ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ಧಾರ್ಥ್‌ಗೆ ಕಿರುಕುಳ ಆರೋಪ: ಐಟಿ ಇಲಾಖೆಯ ಮಹತ್ವದ ಹೇಳಿಕೆ

|
Google Oneindia Kannada News

Recommended Video

V G Siddhartha : ವಿ ಜಿ ಸಿದ್ಧಾರ್ಥ ಮೇಲಿನ ಕಿರುಕುಳದ ಆರೋಪದ ಬಗ್ಗೆ ಐ ಟಿ ಇಲಾಖೆ ಹೇಳಿದ್ದೇನು?|Oneindia Kannada

ಬೆಂಗಳೂರು, ಜುಲೈ 30: ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿ.ಜಿ. ಸಿದ್ಧಾರ್ಥ ಅವರಿಗೆ ತಮ್ಮ ಅಧಿಕಾರಿಗಳು ಕಿರುಕುಳ ನೀಡಿದ್ದರು ಎನ್ನಲಾದ ಪತ್ರವೊಂದರ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಜತೆಗೆ, ಸಿದ್ಧಾರ್ಥ ಅವರ ಆದಾಯ ತೆರಿಗೆ ವಹಿವಾಟಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ, ಪ್ರಮುಖ ದಾಖಲೆಗಳ ಕುರಿತು ಐಟಿ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ವಿವರಣೆ ನೀಡಿದೆ. 11 ಅಂಶಗಳನ್ನು ಪಟ್ಟಿ ಮಾಡಿ ನೀಡಿರುವ ಆದಾಯ ತೆರಿಗೆ ಸಿದ್ಧಾರ್ಥ ಅವರ ಬಳಿಯಿದ್ಧ ಅಘೋಷಿತ ಹಣದ ಕುರಿತು ಮಾಹಿತಿ ನೀಡಿದೆ.

ಸಿಸಿಡಿ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರವು ಎಲ್ಲ ಕಡೆ ಪ್ರಸಾರವಾಗುತ್ತಿದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆಯು ಕಾಫಿ ಡೇ ಷೇರುಗಳನ್ನು ಮುಟ್ಟುಗೋಲು ಹಾಕಿರುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಒಕ್ಕಣೆಯ ಅಧಿಕೃತತೆ ತಿಳಿದಿಲ್ಲ. ಅದರಲ್ಲಿ ಮಾಡಿರುವ ರುಜು, ವಿಜಿ ಸಿದ್ಧಾರ್ಥ ಅವರು ತಮ್ಮ ವಾರ್ಷಿಕ ವರದಿಗಳಲ್ಲಿ ಸಲ್ಲಿಸಿರುವ ರುಜುವಿಗೆ ತಾಳೆಯಾಗುತ್ತಿಲ್ಲ ಎಂದು ಇಲಾಖೆ ಹೇಳಿದೆ.

ವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣ

ವಿಜಿ ಸಿದ್ಧಾರ್ಥ ಮತ್ತು ಕೆಫೆ ಕಾಫಿ ಡೇ ಪ್ರಕರಣದ ತನಿಖೆಯು ಕರ್ನಾಟಕದ ಪ್ರಮುಖ ರಾಜಕೀಯ ಮುಖಂಡರೊಬ್ಬರ ಪ್ರಕರಣದಿಂದಾಗಿ ಉದ್ಭವವಾಯಿತು. ಸಿಸಿಡಿಯು ಗೋಪ್ಯವಾಗಿ ಹಣಕಾಸು ವ್ಯವಹಾರಗಳನ್ನು ನಡೆಸಿರುವುದಕ್ಕೆ ನಂಬಲರ್ಹ ಸಾಕ್ಷ್ಯಗಳ ಅಧಾರದಲ್ಲಿ ಈ ತನಿಖೆ ನಡೆಸಲಾಯಿತು.

ಸಿಂಗಪುರದ ಪೌರತ್ವ ಪಡೆದಿರುವ ವ್ಯಕ್ತಿಯೊಬ್ಬರನ್ನು ಕೂಡ ಈ ಪ್ರಕರಣದ ತನಿಖೆಯಲ್ಲಿ ಒಳಗೊಳ್ಳಲಾಗಿದೆ. ಅವರ ಬಳಿ 1.2 ಕೋಟಿ ರೂಪಾಯಿ ಮೌಲ್ಯದ ದಾಖಲಾಗದ ಹಣ ಪತ್ತೆಯಾಗಿತ್ತು. ಇದು ವಿಜಿ ಸಿದ್ಧಾರ್ಥ ಅವರಿಗೆ ಸೇರಿದ್ದು ಎಂದು ಅವರು ಒಪ್ಪಿಕೊಂಡಿದ್ದರು.

