ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿಯ ಪುಕ್ಶೇಟಿ ಫೋನಿನಲ್ಲಿ ವಾಟ್ಸಾಪ್ ಇದೆಯಾ?

By Prasad
|
Google Oneindia Kannada News

ಬೆಂಗಳೂರು, ಜುಲೈ 25 : ಪುಗಸಟ್ಟೆಯಾಗಿ ಜಿಯೋ ಫೋನ್ ನೀಡುತ್ತಿದ್ದೇವೆ ಎಂದು ರಿಲಯನ್ಸ್ ಚೇರ್ಮನ್ ಮುಖೇಶ್ ಅಂಬಾನಿ ಕೆಲ ದಿನಗಳ ಹಿಂದೆ ಘೋಷಿಸುತ್ತಿದ್ದಂತೆ ಎಲ್ಲರೂ ದಿಗ್ಭ್ರಮೆಯಿಂದ ಮೂಗಿನ ಮೇಲೆ ಬೆರಳು ಇಟ್ಟವರೆ.

ಒಂದೂ ಪೈಸಾ ನೀಡದೆ ಮೊಬೈಲ್ ನೀಡುತ್ತೇವೆಂದರೆ ಯಾರು ಬೇಡ ಅಂತಾರೆ? ಈಗಾಗಲೆ ಸಹಸ್ರಾರು ಜನರು ಮನದಲ್ಲಿಯೇ ಮಂಡಿಗೆ ಮೆಲ್ಲಲು ಆರಂಭಿಸಿರುತ್ತಾರೆ. ಆದರೆ, ಇಂಟರ್ನೆಟ್ಟಿನಲ್ಲಿಯೇ ಮುಳುಗಿರುವ ಜನರಿಗೆ ಹಲವಾರು ಪ್ರಶ್ನೆಗಳು ಈಗಾಗಲೆ ಕಾಡಲು ಆರಂಭಿಸಿರುತ್ತವೆ.

0 ರೂ.ಗೆ ಮೊಬೈಲ್, ಮುಖೇಶ್ ಅಂಬಾನಿ ಹೊಸ ಕಮಾಲ್!0 ರೂ.ಗೆ ಮೊಬೈಲ್, ಮುಖೇಶ್ ಅಂಬಾನಿ ಹೊಸ ಕಮಾಲ್!

ಆಗಸ್ಟ್ 24ರಿಂದ ಒಂದೂವರೆ ಸಾವಿರ ರುಪಾಯಿ ನೀಡಿ ಬುಕ್ ಮಾಡಬಹುದಾದ ಈ ಫೋನಿನಲ್ಲಿ 2 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ, ವಿಜಿಎ ಮುಂಭಾಗದ ಕ್ಯಾಮೆರಾ, 2000mAh ಬ್ಯಾಟರಿ, ಬ್ಲೂಟೂತ್, ವೈಫೈ, ಎಫ್ಎಂ ರೇಡಿಯೋ ಸೌಲಭ್ಯ ಎಲ್ಲ ಇರಲಿದೆ.

Can we use Whatspp on Reliance 4G feature phone?

ಆದರೆ, ಜನರನ್ನು ಕಾಡುತ್ತಿರುವ ಪ್ರಶ್ನೆಯೇನೆಂದರೆ, 4ಜಿ ಟೇಟಾ ಸ್ಟ್ರೀಮಿಂಗ್ ಇರುವ ಈ ರಿಲಯನ್ಸ್ ಫೀಚರ್ ಫೋನ್ ನಲ್ಲಿ ಸ್ನೇಹಿತರೊಂದಿಗೆ ಸಂವಾದಿಸಲು ವಾಟ್ಸಾಪ್ ಇರತ್ತಾ, ಫೇಸ್ ಬುಕ್ ಬಳಸಬಹುದಾ, ಯುಟ್ಯೂಬ್ ಬಳಸಿ ವಿಡಿಯೋ ನೋಡಬಹುದಾ?

ಇಲ್ಲಿದೆ ನೋಡಿ ಮಜಾ. ಮೊಬೈಲ್ ತಜ್ಞರ ಪ್ರಕಾರ, ಈ ಮಾಡೆಲ್ ನಲ್ಲಿ ವಾಟ್ಸಾಪ್ ಬಳಸುವ ಯಾವ ಅವಕಾಶವೂ ಇರುವುದಿಲ್ಲ. ಅಲ್ಲಿಗೆ, ಕನಸು ಕಾಣುತ್ತಿರುವವರ ಕನಸು ಅರ್ಧಕ್ಕರ್ಧ ನುಚ್ಚುನೂರಾಗಿರುತ್ತದೆ. ಆದರೆ, ವಸಿ ತಡ್ಕಳ್ಳಿ. ಯುಟ್ಯೂಬ್ ಮತ್ತು ಫೇಸ್ ಬುಕ್ ಬಳಸಬಹುದಂತೆ.

ಜಿಯೋ ಮಾಹಿತಿ ಸೋರಿಕೆಯ ಆರೋಪಿಗಿತ್ತು ಮಾಸ್ಟರ್ ಪ್ಲಾನ್ಜಿಯೋ ಮಾಹಿತಿ ಸೋರಿಕೆಯ ಆರೋಪಿಗಿತ್ತು ಮಾಸ್ಟರ್ ಪ್ಲಾನ್

ಠೇವಣಿಯಾಗಿ ನೀಡುವ 1,500 ರುಪಾಯಿಯನ್ನು 36 ತಿಂಗಳ ನಂತರ ಬಳಕೆದಾರರಿಗೆ ವಾಪಸ್ ನೀಡಲಾಗುವುದು ಎಂದು ರಿಲಯನ್ಸ್ ತಿಳಿಸಿದೆ. ಹೀಗಾಗಿ, ಆರಂಭದಲ್ಲಿ ಒಂದೂವರೆ ಸಾವಿರ ನೀಡಿದರೂ, ಅದನ್ನು ವಾಪಸ್ ನೀಡುವುದರಿಂದ ಇದನ್ನು ಪುಕ್ಶೇಟಿ ಫೋನ್ ಅಂತಲೇ ತಿಳಿದುಕೊಳ್ಳಬಹುದು.

ಭಾರತದಲ್ಲಿ ಒಟ್ಟು 78 ಕೋಟಿ ಮೊಬೈಲ್ ಬಳಕೆದಾರರಿದ್ದು, ಅವರಲ್ಲಿ 50 ಕೋಟಿಯಷ್ಟು ಜನರು ಇಂಟರ್ನೆಟ್ ಅಥವಾ ಡೇಟಾ ಬಳಕೆಗೆ ಅಪ್ರಯೋಜಕವಾಗಿವೆ. ಈ 50 ಕೋಟಿ ಜನರಿಗೆ ರಿಲಯನ್ಸ್ ನೀಡುವ ಪುಕ್ಶೇಟಿ ಫೋನ್ ವರದಾನವಾಗಲಿದೆ ಎಂಬುದು ಭಾರತದ ಕುಬೇರ ಮುಖೇಶ್ ಅಂಬಾನಿಯವರ ಉವಾಚ.

English summary
Can we use Whatspp, Facebook or Youtube on Reliance 4G feature phone, which will be available for booking from August 24? According to Youtuber technical guruji, there is no facility to use WhatsApp, but can use Facebook and YouTube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X