ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ಮಾರುಕಟ್ಟೆ ಮೌಲ್ಯ ನಷ್ಟಕ್ಕೆ ಕಾರಣ ಬಹಿರಂಗ!

By Mahesh
|
Google Oneindia Kannada News

ಬೆಂಗಳೂರು, ಜುಲೈ 27: ಅತ್ಯಂತ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಒಂದೇ ದಿನದಲ್ಲಿ 120 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಇಷ್ಟ ಮೊತ್ತದ ನಷ್ಟ ಇಲ್ಲಿ ತನಕ ಯುಎಸ್ ಷೇರುಪೇಟೆಯಲ್ಲಿ ಯಾವ ಕಂಪನಿಯೂ ಅನುಭವಿಸಿರಲಿಲ್ಲ. ಈಗ ಫೇಸ್ ಬುಕ್ ನ ಈ ನಷ್ಟಕ್ಕೆ ಕಾರಣ ಬಹಿರಂಗಪಡಿಸಲಾಗಿದೆ.

ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣದಿಂದ ಫೇಸ್ ಬುಕ್ ಮೇಲೆ ಉಂಟಾದ ಆಘಾತವೇ ಇದಕ್ಕೆ ಕಾರಣ ಎನ್ನಲಾಗಿದೆ. ಸುಮಾರು 87 ಮಿಲಿಯನ್ ಫೇಸ್ ಬುಕ್ ಪ್ರೊಫೈಲ್ ಗಳ ಸುರಕ್ಷತೆ ಎಂದು ತಿಳಿದ ಬಳಿಕ, ಯುರೋಪ್ ನಲ್ಲಿ ಸುಮಾರು 3 ಮಿಲಿಯನ್ ಬಳಕೆದಾರರು ಸಾಮಾಜಿಕ ಜಾಲ ತಾಣಗಳನ್ನು ತೊರೆದಿದ್ದಾರೆ.

Cambridge Analytica Scandal Mark Zuckerberg and Facebook Market cap loss

ಷೇರುಪೇಟೆಯಲ್ಲಿ ಕುಸಿತದ ನಂತರ ಫೇಸ್ ಬುಕ್ ನ ಮಾರುಕಟ್ಟೆ ಮೌಲ್ಯ 508 ಬಿಲಿಯನ್ ಡಾಲರ್ ನಷ್ಟಾಗಿದೆ. ಇದಕ್ಕೂ ಮುನ್ನ 2000ರಲ್ಲಿ ಇಂಟೆಲ್ ಸಂಸ್ಥೆ ಒಂದೇ ದಿನದಲ್ಲಿ 90.74 ಬಿಲಿಯನ್ ಡಾಲರ್ ನಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿತ್ತು.

2000ರಲ್ಲಿ ಮೈಕ್ರೋಸಾಫ್ಟ್ 80ಬಿಲಿಯನ್ ಡಾಲರ್, ಆಪಲ್ 2013ರಲ್ಲಿ 59.6 ಬಿಲಿಯನ್ ಡಾಲರ್ ಮೌಲ್ಯವನ್ನು ಒಂದೇ ದಿನದಂದು ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಫೇಸ್ ಬುಕ್ ತ್ರೈಮಾಸಿಕ ವರದಿಯಲ್ಲಿ 13.34 ಬಿಲಿಯನ್ ಡಾಲರ್ ಲಾಭದ ನಿರೀಕ್ಷೆಯಿತ್ತು. ಆದರೆ, 13.23 ಬಿಲಿಯನ್ ಡಾಲರ್ ಮಾತ್ರ ಗಳಿಕೆಯಾಯಿತು. 223 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಆದಾಯದಲ್ಲಿ ಶೇ 42ರಷ್ಟು ಏರಿಕೆ ಕಂಡರೂ ಸಕ್ರಿಯ ಬಳಕೆದಾರರ ಸಂಖ್ಯೆ ಇಳಿಕೆಯಾಗಿರುವ ಬಗ್ಗೆ ಕಂಪನಿ ಆತಂಕ ವ್ಯಕ್ತಪಡಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಏರಿಳಿತ ಆರಂಭವಾಯಿತು.

ವರ್ಷಾಂತ್ಯಕ್ಕೆ 20 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಮಾರ್ಕ್ ಝುಕರ್ ಬರ್ಗ್ ಹೇಳಿದ್ದರು. ಆದರೆ, ಕಂಪನಿಯಲ್ಲಿ ಶೇ 17ರಷ್ಟು ಷೇರು ಹೋಂದಿರುವ ಮಾರ್ಕ್ ಅವರು ಷೇರುಗಳ ಕುಸಿತದಿಂದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿಯುವಂತಾಯಿತು.

English summary
More than 119 bn USD has been wiped off Facebook's market value which includes 17 bn USD hit to the fortune of ite founder Mark Zuckerberg. Company told investors that user growth had slowed in the wake of the Cambridge Analytica Scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X