ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ನಿಂದ ಫೆಮಾ ಉಲ್ಲಂಘನೆ: ದೆಹಲಿ ಹೈಕೋರ್ಟ್ ಆದೇಶ ಸ್ವಾಗತಿಸಿದ CAIT

|
Google Oneindia Kannada News

ನವದೆಹಲಿ, ಡಿಸೆಂಬರ್ 22: ಅಮೆಜಾನ್ ನಿಂದ ಫಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ ಮೆಂಟ್ ಆಕ್ಟ್ (ಫೆಮಾ) ಉಲ್ಲಂಘನೆ ಆಗಿದೆ ಮತ್ತು ಸರ್ಕಾರದ ಎಫ್ ಡಿಐ ನಿಯಮಾವಳಿಗಳಿಗೆ ಅನುಸಾರವಾಗಿ ನಡೆದುಕೊಂಡಿಲ್ಲ ಎಂದು ದೆಹಲಿ ಹೈ ಕೋರ್ಟ್ ಆದೇಶವನ್ನು ಸೋಮವಾರ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಸ್ವಾಗತಿಸಿದೆ.

ಫ್ಯೂಚರ್ ಗ್ರೂಪ್‌ನ ರಿಲಯನ್ಸ್ ರಿಟೇಲ್‌ಗೆ ಪ್ರಸ್ತಾಪಿಸಲಾದ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ, ಈ ಒಪ್ಪಂದವನ್ನು ಅಮೆಜಾನ್ ವಿರೋಧಿಸುತ್ತಿದೆ.

ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್

ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ಮಾತನಾಡಿ, "ಸರ್ಕಾರದ ಎಫ್ ಡಿಐ ನಿಯಮಗಳನ್ನು ಅಮೆಜಾನ್ ಬಹಳ ಹಿಂದಿನಿಂದಲೂ ಉಲ್ಲಂಘನೆ ಮಾಡುತ್ತಾ ಬಂದಿದೆ ಹಾಗೂ ಅಮೆಜಾನ್ ಕ್ರೂರ ನಡವಳಿಕೆ ಬಗ್ಗೆ ಹೇಳುತ್ತಿದ್ದುದರ ಬಗ್ಗೆ ಸಿಎಐಟಿ ನಿಲುವನ್ನು ಹೈಕೋರ್ಟ್ ಆದೇಶವು ಎತ್ತಿಹಿಡಿದಿದೆ. ಈ ನೆಲದ ಕಾನೂನು ತನ್ನ ಅನುಕೂಲಕ್ಕೆ ಬಳಸಿಕೊಂಡ ಅಮೆಜಾನ್ ವಿರುದ್ಧ ಜಾರಿ ನಿರ್ದೇಶನಾಲಯ ಸೇರಿ ಇತರ ಸಂಸ್ಥೆಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು," ಎಂದಿದ್ದಾರೆ.

 CAIT welcomes Delhi High Court order on Amazon violates the FEMA and FDI policy

ಭಾರತದ ರೀಟೇಲ್ ವ್ಯವಹಾರವನ್ನು ಇ ಕಾಮರ್ಸ್ ಮೂಲಕ ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವುದಕ್ಕೆ ಮತ್ತು ದಬ್ಬಾಳಿಕೆ ನಡೆಸುವುದಕ್ಕೆ ತಿರುಚುವ, ಬೆದರಿಸುವ, ಅನಿಯಂತ್ರಿತ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಅಮೆಜಾನ್ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಫ್ಯೂಚರ್ ಕೂಪನ್ ಲಿಮಿಟೆಡ್ ನಲ್ಲಿ ಅನಿಯಂತ್ರಿತ ಮಾರ್ಗದ ಮೂಲಕ ಅಮೆಜಾನ್ ಹತೋಟಿ ಪಡೆದಿದೆ ಎಂದು ಸರಿಯಾಗಿಯೇ ಹೇಳಲಾಗಿದೆ. ಮತ್ತು ಯಾವುದೇ ಸರ್ಕಾರದ ಅನುಮತಿಯ ಗೈರು ಹಾಜರಿಯಲ್ಲಿ ಇದು ಫೆಮಾ ಮತ್ತು ಎಫ್ ಡಿಐ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಸಿಎಐಟಿ ಹೇಳಿದೆ.

ಫ್ಯೂಚರ್ ಗ್ರೂಪ್‌ನೊಂದಿಗಿನ ಉಲ್ಲಂಘನೆಯ ಒಪ್ಪಂದಕ್ಕಾಗಿ ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಎಐಟಿ ಇತ್ತೀಚಿನ ದಿನಗಳಲ್ಲಿ ವಿಸ್ತೃತವಾದ ದೂರೊಂದನ್ನು ಸಾಕ್ಷ್ಯ ಸಮೇತವಾಗಿ ವಾಣಿಜ್ಯ ಸಚಿವರು, ಹಣಕಾಸು ಸಚಿವರು, ಜಾರಿ ನಿರ್ದೇಶನಾಲಯ, ಸೆಬಿ ಹಾಗೂ ಆರ್ ಬಿಐಗೆ ನೀಡಲಾಗಿತ್ತು. ನಿಯಮ ಉಲ್ಲಂಘಿಸಿ ಫ್ಯೂಚರ್ ಜತೆಗೆ ವ್ಯವಹಾರ ಮಾಡಿದ್ದಕ್ಕೆ ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಲಾಗಿತ್ತು.

ಹೈಕೋರ್ಟ್ ಗಮನಿಸಿರುವ ಅಂಶದಲ್ಲಿ ಅಮೆಜಾನ್ ನಿಂದ ಎಫ್ ಡಿಐ ನಿಯಮ ಉಲ್ಲಂಘನೆ ಆಗಿದೆ. ಸಿಎಐಟಿ ಇದನ್ನೇ ಬಹಳ ಸಮಯದಿಂದ ಹೇಳಿಕೊಂಡು ಬಂದಿದ್ದು, ಅಮೆಜಾನ್ ನಂತಹ ಪ್ರಮುಖ ಇ ಕಾಮರ್ಸ್ ಕಂಪೆನಿಗಳು ಪದೇ ಪದೇ ಉಲ್ಲಂಘನೆ ಮಾಡುತ್ತಿವೆ ಎಂಬುದರ ಕಡೆಗೆ ಸಿಎಐಟಿ ಗಮನ ಸೆಳೆದಿದೆ.

English summary
CAIT on Monday welcomed the Delhi High Court’s order in which it held Amazon liable for violating the Foreign Exchange Management Act (FEMA) and provisions of the FDI policy of the Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X