ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಾನಾ ಭೀತಿ ನಡುವೆ ಈ ಕಂಪನಿ ಟೆಕ್ಕಿಗಳಿಗೆ ಸಂಬಳ ಏರಿಕೆ !

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಐಟಿ-ಬಿಟಿ ಉದ್ಯಮ ನಲುಗುತ್ತಿದೆ. ಯುಎಸ್, ಯುಕೆ, ಯುರೋಪ್ ನಲ್ಲಿ ಕ್ಲೆಂಟುಗಳನ್ನು ಹೊಂದಿರುವ ಭಾರತೀಯ ಮೂಲದ ಕಂಪನಿಗಳು ಈ ಬಾರಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಸಂಬಳ ಏರಿಕೆ, ಇಂಕ್ರಿಮೆಂಟ್, ಪ್ರೊಮೋಷನ್ ಕೊಡ್ತಾರಾ? ಭಾರಿ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಕೊರೊನಾ ಹೊಡೆತಕ್ಕೆ ಐಟಿ, ಐಟಿಯೇತರ ಉದ್ಯಮದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕೆಲವು ಕಂಪನಿಗಳು ಸರ್ಕಾರದ ಯೋಜನೆಗಳಿಗೆ ತಾಂತ್ರಿಕ ನೆರವು ಒದಗಿಸಿ, ಸಮತೋಲನ ಕಾಯ್ದುಕೊಂಡಿವೆ.

ಆದರೆ, ಹಲವು ಕಂಪನಿಗಳಿಗೆ ಇದು ಅಪ್ರೈಸಲ್ ಅವಧಿ ಹೀಗಾಗಿ ಐಟಿ ಉದ್ಯೋಗಿಗಳಿಗೆ ತಿಂಗಳ ಸಂಬಳ ಹಾಗೂ ಹೈಕ್ ಎಷ್ಟು ಸಿಗಬಹುದು ಎಂಬ ಚಿಂತೆ ಕಾಡುತ್ತಿದೆ. ಆದರೆ, ಬೆಂಗಳೂರಿನ ಟೆಕ್ಕಿ ದೀಪಾ ವೆಂಕಟೇಶ್ ರೆಡ್ಡಿ ಅವರಿಗಾದಂತೆ ಅನೇಕ ಕಂಪನಿಗಳು ಯಾವ ಪೂರ್ವ ನೋಟಿಸ್ ನೀಡದೆ ಕೆಲಸದಿಂದ ತೆಗೆದು ಹಾಕುವ ನಿದರ್ಶನಗಳು ಎದುರಾಗುವುದಿಲ್ಲ ಎನ್ನುವಂತಿಲ್ಲ.

ಸಂಕಟದ ಸಂದರ್ಭದಲ್ಲೂ ಹೆಚ್ಚುವರಿ ಸಂಬಳ ಘೋಷಿಸಿದ ಐಟಿ ಕಂಪನಿಸಂಕಟದ ಸಂದರ್ಭದಲ್ಲೂ ಹೆಚ್ಚುವರಿ ಸಂಬಳ ಘೋಷಿಸಿದ ಐಟಿ ಕಂಪನಿ

ಬ್ಯಾಂಕ್ ಇಎಂಐ ಮುಂದೂಡಿಕೆಯಾದ ನಂತರ ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂಬ ಮಾತನ್ನು ವೇದವಾಕ್ಯದಂತೆ ಪಾಲಿಸಿ, ಅಪಾರ್ಟ್ಮೆಂಟ್, ಎಸ್ ಯುವಿ ಖರೀದಿಸಿದ್ದ ಟೆಕ್ಕಿಗಳು ನೆಮ್ಮದಿಯಿಂದಿದ್ದಾರೆ.

Capgemini announces increments, cash allowances to its employees

ಈ ನಡುವೆ ಕಾಗ್ನಿಜೆಂಟ್ ನಂತರ ಪ್ಯಾರೀಸ್ ಮೂಲಕ ಕ್ಯಾಪ್ ಜೆಮಿನಿ ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಶೇ 70ರಷ್ಟು ಉದ್ಯೋಗಿಗಳಿಗೆ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಇಂಗ್ರೀಮೆಂಟ್ ನೀಡಿದೆ.

ಸುಮಾರು 1.2 ಲಕ್ಷ ಉದ್ಯೋಗಿಗಳ ಪೈಕಿ 84,000 ಮಂದಿಗೆ ಒಂದಂಕಿಯ ಸಂಬಳ ಏರಿಕೆಯಾಗಿದೆ. ಎ ಮತ್ತು ಬಿ ಗ್ರೇಡ್ ಸಿಬ್ಬಂದಿಗೆ ಸದ್ಯಕ್ಕೆ ಸಂಬಳ ಏರಿಕೆಯಾಗಿದ್ದು, ಮಿಕ್ಕವರಿಗೆ ಜುಲೈನಲ್ಲಿ ಸಿಗಲಿದೆ. ಯಾವುದೇ ಸ್ತರ ಉದ್ಯೋಗಿಗಳ ಸಂಬಳ ಕಡಿತವಾಗುತ್ತಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾಕ್ಕೆ ಕ್ಯಾಪ್ ಜೆಮಿನಿ ವಕ್ತಾರರು ಹೇಳಿದ್ದಾರೆ.

ಯಾವುದೇ ಪ್ರಾಜೆಕ್ಟ್ ಇಲ್ಲದೆ ಬೆಂಚ್ ನಲ್ಲಿರುವ ಉದ್ಯೋಗಿಗಳಿಗೂ ಸಂಬಳ ಸಿಗುತ್ತಿದೆ. ಅನೇಕ ಕಂಪನಿಗಳಲ್ಲಿ 60 ದಿನಗಳ ಮೇಲೆ ಪ್ರಾಜೆಕ್ಟ್ ಇಲ್ಲದಿದ್ದರೆ ಅವರಿಗೆ ಪಿಂಕ್ ಸ್ಲಿಪ್ ಕೊಡಲಾಗುತ್ತದೆ. ಆದರೆ, ಕ್ಯಾಪ್ ಜೆಮಿನಿಯಲ್ಲಿ ಉದ್ಯೋಗಿಗಳ ಹಿತ ಕಾಯಲಾಗುತ್ತಿದೆ.

ಇದಲ್ಲದೆ, ಉದ್ಯೋಗಿಗಳ ವೈದ್ಯಕೀಯ ತುರ್ತುನಿಧಿ ಎಂದು 200 ಕೋಟಿ ರುಗಳನ್ನು ಸಂಸ್ಥೆ ಎತ್ತಿರಿಸಿದೆ. ಶೇ 95ರಷ್ಟು ಮಂದಿ ಸದ್ಯ ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದಾರೆ.

ಕಾಗ್ನಿಜೆಂಟ್ ಕಂಪನಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಉದ್ಯೋಗಿಗಳಿಗೆ ಒಳ್ಳೆ ಸುದ್ದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಸೋಸಿಯೇಟ್ ಹಾಗೂ ಅದಕ್ಕಿಂತ ಕೆಳಮಟ್ಟದ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮೂಲ ಸಂಬಳದ ಆಧಾರದ ಮೇಲೆ ಶೇ 25 ರಷ್ಟು ಹೆಚ್ಚುವರಿ ಸಂಬಳವನ್ನು ಏಪ್ರಿಲ್ ತಿಂಗಳಿನಲ್ಲಿ ನೀಡಲಿದೆ.

English summary
At Capgemini, 95% of the workforce is currently working from home and nearly 84,000 of its 1.2 lakh employees got single-digit salary hike according to TOI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X