ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q4: ಕೆನರಾ ಬ್ಯಾಂಕ್ ಆದಾಯ ಇಳಿಕೆ, ಲಾಭವೂ ಅಷ್ಟಕಷ್ಟೇ!

By Mahesh
|
Google Oneindia Kannada News

ಬೆಂಗಳೂರು, ಮೇ26: ಕರ್ನಾಟಕ ಮೂಲದ ಕೆನರಾ ಬ್ಯಾಂಕ್ 2014-15ನೇ ಸಾಲಿನ ಕೊನೆ ತ್ರೈಮಾಸಿಕದಲ್ಲಿ ಶೇ 0.34ರಷ್ಟು ನಿವ್ವಳ ಲಾಭ ಏರಿಕೆ ಕಂಡಿದೆ. ಮಾ.31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 612.96 ಕೋಟಿ ನಿವ್ವಳ ಲಾಭ ಪಡೆದುಕೊಂಡಿದೆ. ಅದರೆ, ತ್ರೈಮಾಸಿಕದಿಂದ ತ್ರೈಮಾಸಿಕ ಆದಾಯ ಇಳಿಕೆಯಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 610.8 ಕೋಟಿ ರು ಲಾಭ ಪಡೆದುಕೊಂಡಿತ್ತು. ಬ್ಯಾಂಕಿನ ಒಟ್ಟಾರೆ ಆದಾಯ ಶೇ 7 ರಷ್ಟು ಏರಿಕೆ ಕಂಡು 12,429.21 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 11,609.72 ಕೋಟಿ ರು ಗಳಿಸಿತ್ತು.

2014-15ರ ಅವಧಿಗೆ ಬ್ಯಾಂಕಿನ ನಿವ್ವಳ ಲಾಭ ಶೇ 10.8ರಷ್ಟು ಏರಿಕೆ ಕಂಡು 2,702.63 ಕೋಟಿ ರು ಗಳಿಸಿದೆ. ಈ ಹಿಂದಿನ ಆರ್ಥಿಕ ವರ್ಷದಲ್ಲಿ 2,438.19 ಕೋಟಿ ರು ಗಳಿಸಿತ್ತು. ಅದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ 2,486 ಕೋಟಿ ರು ಆದಾಯ(ನಿವ್ವಳ ಬಡ್ಡಿ ಆದಾಯ) ಶೇ 1.93 ಕುಸಿತ ಕಂಡಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 2,532 ಕೋಟಿ ರು ಗಳಿಸಲಾಗಿತ್ತು.

ಒಟ್ಟಾರೆ ಗ್ರಾಹಕರ ಸಂಖ್ಯೆ 6.58 ಕೋಟಿ ರೂ. ವೃದ್ಧಿಗೊಂಡಿದೆ (ಕಳೆದ ವರ್ಷ 5.55 ಕೋಟಿ ರೂ). ಪ್ರಸಕ್ತ ವಿತ್ತ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಗ್ರಾಹಕರು ಸೇರ್ಪಡೆಯಾಗಿದ್ದಾರೆ.

Canara Bank Posts Flat Q4 Profit at Rs 613 Crore

ಪ್ರಧಾನ ಮಂತ್ರಿಗಳ ಜನ-ಧನ ಯೋಜನೆಯಲ್ಲಿ 64.76 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆ ಸಮರ್ಥವಾಗಿ ಜಾರಿಗೊಳಿಸಿದ್ದಕ್ಕೆ 2015ನೇ ಸಾಲಿನ ಅತ್ಯುತ್ತಮ ಸಾಧನೆ ಪ್ರಶಸ್ತಿ "ಗೋಲ್ಡನ್ ಪಿಕಾಕ್ ಬಿಸ್ನೆಸ್ ಎಕ್ಸಲೆನ್ಸಿ " ಕೆನರಾ ಬ್ಯಾಂಕ್ ಪಾಲಾಗಿದೆ.

ಕೆನರಾ ಬ್ಯಾಂಕ್ ತನ್ನ ಷೇರುದಾರರಿಗೆ 10.50 ರು ಪ್ರತಿ ಷೇರಿನಂತೆ ಡಿವಿಡೆಂಡ್ ಘೋಷಿಸಿದೆ. ಈ ವರ್ಷ ಸುಮಾರು 3,000 ಕೋಟಿ ರು ಹೂಡಿಕೆ ಸಿಕ್ಕರೆ ಪ್ರಗತಿ ಕಾಣಬಹುದು ಎಂದು ಕಾರ್ಯಕಾರಿ ನಿರ್ದೇಶಕ ಪಿಎಸ್ ರಾವತ್ ಹೇಳಿದ್ದಾರೆ.

ಕೆನರಾ ಬ್ಯಾಂಕ್ ಷೇರುಗಳು ಮಂಗಳವಾರ ಬಿಎಸ್ ಇನಲ್ಲಿ 340 ರು ನಂತೆ ಟ್ರೇಡಿಂಗ್ ಶುರು ಮಾಡಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 1.91ರಷ್ಟು ಕುಸಿತ ಕಂಡು 333.70 ರು ಗೆ ಇಳಿದಿತ್ತು. ಎನ್ ಎಸ್ ಇನಲ್ಲೂ ಇಷ್ಟೇ ಪ್ರಮಾಣದ ಇಳಿಕೆ ಕಂಡು ಬಂದಿದ್ದು 333.60ರಂತೆ ಟ್ರೇಡಿಂಗ್ ಆಗುತ್ತಿದೆ.

English summary
State-owned Canara Bank today reported a profit of Rs 612.96 crore for the last quarter of 2014-15 financial year against that of Rs 610.8 crore in the same period of previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X