ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜೆರ್ಸಿಯ ಐಗೇಟ್ ಖರೀದಿಸಿದ ಪ್ಯಾರೀಸ್ ನ ಕ್ಯಾಪ್ ಜೆಮಿನಿ

By Mahesh
|
Google Oneindia Kannada News

ಬೆಂಗಳೂರು, ಏ.27: ಸಾಫ್ಟ್ ವೇರ್ ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಸೋಮವಾರ ಬಹುದೊಡ್ಡ ಒಪ್ಪಂದ ಏರ್ಪಟ್ಟಿದೆ. ಅಮೆರಿಕ ಮೂಲದ ಐಗೇಟ್ ಸಂಸ್ಥೆಯನ್ನು ಪ್ಯಾರೀಸ್ ಮೂಲದ ಕ್ಯಾಪ್ ಜೆಮಿನಿ ಖರೀದಿಸಿದೆ.

ಸುಮಾರು 48 ಡಾಲರ್ ಪ್ರತಿ ಷೇರಿನಂತೆ ಐಗೇಟ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಡೀಲ್ ಮೊತ್ತ 4ಬಿಲಿಯನ್ ಡಾಲರ್ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಐಟಿ ಕ್ಷೇತ್ರದಲ್ಲಿ ನಡೆದ ಬೃಹತ್ ಡೀಲ್ ಆಗಿದೆ.[ಇನ್ಫೋಸಿಸ್ ಬಿಟ್ಟ ಅಶೋಕ್ ಈಗ ಐಗೇಟ್ ಸಿಇಒ]

ಯುಎಸ್ ಷೇರುಪೇಟೆಗಳಲ್ಲಿ ವ್ಯವಹರಿಸುವ ಐಟಿ ಸರ್ವೀಸ್ ನೀಡುವ ಐಗೇಟ್ ಸಂಸ್ಥೆ ನ್ಯೂ ಜೆರ್ಸಿಯಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿದೆ. ಸಂಸ್ಥೆ ಆದಾಯ ಸುಮಾರು 1.3 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಮೆರಿಕ ಅಲ್ಲದೆ ಯುರೋಪ್, ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ಐಗೇಟ್ ತನ್ನ ಪ್ರಾಬಲ್ಯ ಹೊಂದಿದೆ.

Capgemini acquires iGATE for $4 billion

ಈ ಖರೀದಿ ನಂತರ 2015ರಲ್ಲಿ ಕ್ಯಾ ಪ್ ಜೆಮಿನಿ ಮೌಲ್ಯ 12.5 ಬಿಲಿಯನ್ ಯುರೋಕ್ಕೆ ಏರಲಿದೆ. ಒಟ್ಟಾರೆ 1.9 ಲಕ್ಷ ಉದ್ಯೋಗಿಗಳನ್ನು ಹೊಂದಲಿದೆ.[ನೋಕಿಯಾದಿಂದ ನೆಟ್ವರ್ಕ್ ಕ್ಷೇತ್ರದಲ್ಲಿ ಭಾರಿ ಡೀಲ್]

ಐಗೇಟ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಮೇಲೆ ಕ್ಯಾಪ್ ಜೆಮಿನಿಗೆ ಈಗ ಜನರಲ್ ಎಲೆಕ್ಟ್ರಿಕ್, ರಾಯಲ್ ಬ್ಯಾಂಕ್ ಆಫ್ ಕೆನಡಾ ಮುಂತಾದ ಸಂಸ್ಥೆಗಳು ಗ್ರಾಹಕ ಸಂಸ್ಥೆಗಳಾಗಿವೆ.

2011ರಲ್ಲಿ ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್ ಲಿ. ಸಂಸ್ಥೆಯನ್ನು ಅಂದಾಜು 1.22 ಬಿಲಿಯನ್ ಡಾಲರ್ ನೀಡಿ ಐಗೇಟ್ ಕಾರ್ಪೊರೇಷನ್ ಖರೀದಿಸಿತ್ತು. ಖರೀದಿ ಬಗ್ಗೆ ಟ್ವೀಟ್ ಎಡದಲ್ಲಿ ಐಗೇಟ್ ಸಿಇಒ ಅಶೋಕ್ ವೆಮೂರಿ ಬಲದಲ್ಲಿ ಕ್ಯಾಪ್ ಜೆಮಿನಿ ಸಿಇಒ ಪಾಲ್ ಹರ್ಮೆಲಿನ್

ಕಳೆದ 25ವರ್ಷಗಳಲ್ಲಿ ಸುಮಾರು 30,000 ಉದ್ಯೋಗಿಗಳು, ನಂಬುಗೆಯ ಪಾರ್ಟ್ನರ್ ಗಳು, 250 ಗ್ರಾಹಕರು, 4ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದಕ್ಕೆ ಸಂತಸವಾಗಿದೆ ಎಂದು ಐಗೇಟ್ ನ ಸಹ ಸ್ಥಾಪಕ ಸುನೀಲ್ ವಾಧ್ವಾನಿ ಪ್ರತಿಕ್ರಿಯಿಸಿದ್ದಾರೆ.

English summary
French IT consultant gaint Capgemini and US company iGATE on Monday announced that they have entered into a definitive merger agreement under which Capgemini will acquire iGATE for a cash consideration of $48 per share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X