ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ್ನ, ಡಿಬಿಎಸ್‌ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ

|
Google Oneindia Kannada News

ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕನ್ನು, ಸಿಂಗಾಪುರ ಮೂಲದ ಡಿಬಿಎಸ್‌ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಒಪ್ಪಂದದ ಪ್ರಕಾರ, ಡಿಬಿಎಸ್‌ಗೆ 563 ಶಾಖೆಗಳು, 974 ಎಟಿಎಂಗಳು ಮತ್ತು ಚಿಲ್ಲರೆ ಹೊಣೆಗಾರಿಕೆಗಳಲ್ಲಿ 1.6 ಬಿಲಿಯನ್ ಫ್ರ್ಯಾಂಚೈಸ್ ದೊರೆತಿದೆ. 94 ವರ್ಷದಷ್ಟು ಹಳೆಯದಾದ ಎಲ್‌ವಿಎಸ್‌ ಬ್ಯಾಂಕ್ನಲ್ಲಿನ ಠೇವಣಿಗಳು ಡಿಬಿಎಸ್‌ ಇಂಡಿಯಾದ ಜೊತೆಗೆ ವಿಲೀನಗೊಳ್ಳಲಿದೆ.

52 ವಾರಗಳ ಕನಿಷ್ಠ ಮಟ್ಟಕ್ಕಿಳಿದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರು52 ವಾರಗಳ ಕನಿಷ್ಠ ಮಟ್ಟಕ್ಕಿಳಿದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರು

ಆರ್‌ಬಿಐ ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ಬ್ಯಾಂಕ್ ಅನ್ನು ನಿಷೇಧಕ್ಕೊಳಪಡಿಸಿತ್ತು. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಆರ್‌ಬಿಐ ನಿಷೇಧವನ್ನು ಹೇರಿತ್ತು. ಪರಿಣಾಮ ಬ್ಯಾಂಕಿನಲ್ಲಿ ಠೇವಣಿದಾರರ 25,000 ವಿತ್‌ಡ್ರಾ ಮಿತಿಯನ್ನು ಹೇರಲಾಯಿತು. ಆದಾಗ್ಯೂ ಗ್ರಾಹಕರ ಠೇವಣಿ ಸುರಕ್ಷಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

 Cabinet Has Okayed DBS Takeover of Lakshmi Vilas Bank

ಇದೀಗ ಡಿಸೆಂಬರ್ 16ರ ಗಡುವಿನ ಮೊದಲು ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ಸಮಯೋಚಿತವಾಗಿ ವಿಲೀನಗೊಳಿಸುವ ಕಾರ್ಯ ನಡೆದಿದೆ. ಈ ಮೂಲಕ ಭಾರತೀಯ ಬ್ಯಾಂಕ್‌ವೊಂದನ್ನು ವಿದೇಶಿ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಮೊದಲ ಉದಾಹರಣೆಯು ಇದಾಗಿದೆ.

ಇನ್ನು ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ನ ಎಲ್ಲಾ ಬ್ರ್ಯಾಂಚ್‌ಗಳು ನವೆಂಬರ್ 27ರಿಂದ ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ಆರ್‌ಬಿಐ ಟ್ವೀಟ್ ಮಾಡಿದೆ.

ಲಕ್ಷ್ಮೀ ವಿಲಾಸ್ ಬ್ಯಾಂಕ್ ಷೇರುಗಳು ಈಗಾಗಲೇ 52 ವಾರಗಳ ಕನಿಷ್ಠ ಮಟ್ಟದಲ್ಲಿದ್ದು, ಇಂದು ಶೇಕಡಾ 4.79ರಷ್ಟು ಏರಿಕೆಗೊಂಡು 7.65 ರೂಪಾಯಿಗೆ ವಹಿವಾಟು ಅಂತ್ಯಗೊಳಿಸಿದೆ.

English summary
The Cabinet has Okayed DBS India's Rescue of lakshmi vilas bank. Following the approval giving take over to singapore's biggest bank
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X