ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಟಿಒದಲ್ಲಿ ಪರೀಕ್ಷೆ ಇಲ್ಲದೇ ಸಿಗಲಿದೆ DL; ಏನಿದು ಹೊಸ ನಿಯಮ...

|
Google Oneindia Kannada News

ನವದೆಹಲಿ, ಜೂನ್ 16: ಡ್ರೈವಿಂಗ್ ಲೈಸೆನ್ಸ್‌ ನಿರೀಕ್ಷೆಯಲ್ಲಿರುವ ಜನರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಚಾಲನಾ ಪರವಾನಗಿ ಪಡೆಯಲು ಹೊಸ ಅಧಿಸೂಚನೆ ಹೊರಡಿಸಿದ್ದು, ಈ ನಿಯಮದ ಪ್ರಕಾರ ನೀವು ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇದೀಗ ಆರ್‌ಟಿಒಗೆ ಹೋಗಿ ಚಾಲನಾ ಪರೀಕ್ಷೆಗೆ ಒಳಪಡಬೇಕಾಗಿಲ್ಲ.

Recommended Video

Driving Licenseಗೆ ಇನ್ಮುಂದೆ ಸಂಪೂರ್ಣ ಹೊಸ ನಿಯಮ | Oneindia Kannada

ಆದರೆ ಯಾವುದೇ ಸರ್ಕಾರಿ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಅಂಥವರಿಗೆ ಚಾಲನಾ ಪರವಾನಗಿ ಅರ್ಜಿ ಸಲ್ಲಿಸುವಾಗ ಆರ್‌ಟಿಒದಲ್ಲಿ ನಡೆಯಲಿರುವ ಚಾಲನಾ ಪರೀಕ್ಷೆಯಿಂದ ವಿನಾಯಿತಿ ಸಿಗಲಿದೆ. ಈ ನಿಯಮ ಯಾವಾಗ ಜಾರಿಗೆ ಬರಲಿದೆ? ಮುಂದೆ ಓದಿ...

 ಜುಲೈ 1ರಿಂದ ಈ ನಿಯಮ ಜಾರಿ

ಜುಲೈ 1ರಿಂದ ಈ ನಿಯಮ ಜಾರಿ

ಜುಲೈ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಚಾಲನಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ವ್ಯಕ್ತಿಗೆ ಇನ್ನು ಆರ್‌ಟಿಒದಲ್ಲಿ ಚಾಲನಾ ಪರೀಕ್ಷೆಯ ಅಗತ್ಯವಿರುವುದಿಲ್ಲ. ಅವರ ಚಾಲನಾ ಪರವಾನಗಿಯನ್ನು ಅವರು ಚಾಲನೆ ತರಬೇತಿ ಪಡೆದುಕೊಂಡ, ರಾಜ್ಯ ಸಾರಿಗೆ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಚಾಲನಾ ತರಬೇತಿ ಕೇಂದ್ರದ ಪ್ರಮಾಣ ಪತ್ರವನ್ನು ಪರಿಗಣಿಸಿ ನೀಡಲಾಗುವುದು.

ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕುಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು

 ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸೂಚನೆ

ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸೂಚನೆ

ಚಾಲನಾ ಟ್ರ್ಯಾಕ್, ಐಟಿ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆಯ ಮಾನದಂಡಗಳನ್ನು ಪೂರೈಸುವ ಹಾಗೂ ನಿಗದಿತ ಪಠ್ಯಕ್ರಮದ ಪ್ರಕಾರ ತರಬೇತಿ ನೀಡುವ ಚಾಲನಾ ಕೇಂದ್ರಗಳಿಗೆ ಮಾನ್ಯತೆ ನೀಡಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಈ ಖಾಸಗಿ ಚಾಲನಾ ತರಬೇತಿ ಕೇಂದ್ರಗಳ ಮಾನ್ಯತೆ ಐದು ವರ್ಷಗಳವರೆಗೆ ಇರುತ್ತದೆ. ನಂತರ ಅವುಗಳನ್ನು ಸರ್ಕಾರ ನವೀಕರಿಸಬೇಕಾಗುತ್ತದೆ.

