ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 ರಲ್ಲಿ 30 ಸಾವಿರ ಮಂದಿ ನೇಮಕಾತಿ ಘೋಷಿದ ಐಟಿ ಕಂಪನಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಕೊರೊನಾವೈರಸ್ ಸೋಂಕಿನ ಭೀತಿಯಲ್ಲೂ ಪ್ಯಾರೀಸ್ ಮೂಲದ ಕ್ಯಾಪ್ ಜೆಮಿನಿ ತನ್ನ ಉದ್ಯೋಗಿಗಳಿಗೆ ಸಂಬಳ ಏರಿಕೆ ಮಾಡಿತ್ತು. ಈಗ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದೆ. 2021ರಲ್ಲಿ ಸುಮಾರು 30, 000ಕ್ಕೂ ಅಧಿಕ ಮಂದಿಯನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದೆ.

ಐಟಿ ರಫ್ತು ಸೇವಾ ಸಂಸ್ಥೆ ಕ್ಯಾಪ್ ಜೆಮಿನಿ ಕೊವಿಡ್ 19 ಸಂದರ್ಭದಲ್ಲೂ ಉತ್ತಮ ಪ್ರಗತಿ ಕಂಡಿದ್ದು, ಹೊಸ ನೇಮಕಾತಿಗೆ ಮುಂದಾಗಿದೆ.

2021ರ ಆರ್ಥಿಕ ವರ್ಷಕ್ಕೆ ಶೇ 7 ರಿಂದ 9ರಷ್ಟು ಆದಾಯ ಪ್ರಗತಿ ಮಾರ್ಗದರ್ಶನ ನೀಡಲಾಗಿದೆ ಎಂದು ಕ್ಯಾಪ್ ಜೆಮಿನಿ ಭಾರತದ ಮುಖ್ಯ ಕಾರ್ಯಕಾರಿ ಅಧಿಕಾರಿ ಅಶ್ವಿನ್ ವೈ ಹೇಳಿದ್ದಾರೆ.

Capgemini plans to hire about 30,000 people in India in 2021

ಭಾರತದಲ್ಲಿ ನೇಮಕಾತಿ ಹೆಚ್ಚಳ
ಸರಿ ಸುಮಾರು 30,000 ಮಂದಿ ನೇಮಕವಾಗುತ್ತಿದ್ದು, ಫ್ರೆಶರ್ಸ್, ಮಧ್ಯಮ ಸ್ತರದ ಸಾಫ್ಟ್ ವೇರ್ ಇಂಜಿನಿಯರ್ಸ್ ಗಳಿಗೆ ಆದ್ಯತೆ ನೀಡಲಾಗುತ್ತದೆ. ಹೊಸ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಪೂರಕವಾಗಿ ನೇಮಕಾತಿ ನಡೆಯಲಿದೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿ 1.2 ಲಕ್ಷ ಉದ್ಯೋಗಿಗಳನ್ನು ಕ್ಯಾಪ್ ಜೆಮಿನಿ ಹೊಂದಿದೆ. ಕಳೆದ ವರ್ಷ 12,000 ಮಂದಿಯನ್ನು ಭಾರತದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.

ಕ್ಲೌಡ್ ಆಧಾರಿತ ಸೇವೆ, ರಿಮೋಟ್ ತಂತ್ರಜ್ಞಾನ ಸೇವೆ, ಸೈಬರ್ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಡಿಜಿಟಲ್ ಹಾಗೂ ಕ್ಲೌಡ್ ತಂತ್ರಜ್ಞಾನ ಕೌಶಲ್ಯ ಹೊಂದಿದವರಿಗೆ ಬೇಡಿಕೆ ಹೆಚ್ಚಿದೆ ಎಂದು ಮಾನವ ಸಂಪನ್ಮೂಲ ವಿಭಾಗದ ಅನಿಲ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹೀಥ್ರೂ ವಿಮಾನ ನಿಲ್ದಾಣ, ಏರ್ ಬಸ್ ಸ್ಕೈವೈಸ್, ಮರ್ಸೀಡಿಸ್ ಬೆಂಜ್ ಮುಂತಾದ ಸಂಸ್ಥೆಗಳನ್ನು ಗ್ರಾಹಕರಾಗಿ ಕ್ಯಾಪ್ ಜೆಮಿನಿ ಹೊಂದಿದೆ.

English summary
Capgemini plans to hire about 30,000 people in India in 2021, a 25% increase from last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X