ಹಣ ತಮ್ಮದೆಂದು ಒಪ್ಪಿಕೊಂಡಿದ್ದ ಸಿದ್ಧಾರ್ಥ

ಹಣ ತಮ್ಮದೆಂದು ಒಪ್ಪಿಕೊಂಡಿದ್ದ ಸಿದ್ಧಾರ್ಥ

ಇಲಾಖೆಯು ಪತ್ತೆ ಕಾರ್ಯಾಚರಣೆ ವೇಳೆ ಪರಿಣಾಮಕಾರಿ ಪುರಾವೆಗಳನ್ನು ಸಂಗ್ರಹಿಸಿದ ಬಳಿಕ ವಿಜಿ ಸಿದ್ಧಾರ್ಥ ಅವರು, 362.11 ಕೋಟಿ ರೂಪಾಯಿ ಹಾಗೂ 118.02 ಕೋಟಿ ರೂಪಾಯಿ ದಾಖಲೆ ಇಲ್ಲದ ಆದಾಯವು ತಮ್ಮ ಹಾಗೂ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಬಳಿ ಇರುವುದಾಗಿ ಒಪ್ಪಿಕೊಂಡಿದ್ದರು.

ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ?ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ?

ತೆರಿಗೆ ಪಾವತಿ ಮಾಡಿರಲಿಲ್ಲ

ತೆರಿಗೆ ಪಾವತಿ ಮಾಡಿರಲಿಲ್ಲ

ಐಟಿ ರಿಟರ್ನ್ ಸಲ್ಲಿಸಿದ್ದ ಸಿದ್ಧಾರ್ಥ ಅವರು ತಮ್ಮ ವೈಯಕ್ತಿಕ ಪ್ರಕರಣದಲ್ಲಿನ ಸುಮಾರು 35 ಕೋಟಿ ರೂಪಾಯಿಯನ್ನು ಹೊರತುಪಡಿಸಿ ಈ ಮೇಲೆ ಒಪ್ಪಿಕೊಂಡಿದ್ದ ಬಹಿರಂಗಪಡಿಸದ ಆದಾಯದ ಮೇಲೆ ತೆರಿಗೆ ಪಾವತಿ ಮಾಡಲು ಮುಂದಾಗಿರಲಿಲ್ಲ. ಅಲ್ಲದೆ, ಸಮೂಹ ಕಂಪೆನಿಗಳಲ್ಲಿ ಒಂದಾದ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಮರು ಆದಾಯದ ಮೇಲಿನ 14.5 ಕೋಟಿ ರೂಪಾಯಿ ಸೆಲ್ಫ್ ಅಸೆಸ್‌ಮೆಂಟ್ ಟ್ಯಾಕ್ಸ್ ಪಾವತಿಸಿರಲಿಲ್ಲ. ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ತನ್ನ ಭಾಗದ ಒಪ್ಪಿಕೊಂಡ ಆದಾಯದ ತೆರಿಗೆ ಪಾವತಿಗೆ ಮುಂದಾಗಿರಲಿಲ್ಲ.

ವರದಿ ಆಧಾರದಲ್ಲಿ ಕಾರ್ಯಾಚರಣೆ

ವರದಿ ಆಧಾರದಲ್ಲಿ ಕಾರ್ಯಾಚರಣೆ

2019ರ ಜನವರಿ 21ರಂದು ಪ್ರಮುಖ ಸುದ್ದಿಪತ್ರಿಕೆಗಳು ವಿಜಿ ಸಿದ್ಧಾರ್ಥ ಅವರು ತಮ್ಮ ಮತ್ತು ತಮ್ಮ ಕಂಪೆನಿಯ ನೇತೃತ್ವದ ಮೈಂಡ್ ಟ್ರೀ ಲಿ.ಯ ಈಕ್ವಿಟಿ ಷೇರುಗಳನ್ನು ಕೂಡಲೇ ಮಾರಾಟಕ್ಕೆ ಚಿಂತನೆ ನಡೆಸಿದ್ದಾರೆ ಎಂದು ವರದಿ ಮಾಡಿದ್ದವು. ಈ ವರದಿಯ ಆಧಾರದ ಮೇಲೆ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕಾರ್ಯವನ್ನು ತಕ್ಷಣ ನಡೆಸಲಾಯಿತು. ವಿಜಿ ಸಿದ್ಧಾರ್ಥ, ಅವರ ಕಾಫಿ ಡೇ ಎಂಟರ್‌ಪ್ರೈಸಸ್ ಮತ್ತು ಕಾಫಿ ಡೇ ಟ್ರೇಡಿಂಗ್ ಲಿ. ಮೈಂಡ್ ಟ್ರೀಯಲ್ಲಿ ಶೇ 21ರಷ್ಟು ಷೇರುಗಳನ್ನು ಹೊಂದಿರುವುದು ತಿಳಿದುಬಂದಿತು. ಇದರ ಜತೆಗೆ 2019 ಜನವರಿಯಲ್ಲಿ ಅಂತಿಮಗೊಳ್ಳಬೇಕಿದ್ದ ಷೇರುಗಳ ಮಾರಾಟದ ಒಪ್ಪಂದದ ಕುರಿತು ಸಹ ಮಾಹಿತಿ ದೊರಕಿತ್ತು.

ಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನ ಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನ

ಮೌಲ್ಯಮಾಪನ ಅರ್ಜಿ ಸಲ್ಲಿಸಿರಲಿಲ್ಲ

ಮೌಲ್ಯಮಾಪನ ಅರ್ಜಿ ಸಲ್ಲಿಸಿರಲಿಲ್ಲ

ಶೋಧ ಕಾರ್ಯಾಚರಣೆಯ ಬಳಿಕ ಬಾಕಿ ಉಳಿದ ಬಡ್ಡಿ ಮತ್ತು ಪೆನಾಲ್ಟಿ ರೂಪದಲ್ಲಿನ ತೆರಿಗೆ ನೂರಾರು ಕೋಟಿ ಮೌಲ್ಯದ್ದಾಗಿತ್ತು. ಇನ್ನೊಂದೆಡೆ, ಆದಾಯ ತೆರಿಗೆ ಪ್ರಕ್ರಿಯೆ ಇನ್ನೂ ಬಾಕಿ ಇರುವಾಗ ಯಾವುದೇ ಆಸ್ತಿಯ ವರ್ಗಾವಣೆ ಮಾಡುವ ಮೊದಲು ಶಾಸನಬದ್ಧ ಅನುಮತಿ ಅಡಿಯಲ್ಲಿ ಸಂಬಂಧಿಸಿದ ಮೌಲ್ಯಮಾಪನ ಅಧಿಕಾರಿ ಮುಂದೆ ಅವರು ಯಾವುದೇ ಮೌಲ್ಯಮಾಪನ ಅರ್ಜಿ ಸಲ್ಲಿಸಿರಲಿಲ್ಲ.

ಷೇರುಗಳ ಸ್ವಾಧೀನ

ಷೇರುಗಳ ಸ್ವಾಧೀನ

ಆದಾಯದ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ, ವಿಜಿ ಸಿದ್ಧಾರ್ಥ ಮತ್ತು ಕಾಫಿ ಡೇ ಎಂಟರ್‌ಪ್ರೈಸಸ್ ಮಾಲೀಕತ್ವದ ಮೈಂಡ್ ಟ್ರೀ ಲಿಮಿಟೆಡ್‌ನ 74,90,000 ಷೇರುಗಳನ್ನು ಆದಾಯ ತೆರಿಗೆ ಕಾಯ್ದೆಯ 281 ಬಿ ನಿಯಮದ ಅಡಿಯಲ್ಲಿ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿತ್ತು. ಇದು ಆದಾಯದ ಹಿತಾಸಕ್ತಿಯನ್ನು ರಕ್ಷಿಸುವ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ.