 ಚಾಲನಾ ಕೇಂದ್ರಗಳಿಗೆ ಷರತ್ತುಗಳು...

ಚಾಲನಾ ಕೇಂದ್ರಗಳಿಗೆ ಷರತ್ತುಗಳು...

ಪ್ರತಿ ವರ್ಷ ರಸ್ತೆ ಅಪಘಾತದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಈ ಹೊಸ ಮಾರ್ಗಸೂಚಿಗಳೊಂದಿಗೆ, ಚಾಲನಾ ಕೌಶಲ ಹೆಚ್ಚಿಸುವ ಉದ್ದೇಶ ಸಚಿವಾಲಯದ್ದಾಗಿದೆ. ಚಾಲನಾ ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯದಿಂದ ಕೆಲವು ಷರತ್ತುಗಳನ್ನು ವಿಧಿಸಿದೆ.

ಪ್ಯಾನ್ ಕಾರ್ಡ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಗಡುವು ವಿಸ್ತರಣೆಪ್ಯಾನ್ ಕಾರ್ಡ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಗಡುವು ವಿಸ್ತರಣೆ

 ಷರತ್ತುಗಳು ಏನು?

ಷರತ್ತುಗಳು ಏನು?

1. ಪ್ರತಿ 5 ವರ್ಷಗಳಿಗೆ ಖಾಸಗಿ ಚಾಲನಾ ತರಬೇತಿ ಕೇಂದ್ರಗಳ ಮಾನ್ಯತೆಯನ್ನು ನವೀಕರಿಸಿಕೊಳ್ಳಬೇಕು.
2. ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಪ್ರದೇಶ ಜಾಗ ಹೊಂದಿರಬೇಕು.
3. ಮಧ್ಯಮ ಮತ್ತು ಭಾರೀ ಪ್ರಯಾಣಿಕ, ಸರಕು ವಾಹನಗಳು ಹಾಗೂ ಟ್ರೇಲರ್‌ಗಳ ತರಬೇತಿ ಕೇಂದ್ರಗಳಿಗೆ ಕನಿಷ್ಠ ಎರಡು ಎಕರೆ ಭೂಮಿ ಇರಬೇಕು.
4. ತರಬೇತುದಾರ ಕನಿಷ್ಠ 12ನೇ ತರಗತಿ ಪಾಸ್ ಆಗಿದ್ದು, ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು.
5. ಚಾಲನಾ ತರಬೇತಿ ನೀಡುವವರು ಸಚಿವಾಲಯದ ಬೋಧನಾ ಪಠ್ಯಕ್ರಮದಂತೆ ತರಬೇತಿ ನೀಡಬೇಕು. ಲಘು ಮೋಟಾರು ವಾಹನ ಓಡಿಸಲು 29 ಗಂಟೆಗಳವರೆಗೆ ತರಬೇತಿ ನೀಡಬೇಕು.
6. ಚಾಲನಾ ಕೇಂದ್ರಗಳ ಪಠ್ಯಕ್ರಮವು ಸಿದ್ಧಾಂತ ಹಾಗೂ ಪ್ರಾಯೋಗಿಕ ಈ ಎರಡು ಭಾಗಗಳನ್ನು ಒಳಗೊಂಡಿರಬೇಕು.
7. ಚಾಲನೆಯ ಮೂಲ ಅಂಶಗಳನ್ನು ಪ್ರಾಯೋಗಿಕ ಕಲಿಕೆ ಮೂಲಕ 21 ಗಂಟೆಗಳ ಕಾಲ ಕಲಿಯಬೇಕಾಗುತ್ತದೆ.
8. ಸಿದ್ಧಾಂತದ ಕಲಿಕೆಯು 8 ಗಂಟೆಗಳ ಅವಧಿಯದ್ದಾಗಿರಬೇಕು.

English summary
Union Ministry of Road Transport and Highways has issued a new notification, Under this, now you can get a driving licence without undergoing any driving test at RTO
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X