ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕಾರ್ಲ್ಸ್ ಬರ್ಗ್ ಬಿಯರ್ ಕಿಕ್ ಶುರು

By Mahesh
|
Google Oneindia Kannada News

ಮೈಸೂರು, ಜನವರಿ 23: ಜಾಗತಿಕ ಬಿಯರ್ ಕಂಪನಿಯಾದ ಕಾರ್ಲ್ಸ್ ಬರ್ಗ್ ಗ್ರೂಪ್‍ನ ಅಂಗಸಂಸ್ಥೆಯಾಗಿರುವ ಕಾರ್ಲ್ಸ್ ಬರ್ಗ್ ಇಂಡಿಯಾ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹೊಸ ಬ್ರಿವರಿ ಘಟಕವನ್ನು ಆರಂಭಿಸಿದೆ.

ಕಾರ್ಲ್ಸ್ ಬರ್ಗ್ ಇಂಡಿಯಾದ ಜನಪ್ರಿಯ ಬ್ರಾಂಡ್‍ಗಳಾದ ಕಾರ್ಲ್ಸ್ ಬರ್ಗ್ ಮತ್ತು ಟುಬೊರ್ಗ್ ಕರ್ನಾಟಕದಲ್ಲಿ ಈಗಾಗಲೇ ದೊರೆಯುತ್ತಿವೆ ಮತ್ತು ಕಳೆದ ಹಲವಾರು ವರ್ಷಗಳಿಂದ ಈ ರಾಜ್ಯದ ಗ್ರಾಹಕರು ಬ್ರಾಂಡ್‍ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಇಲ್ಲಿ ಇದೀಗ ಬ್ರಿವರಿ ಘಟಕವನ್ನು ಆರಂಭಿಸುವುದರೊಂದಿಗೆ ರಾಜ್ಯದಲ್ಲಿ ಕಾರ್ಲ್ಸ್ ಬರ್ಗ್ ಇಂಡಿಯಾದ ಜನಪ್ರಿಯತೆ ಹೆಚ್ಚಳಗೊಳ್ಳಲು ಮತ್ತು ಪ್ರಗತಿಯಾಗಲು ಒಂದು ಅವಕಾಶ ಸಿಕ್ಕಂತಾಗಿದೆ.

ರೈತರಿಗೆ ಚಿಯರ್ಸ್: ಬರಲಿದೆ ಬೀಟ್ ರೂಟ್ ಗುಂಡುರೈತರಿಗೆ ಚಿಯರ್ಸ್: ಬರಲಿದೆ ಬೀಟ್ ರೂಟ್ ಗುಂಡು

ಪ್ರಸ್ತುತ ಕಾರ್ಲ್ಸ್ ಬರ್ಗ್ ಇಂಡಿಯಾ ದೇಶಾದ್ಯಂತ 8 ಘಟಕಗಳನ್ನು ಹೊಂದಿದ್ದು, ಇದರಲ್ಲಿ 4 ಗುತ್ತಿಗೆ ಆಧಾರದಲ್ಲಿ ಬಿಯರ್ ಉತ್ಪಾದನಾ ಘಟಕಗಳನ್ನು ನಡೆಸುತ್ತಿದೆ. ಕಾರ್ಲ್ಸ್ ಬರ್ಗ್ ಹೊಸ ಘಟಕದ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ಓದಿ..

ಕಾರ್ಲ್ಸ್ ಬರ್ಗ್ ಇಂಡಿಯಾದ 8ನೇ ಬ್ರಿವರಿ ಘಟಕ

ಕಾರ್ಲ್ಸ್ ಬರ್ಗ್ ಇಂಡಿಯಾದ 8ನೇ ಬ್ರಿವರಿ ಘಟಕ

ಇದು ಭಾರತದಲ್ಲಿ ಕಾರ್ಲ್ಸ್ ಬರ್ಗ್ ಇಂಡಿಯಾದ 8ನೇ ಬ್ರಿವರಿ ಘಟಕವಾಗಿದೆ. ಪ್ರಸ್ತುತ ಭಾರತದ ಬಿಯರ್ ಮಾರುಕಟ್ಟೆಯಲ್ಲಿ ಕಾರ್ಲ್ಸ್ ಬರ್ಗ್ 3 ನೇ ಸ್ಥಾನದಲ್ಲಿದ್ದು, ಈ ಘಟಕ ಸ್ಥಾಪನೆಯೊಂದಿಗೆ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಗೊಳಿಸಲು ಮತ್ತು ಸ್ಥಾನವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಂತಾಗಿದೆ.

ನಂಜನಗೂಡು ತಾಲೂಕಿನಲ್ಲಿ ಬಿಯರ್ ಉತ್ಪಾದನಾ ಘಟಕ

ನಂಜನಗೂಡು ತಾಲೂಕಿನಲ್ಲಿ ಬಿಯರ್ ಉತ್ಪಾದನಾ ಘಟಕ

ಮೈಸೂರು ಸಮೀಪದ ನಂಜನಗೂಡು ತಾಲೂಕಿನಲ್ಲಿ 27.1 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಬಿಯರ್ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ. ಇಲ್ಲಿ ವಾರ್ಷಿಕವಾಗಿ 800 ಕೆಎಚ್‍ಎಲ್ (80 ದಶಲಕ್ಷ ಲೀಟರ್) ಉತ್ಪಾದಿಸಲಾಗುತ್ತದೆ. ಇಲ್ಲಿ ಕಾರ್ಲ್ಸ್ ಬರ್ಗ್ ಇಂಡಿಯಾದ ಎಲ್ಲಾ ಬ್ರಾಂಡ್‍ಗಳ ಉತ್ಪಾದನೆ ಮಾಡಲಾಗುತ್ತದೆ.

ಪರಿಸರ ಸ್ನೇಹಿ ಘಟಕ

ಪರಿಸರ ಸ್ನೇಹಿ ಘಟಕ

ಈ ಘಟಕದಲ್ಲಿ 48,000 ಚದರ ಮೀಟರ್ ಗಿಂತಲೂ ಹೆಚ್ಚು ಹಸಿರು ವಲಯ ಇದ್ದು, ಮಳೆ ನೀರು ಕೊಯ್ಲು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸೇರಿದಂತೆ ಪರಿಸರ ಸ್ನೇಹಿ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಕಾರ್ಲ್ಸ್ ಬರ್ಗ್ ಗ್ರೂಪ್‍ನ ಕ್ರೋನೆನ್ ಬರ್ಗ್ 1664 ಬಿಯರ್ ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಕರ್ನಾಟಕ ಅತ್ಯಂತ ಪ್ರಮುಖವಾದ ಮಾರುಕಟ್ಟೆ

ಕರ್ನಾಟಕ ಅತ್ಯಂತ ಪ್ರಮುಖವಾದ ಮಾರುಕಟ್ಟೆ

ಕಾರ್ಲ್ಸ್ ಬರ್ಗ್ ಬ್ರಾಂಡ್ ಗೆ ಗೆ ಕರ್ನಾಟಕ ಅತ್ಯಂತ ಪ್ರಮುಖವಾದ ಮಾರುಕಟ್ಟೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಲ್ಸ್ ಬರ್ಗ್ ಇಂಡಿಯಾ ತಂಡವು ಸಂಸ್ಥೆಯ ಜನಪ್ರಿಯ ಬ್ರಾಂಡ್‍ಗಳಾಗಿರುವ ಕಾರ್ಲ್ಸ್ ಬರ್ಗ್ ಮತ್ತು ಟುಬೊರ್ಗ್(ಭಾರತದ ನಂಬರ್ ಒನ್ ಅಂತಾರಾಷ್ಟ್ರೀಯ ಬಿಯರ್ ಬ್ರಾಂಡ್) ಅನ್ನು ಅತ್ಯಂತ ಶ್ರೇಷ್ಠ ಗುಣಮಟ್ಟದಲ್ಲಿ ಗ್ರಾಹಕರಿಗೆ ತಲುಪಿಸಲು ಬದ್ಧವಾಗಿದೆ.

English summary
Beer maker Carlsberg India has established a new brewery in Karnataka with an aim to strengthen its foothold in the southern region. Carlsberg India Private Limited (CIPL) commenced its operations in 2007 with the first production in Paonta Sahib, Himachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X