• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರು ಖರೀದಿಗೆ ವಾಹನ ಸಾಲ: ಐಸಿಐಸಿಐ ಬ್ಯಾಂಕ್‌ನೊಂದಿಗೆ ಹ್ಯುಂಡೈ ಒಪ್ಪಂದ

|

ನವದೆಹಲಿ, ಜೂನ್ 23: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತನ್ನ ಗ್ರಾಹಕರಿಗೆ ಕಾರು ಖರೀದಿಗೆ ಕಸ್ಟಮೈಸ್ ಮಾಡಿದ ಆನ್ ಲೈನ್ ರಿಟೇಲ್ ಹಣಕಾಸು ಪರಿಹಾರಗಳನ್ನು ನೀಡುವ ಸಲುವಾಗಿ ಸೋಮವಾರ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಪಾಲುದಾರಿಕೆಯಡಿಯಲ್ಲಿ, ಐಸಿಐಸಿಐ ಬ್ಯಾಂಕ್ ಆನ್ ಲೈನ್ ನಲ್ಲಿ ಎಚ್ಎಂಐಎಲ್ ನ 'ಖರೀದಿಸಲು ಕ್ಲಿಕ್ ಮಾಡಿ'ಯೋಜನೆ ಸಂಯೋಜಿಸಿದ್ದು, ಈ ಮೂಲಕ ಗ್ರಾಹಕರಿಗೆ ತಮ್ಮ ನೆಚ್ಚಿನ ಹ್ಯುಂಡೈ ಕಾರನ್ನು ಖರೀದಿಸಲು ಅಗತ್ಯವಾದ ಹಣದ ಜೊತೆಗೆ ಕಾರು ಖರೀದಿಗೆ ಸಂಯೋಜಿತ ಆನ್ ಲೈನ್ ಪರಿಹಾರ ಒದಗಿಸುತ್ತದೆ. ಇದರೊಂದಿಗೆ, ಕ್ಲಿಕ್ ಟು ಬೈ' ವೆಬ್ ಸೈಟ್ ಮೂಲಕವೇ ಐಸಿಐಸಿಐ ಬ್ಯಾಂಕಿನ ಗ್ರಾಹಕರು ನೇರವಾಗಿ ಕಾರಿನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಕಾರು ಖರೀದಿಗೆ ಸಾಲ: ಮಾರುತಿ ಸುಜೂಕಿಯೊಂದಿಗೆ ಕರೂರ್ ವೈಶ್ಯ ಬ್ಯಾಂಕ್ ಒಪ್ಪಂದ

ಈ ಸೇವೆಗಳ ಜೊತೆಗೆ, ಐಸಿಐಸಿಐ ಬ್ಯಾಂಕ್ 100 ಪರ್ಸೆಂಟ್‌ರಷ್ಟು ಆನ್-ರೋಡ್ ಹಣದ ಕೊಡುಗೆಯನ್ನು ಸಹ ನೀಡುತ್ತದೆ.

ಇತ್ತೀಚೆಗಷ್ಟೇ ಕರೂರ್ ವೈಶ್ಯ ಬ್ಯಾಂಕ್ ಮಾರುತಿ ಸುಜೂಕಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆಕರ್ಷಕ ಬಡ್ಡಿ ದರ, ಆರು ತಿಂಗಳ ಹಾಲಿಡೆ ಅವಧಿಯೊಂದಿಗೆ 100 ಪರ್ಸೆಂಟ್‌ರಷ್ಟು ಆನ್ ರೋಡ್ ಫೈನಾನ್ಸ್ ನೀಡಲು ಕರೂರ್ ವೈಶ್ಯ ಬ್ಯಾಂಕ್ ಕೂಡ ಮುಂದಾಗಿದೆ.

English summary
Hyundai Motor India Limited (HMIL), Monday signed an MoU with ICICI Bank to offer online car loan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X