ಷೇರು ಮಾರಾಟಕ್ಕೆ ಷರತ್ತುಬದ್ಧ ಒಪ್ಪಿಗೆ

ಷೇರು ಮಾರಾಟಕ್ಕೆ ಷರತ್ತುಬದ್ಧ ಒಪ್ಪಿಗೆ

ಇದಕ್ಕೆ ಸಿದ್ಧಾರ್ಥ ಅವರು ಮೈಂಡ್ ಟ್ರೀ ಷೇರುಗಳನ್ನು ಬಿಡುಗಡೆಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಿರೀಕ್ಷಿತ ಬೇಡಿಕೆಗೆ ವಿರುದ್ಧವಾಗಿ ಕಾಫಿ ಡೇ ಸಂಸ್ಥೆಯ ಇತರೆ ಭದ್ರತಾ ಷೇರುಗಳ ಮೇಲೆ ನಿಯಂತ್ರಣ ಹೊಂದುವಂತೆ ಕೋರಿದ್ದರು. ಇದನ್ನು ಒಪ್ಪಿಕೊಂಡು ಫೆಬ್ರವರಿ 13ರಂದು ಮೈಂಡ್ ಟ್ರೀ ಷೇರುಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಷೇರುಗಳನ್ನು ಸಾಲದ ಮರುಪಾವತಿಗಾಗಿ ಮಾತ್ರವೇ ಬಳಸಬೇಕು ಎಂದು ನಿರ್ದಿಷ್ಟ ಷರತ್ತು ಹಾಕಲಾಗಿತ್ತು. ಇದಕ್ಕೆ ಪರ್ಯಾಯವಾಗಿ ಕಾಫಿ ಡೇ ಸಂಸ್ಥೆಯ 46,01,869 ಅನಿರ್ಬಂಧಿತ ಮತ್ತು 2,04,43,055 ನಿರ್ಬಂಧಿತ ಷೇರುಗಳನ್ನು ಫೆ. 13 ಮತ್ತು 14ರಂದು ವಶಕ್ಕೆ ಪಡೆದುಕೊಳ್ಳಲಾಗಿತ್ತು.

Array

Array

ಬಳಿಕ ಷೇರುದಾರರು ಮೈಂಡ್ ಟ್ರೀ ಷೇರುಗಳನ್ನು ಎಲ್&ಟಿ ಇನ್ಫೋಟೆಕ್ ಲಿಮಿಟೆಡ್‌ಗೆ ಫೆ. 28ರಂದು ಮಾರಾಟ ಮಾಡಿ 3,200 ಕೋಟಿ ರೂಪಾಯಿ ಪಡೆದಿದ್ದರು. ಇದರಲ್ಲಿ ಅವರು ಸುಮಾರು 3000 ಕೋಟಿ ರೂಪಾಯಿ ಸಾಲವನ್ನು ಮರುಪಾವತಿ ಮಾಡಿದ್ದರು. 154 ಕೋಟಿ ರೂಪಾಯಿಯನ್ನು ವೆಚ್ಚ ಆಧಾರಿರ ವರ್ಗಾವಣೆಗಳಿಗೆ ಮತ್ತು ಬಾಕಿ 46 ಕೋಟಿ ರೂಪಾಯಿಯನ್ನು ಕಾಫಿ ಡೇಯ ಸುಮಾರು 300 ಕೋಟಿ ರೂ ಅಂದಾಜು ಮ್ಯಾಟ್ ಲಿಯಾಬಿಲಿಟಿಯ ಮುಂಗಡ ತೆರಿಗೆಯ ಮೊದಲ ಕಂತಿನ ರೂಪದಲ್ಲಿ ಪಾವತಿಸಿದ್ದರು. 250 ಕೋಟಿ ರೂ. ಮ್ಯಾಟ್ ಲಿಯಾಬಿಲಿಟಿ ಬಾಕಿ ಮತ್ತು ತೆರಿಗೆ ಸಾಲದ ಹೆಚ್ಚಳದ ಆಧಾರದಲ್ಲಿ ಶೇ 40ಕ್ಕಿಂತಲೂ ಕಡಿಮೆ, ಅಂದರೆ 400 ಕೋಟಿ ತೆರಿಗೆ ಸಾಲದ ಸಂಭವನೀಯ ಮೊತ್ತವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಕಾಯ್ದೆಯ ನಿಮಯಕ್ಕೆ ಅನುಗುಣವಾಗಿ ಕ್ರಮ

ಕಾಯ್ದೆಯ ನಿಮಯಕ್ಕೆ ಅನುಗುಣವಾಗಿ ಕ್ರಮ

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸಂಗ್ರಹಿಸಿದ ವಿಶ್ವಾಸಾರ್ಹ ಪುರಾವೆಗಳ ಆಧಾರದಲ್ಲಿ ವ್ಯಕ್ತಿಯು ಒಪ್ಪಿಕೊಂಡ ಆದಾಯದಾಚೆ ವರಮಾನದ ಹಿತಾಸಕ್ತಿಗಳನ್ನು ರಕ್ಷಿಸಲು ಈ ರೀತಿ ತಾತ್ಕಾಲಿಕ ಸ್ವಾಧೀನವನ್ನು ಮಾಡಲಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆಯ ನಿಯಮಾವಳಿಗೆ ಅನುಗುಣವಾಗಿ ಕೆಲಸ ಮಾಡಿದೆ ಎಂದು ಅದು ಹೇಳಿದೆ.

English summary
The Income Tax Department has clarified about a note said to be written by VG Siddhartha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X