕ್ ಹಣವನ್ನು ಬೇರೆಡೆಗೆ ತಿರುಗಿಸಲು ಬಳಸಿದ್ದ 66 ಸಂಸ್ಥೆಗಳನ್ನು ಪತ್ತೆಹಚ್ಚಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇವುಗಳಲ್ಲಿ 40 ಸಂಸ್ಥೆಗಳನ್ನು ಕಪಿಲ್ ವಾಧವನ್ ಅವರು ನಿಯಂತ್ರಿಸುತ್ತಾರೆ ಎಂದು ಅವರು ಹೇಳಿದರು.

ತ್ರಿಪುರ ಚಿಟ್‌ಫಂಡ್ ಹಗರಣ: ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆತ್ರಿಪುರ ಚಿಟ್‌ಫಂಡ್ ಹಗರಣ: ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

ಆರೋಪಿಗಳ ಪರ ವಕೀಲರ ವಾದವೇನು?

ಆರೋಪಿಗಳ ಪರ ವಕೀಲರ ವಾದವೇನು?

ವಾಧವಾನ್‌ ಸಹೋದರರ ಪರ ವಕೀಲರಾದ ರೋಹನ್ ದಕ್ಷಿಣಿ, ಇಡೀ ವಿಷಯವು ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿದೆ. ಜನವರಿಯಲ್ಲಿ ಅಪೀಲ್ ಟ್ರಿಬ್ಯೂನಲ್ ಡಿಎಚ್‌ಎಫ್‌ಎಲ್‌ ನ ತಪ್ಪಿಸಿಕೊಳ್ಳುವ ವಹಿವಾಟುಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಾಲದಾತರಿಗೆ ಮನವಿ ಮಾಡಿದೆ. ಇದೀಗ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಸಾಲಗಳಿಗೆ ಸಂಬಂಧಿಸಿದ ಯೋಜನೆಗಳು ಮೌಲ್ಯವನ್ನು ಹೊಂದಿವೆ, ಈ ವಿಚಾರವನ್ನು ನಿರ್ಲಕ್ಷಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ.

ಹಲವು ಬ್ಯಾಂಕ್‌ಗಳಿಗೆ ವಂಚನೆ

ಹಲವು ಬ್ಯಾಂಕ್‌ಗಳಿಗೆ ವಂಚನೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅತಿ ಹೆಚ್ಚು ಅಂದರೆ 9898 ಕೋಟಿ ರುಪಾಯಿ ವಂಚನೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ, ನಂತರದ ಸ್ಥಾನದಲ್ಲಿ ಬ್ಯಾಂಕ್ ಆಫ್ ಇಂಡಿಯಾ (4,044 ಕೋಟಿ ರು), ಕೆನರಾ ಬ್ಯಾಂಕ್ (4,022 ಕೋಟಿ ರು), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (3,813 ಕೋಟಿ ರು), ಪಂಜಾಬ್ ನ್ಯಾಷನಲ್ ಬ್ಯಾಂಕ್ (3,802 ಕೋಟಿ ರು) ಮತ್ತು ಬ್ಯಾಂಕ್ ಆಫ್ ಬರೋಡಾ (2,036 ಕೋಟಿ ರು) ವಂಚನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ, ಫೆಡರಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಮತ್ತು ಯುಸಿಒ ಸೇರಿದಂತೆ ಇತರೆ ಕನ್ಸೋರ್ಟಿಯಂ ಬ್ಯಾಂಕ್‌ಗಳು 71 ಕೋಟಿಯಿಂದ 1,499 ಕೋಟಿ ರುಪಾಯಿ ವಂಚನೆಗೊಳಗಾಗಿವೆ.

ಯೆಸ್ ಬ್ಯಾಂಕ್ ಸಂಸ್ಥಾಪಕನಿಗೆ ಕಿಕ್‌ಬ್ಯಾಕ್!

ಯೆಸ್ ಬ್ಯಾಂಕ್ ಸಂಸ್ಥಾಪಕನಿಗೆ ಕಿಕ್‌ಬ್ಯಾಕ್!

ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಸೇರಿದ ನಂತರ ಸಿಬಿಐಗೆ ಇದು ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ, ಎಬಿಜಿ ಮತ್ತು ಅದರ ಅಧ್ಯಕ್ಷ ರಿಷಿ ಕುಮಾರ್ ಅಗರ್ವಾಲ್ ವಿರುದ್ಧ ಐಸಿಐಸಿಐ ಬ್ಯಾಂಕ್ ನೇತೃತ್ವದ 28 ಬ್ಯಾಂಕ್‌ಗಳ ಒಕ್ಕೂಟಕ್ಕೆ ₹ 22,842 ಕೋಟಿ ವಂಚನೆ ಆರೋಪ ಮಾಡಿದ.

ಡಿಎಚ್‌ಎಫ್‌ಎಲ್ ಪ್ರವರ್ತಕರು, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ವಂಚನೆ ಪ್ರಕರಣ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (14,046 ಕೋಟಿ ರು) ಅಡಿಯಲ್ಲಿ 2.60 ಲಕ್ಷ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿದ ಆರೋಪ ಸೇರಿದಂತೆ ಪ್ರಕರಣಗಳಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ. ಯೆಸ್ ಬ್ಯಾಂಕ್ ಸಂಸ್ಥಾಪಕ ಕಪೂರ್‌ಗೆ 600 ಕೋಟಿ ರುಪಾಯಿ ಕಿಕ್‌ಬ್ಯಾಕ್ ಪಾವತಿಸಿದ ಆರೋಪ ವಾಧವನ್‌ ಮೇಲಿದೆ.

English summary
The CBI raided 12 locations in Mumbai after booking Dewan Housing and Finance Limited (DHFL)’s Kapil and Dheeraj Wadhawan for allegedly cheating a consortium of Union Bank of India-led 17 banks of Rs 34,615 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X