ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ ಬಂಧನದ ಅವಶ್ಯಕತೆಯಿಲ್ಲ : ಸಿಬಿಐ ಬಿಗ್ ಬ್ಲಂಡರ್

|
Google Oneindia Kannada News

ವಿಜಯ್ ಮಲ್ಯ ಬಂಧನ ಮಾಡಬೇಕು ಎಂಬ ಸಂದರ್ಭದಲ್ಲಿ ಕೇವಲ ಅವರ ಪ್ರವೇಶ ಹಾಗೂ ನಿರ್ಗಮನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದರೆ ಸಾಕು ಎಂದುಕೊಂಡಿದ್ದು ಸಿಬಿಐ ತಪ್ಪು ತೀರ್ಮಾನವಾಗಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಆದರೆ, ರಹಸ್ಯವಾಗಿ ನಡೆದಿದೆ ಎನ್ನಲಾದ ಸಂವಹನದ ಮಾಹಿತಿಯು ಪತ್ರಿಕೆಯೊಂದಕ್ಕೆ ದೊರೆತಿದೆ. ಸಿಬಿಐನಿಂದ ಮುಂಬೈ ಪೊಲೀಸರಿಗೆ ಲಿಖಿತವಾಗಿಯೇ ಬರೆದ ಪತ್ರದಲ್ಲಿ ಮೊದಲಿಗೆ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ತೀರ್ಮಾನವೇ ತಪ್ಪು ಎಂದಿದೆ. ಅಂದರೆ ದಾಖಲೆಗಳ ಪ್ರಕಾರ ಇರುವಂತೆ, ಮಲ್ಯರ ಬಂಧನ 'ಅಗತ್ಯ ಇಲ್ಲ'.

ಮಲ್ಯ ಸಾಲದ ಉರುಳು ಈಗ ಬ್ಯಾಂಕ್ ಅಧಿಕಾರಿಗಳ ಕೊರಳಿಗೂ ಬಿತ್ತು!ಮಲ್ಯ ಸಾಲದ ಉರುಳು ಈಗ ಬ್ಯಾಂಕ್ ಅಧಿಕಾರಿಗಳ ಕೊರಳಿಗೂ ಬಿತ್ತು!

ಅಕ್ಟೋಬರ್ 16, 2015ರಲ್ಲಿ ಸಿಬಿಐನಿಂದ ಮೊದಲ ಲುಕ್ ಔಟ್ ಹೊರಡಿಸಲಾಯಿತು. ಅದರಲ್ಲಿ "ದೇಶ ಬಿಟ್ಟು ಹೋಗದಂತೆ ತಡೆಯಬೇಕು" ಎಂಬ ಬಾಕ್ಸ್ ಅನ್ನು ತುಂಬಲಾಗಿತ್ತು. ಎರಡನೇ ನೋಟಿಸ್ ಅದೇ ವರ್ಷದ ನವೆಂಬರ್ 24ನೇ ತಾರೀಕು ಹೊರಡಿಸಲಾಗಿದೆ. ಅದೇ ರಾತ್ರಿ ವಿಜಯ್ ಮಲ್ಯ ದೆಹಲಿಗೆ ಬಂದಿಳಿದಿದ್ದಾರೆ.

CBI put it in writing: Detention of Vijay Mallya is not required

ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ

ಆ ನೋಟಿಸ್ ನಲ್ಲಿ ಮುಂಬೈ ಸ್ಪೆಷಲ್ ಬ್ರ್ಯಾಂಚ್ ಗೊಂದು ಪತ್ರ ಕಳುಹಿಸಲಾಗಿದೆ. ಅದರಲ್ಲಿ '"ಎಲ್ಲಿಗೆ ಹೋಗುತ್ತಾರೆ, ಎಲ್ಲಿಗೆ ಬರುತ್ತಾರೆ" ಎಂಬ ಮಾಹಿತಿ ಇರಲಿ ಎಂಬ ಬಾಕ್ಸ್ ತುಂಬಲಾಗಿದೆ. ಕೆಲ ತಿಂಗಳ ನಂತರ ಅಂದರೆ ಮಾರ್ಚ್ 2, 2016ರಂದು ವಿಜಯ್ ಮಲ್ಯ ದೇಶ ಬಿಟ್ಟು ಹೋಗುತ್ತಾರೆ. ಆದರೆ ಮಲ್ಯ ದೇಶ ಬಿಟ್ಟು ಹೋಗದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗುವಂತೆ ಫೆಬ್ರವರಿ 28ರಂದು ಕಾನೂನು ಸಲಹೆಗಾರರು ತಿಳಿಸಿದರೂ ಮಲ್ಯಗೆ ಸಾಲ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಂದಿಸುವುದಿಲ್ಲ.

English summary
The CBI last week explained, according to a news agency, that the downgrade of the Look Out Circular (LOC) for Vijay Mallya — from his detention to merely being informed about his entry/exit — was an 'error of judgment.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X